Rashmika Mandanna: ಕಿರಿಕ್ ಸಾನ್ವಿಗೆ ಅವಕಾಶಗಳ ಸರಮಾಲೆ: ಸ್ಟಾರ್​ ಕುಡಿಯ ಚಿತ್ರಕ್ಕೆ ರಶ್ಮಿಕಾ ನಾಯಕಿ

ಆದರೆ ಅತ್ತ ಸೂಪರ್ ಸ್ಟಾರ್​ಗಳ ಚಿತ್ರಗಳಿಗೆ ಸಹಿ ಮಾಡಿರುವ ಕೊಡಗಿನ ಬೆಡಗಿ, ಇತ್ತ ತಮಿಳಿನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ನಡುವೆ ಕನ್ನಡದ ಪೊಗರು ಸಿನಿಮಾದಲ್ಲೂ ಕಾಣಿಸಲಿದ್ದಾರೆ.

zahir | news18
Updated:June 30, 2019, 6:34 PM IST
Rashmika Mandanna: ಕಿರಿಕ್ ಸಾನ್ವಿಗೆ ಅವಕಾಶಗಳ ಸರಮಾಲೆ: ಸ್ಟಾರ್​ ಕುಡಿಯ ಚಿತ್ರಕ್ಕೆ ರಶ್ಮಿಕಾ ನಾಯಕಿ
@dredpic.pw
  • News18
  • Last Updated: June 30, 2019, 6:34 PM IST
  • Share this:
ಸ್ಯಾಂಡಲ್​ವುಡ್ ಸುಂದರಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್​ನಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿವೆ. ಅದು ಕೂಡ ತೆಲುಗಿನ ಸ್ಟಾರ್​ ನಟರುಗಳ ಚಿತ್ರಗಳಲ್ಲಿ ಎಂಬುದು ವಿಶೇಷ. ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ಚಿತ್ರಗಳ ಬಳಿಕ ಇದೀಗ ಯುವ ನಟ ಅಖಿಲ್ ಅಕ್ಕಿನೇನಿ ಚಿತ್ರಕ್ಕೆ ಕಿರಿಕ್ ಬೆಡಗಿ​ಗೆ ಆಫರ್ ಹೋಗಿದೆ ಎನ್ನಲಾಗಿದೆ.

'ಬೊಮ್ಮರಿಲ್ಲು' ಎಂಬ ಚೆಲ್ಲು ಚೆಲ್ಲಾದ ಚಿತ್ರ ನಿರ್ದೇಶಿಸಿದ ಭಾಸ್ಕರ್ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಖಿಲ್ ಹೊಸ ಅವತಾರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರದ ಮುದ್ದಾದ ಪಾತ್ರಕ್ಕಾಗಿ ನಿರ್ದೇಶಕರು ರಶ್ಮಿಕಾ ರ ಮನವೊಲಿಸುವ ಪ್ರಯತ್ನದಲ್ಲಿದ್ದಾರಂತೆ.

ಆದರೆ ಅತ್ತ ಸೂಪರ್ ಸ್ಟಾರ್​ಗಳ ಚಿತ್ರಗಳಿಗೆ ಸಹಿ ಮಾಡಿರುವ ಕೊಡಗಿನ ಬೆಡಗಿ, ಇತ್ತ ತಮಿಳಿನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ನಡುವೆ ಕನ್ನಡದ 'ಪೊಗರು' ಸಿನಿಮಾದಲ್ಲೂ ಕಾಣಿಸಲಿದ್ದಾರೆ. ಟಾಲಿವುಡ್​ನಲ್ಲಿ 'ಸರಿಲೇರು ನೀಕೆವ್ವರು', 'ಬೀಷ್ಮ' ಸೇರಿದಂತೆ ಹಲವು ಚಿತ್ರಗಳಿಗೆ ಕಿರಿಕ್ ಸಾನ್ವಿ ಓಕೆ ಅಂದಿದ್ದಾರೆ. ಇದರ ನಡುವೆ ಅಕ್ಕಿನೇನಿ ಕುಡಿ ಚಿತ್ರದಿಂದಲೂ ಬುಲಾವ್ ಬಂದಿದೆ.ಈಗಾಗಲೇ ರಶ್ಮಿಕಾ ಮಂದಣ್ಣ ಟಾಲಿವುಡ್-ಕಾಲಿವುಡ್​ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಹೀಗಾಗಿ ಅಖಿಲ್ ಮುಂದಿನ ಸಿನಿಮಾದಲ್ಲಿ ಅಭಿನಯಿಸಲು 'ಯಜಮಾನ'ನ ಕಾವೇರಿ ಒಪ್ಪಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: ಮೆಗಾಸ್ಟಾರ್​ಗೆ ಮಾಣಿಕ್ಯನ ಸಾಥ್: ದಾಖಲೆ ಮೊತ್ತಕ್ಕೆ ಸೈರಾ ಚಿತ್ರದ ಹಕ್ಕು ಮಾರಾಟ
First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading