ಚೊಚ್ಚಲ ಕಾಲಿವುಡ್ ಸಿನಿಮಾ ಬಿಡುಗಡೆ ಮುನ್ನವೇ ಸ್ಟಾರ್​ ನಟನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ!

ಇದರ ನಡುವೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

zahir | news18
Updated:May 26, 2019, 3:34 PM IST
ಚೊಚ್ಚಲ ಕಾಲಿವುಡ್ ಸಿನಿಮಾ ಬಿಡುಗಡೆ ಮುನ್ನವೇ ಸ್ಟಾರ್​ ನಟನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ
zahir | news18
Updated: May 26, 2019, 3:34 PM IST
ಕರುನಾಡ ಕ್ರಶ್, ಸೌತ್ ಇಂಡಿಯನ್ ಸಿನಿ ಪ್ರಿಯರ ಸ್ವಪ್ನ ಸುಂದರಿ ರಶ್ಮಿಕಾ ಮಂದಣ್ಣ ಮತ್ತೊಂದು ಬಿಗ್​ ಬಜೆಟ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಾಲಿವುಡ್ ಇಳಯ​ ದಳಪತಿ ವಿಜಯ್ ಅಭಿನಯಿಸಲಿರುವ 64ನೇ ಸಿನಿಮಾದಲ್ಲಿ ಕಿರಿಕ್ ಬೆಡಗಿ ನಾಯಕಿಯಾಗಲಿದ್ದಾರಂತೆ.

ಇನ್ನೂ ಹೆಸರಿಡದ ಕಾರ್ತಿ ಅಭಿನಯದ ಚಿತ್ರದ ಮೂಲಕ ಕಾಲಿವುಡ್​ಗೆ ಪಾದರ್ಪಣೆಗೈದಿರುವ ರಶ್ಮಿಕಾಗೆ ಚೊಚ್ಚಲ ತಮಿಳು ಚಿತ್ರ ಬಿಡುಗಡೆಗೆ ಮುನ್ನವೇ ಮತ್ತೊಂದು ಸಿನಿಮಾದಿಂದ ಆಫರ್ ಸಿಕ್ಕಿದೆ. ಈ ಹಿಂದೆಯೇ ಸ್ಯಾಂಡಲ್​ವುಡ್ ಸಾನ್ವಿ ವಿಜಯ್ ನಟನೆಯ 63ನೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

ಆದರೆ ಈ ಸುದ್ದಿಯನ್ನು ಅಲ್ಲೆಗೆಳೆದು ನಿರ್ದೇಶಕ ಅಟ್ಲಿ ಗಾಸಿಪ್​ಗಳಿಗೆ ಪುಲಿಸ್ಟಾಪ್ ಇಟ್ಟಿದ್ದರು. ಆದರೆ ಈ ಬಾರಿ ವಿಜಯ್​ಗೆ ಕನ್ನಡದ ಬೆಡಗಿ ನಾಯಕಿ ಎಂಬುದು ಕಂಫರ್ಮ್ ಎನ್ನುತ್ತಿವೆ ಕಾಲಿವುಡ್ ಮೂಲಗಳು. 'ಮಹಾನಗರಂ' ಖ್ಯಾತಿ ಲೊಕೇಶ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ಇಳಯ ದಳಪತಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ. ಇನ್ನು ಕೊಡಗಿನ ಚೆಂದುಳ್ಳಿ ಚೆಲುವೆಯೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ಚಿತ್ರತಂಡ ಮುಗಿಸಿದ್ದು, ಕಾಲಿವುಡ್​ನ ಮ್ಯಾಚೊ ಹೀರೋ ಜೊತೆ ಕಾಣಿಸಿಕೊಳ್ಳಲು ರಶ್ಮಿಕಾ ಕಾತುರರಾಗಿದ್ದಾರೆ ಎಂದು ವರದಿಯಾಗಿದೆ.

ಕನ್ನಡದ 'ಕಿರಿಕ್ ಪಾರ್ಟಿ'ಯೊಂದಿಗೆ ಸಿನಿ ಕೆರಿಯರ್ ಆರಂಭಿಸಿದ ರಶ್ಮಿಕಾ, ಬಳಿಕ 'ಚಲೊ' ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಆದರೆ ವಿಜಯ್ ದೇವರಕೊಂಡ ಜತೆಗಿನ 'ಗೀತಾ ಗೋವಿಂದಂ' ಚಿತ್ರ ರಶ್ಮಿಕಾರನ್ನು ತಮಿಳು ಮತ್ತು ತೆಲುಗಿನಲ್ಲಿ ಹಾಟ್ ನಟಿಯರ ಸಾಲಿನಲ್ಲಿ ತಂದು ನಿಲ್ಲಿಸಿತ್ತು. ಇದರ ಬೆನ್ನಲ್ಲೇ ಬ್ಯಾಕ್​ ಟು ಬ್ಯಾಕ್ ಅವಕಾಶ ಪಡೆದ ರಶ್ಮಿಕಾ ಸದ್ಯ 'ಡಿಯರ್ ಕಾಮ್ರೇಡ್​' ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಇನ್ನು ಅಲ್ಲು ಅರ್ಜುನ್, ಪ್ರಿನ್ಸ್​ ಮಹೇಶ್ ಬಾಬುರಂತಹ ಸೂಪರ್ ಸ್ಟಾರ್​ಗಳ ಚಿತ್ರದಲ್ಲೂ ಮಿಂಚಲು 'ಕಿರಿಕ್ ಸಾನ್ವಿ' ತುದಿಗಾಲಲ್ಲಿ ನಿಂತಿದ್ದಾರೆ.ಇದರ ನಡುವೆ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ವಿಜಯ್ ಜೊತೆಯು ಅವಕಾಶ ಗಿಟ್ಟಿಸಿ ಕಾಲಿವುಡ್​ನ ಇತರೆ ನಟಿಯರ ಕಣ್ಣು ಕೆಂಪಾಗುವಂತೆ ಮಾಡಿರುವ ರಶ್ಮಿಕಾ ಶೀಘ್ರದಲ್ಲೇ ಬಾಲಿವುಡ್​ನತ್ತ ಕೂಡ ಮುಖ ಮಾಡಲಿದ್ದಾರೆ ಎಂಬ ಸುದ್ದಿಯೊಂದಿದೆ. ಒಟ್ಟಿನಲ್ಲಿ ಕನ್ನಡದ ನಟಿಯೊಬ್ಬರ ಡೇಟ್​ಗಾಗಿ ಇದೀಗ ಟಾಲಿವುಡ್, ಕಾಲಿವುಡ್ ಸ್ಟಾರ್ ನಟರುಗಳೂ ಸಹ ಕಾದು ಕುಳಿತಿರುವುದು ಮಾತ್ರ ಸುಳ್ಳಲ್ಲ.
Loading...

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...