Top Tucker: ಹಿಂದೆಂದೂ ಕಾಣಿಸಿಕೊಳ್ಳದ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ: ರಿಲೀಸ್​ ಆಯ್ತು ಟಾಪ್​ ಟಕ್ಕರ್​ ಮ್ಯೂಸಿಕ್​ ವಿಡಿಯೋದ ಟೀಸರ್​

Rashmika Mandanna: ಬಹಳ ದಿನಗಳಿಂದ ರಶ್ಮಿಕಾ ಅಭಿನಯದ ಹಿಂದಿ ವಿಡಿಯೋ ಹಾಡಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈಗ ಪ್ರೇಕ್ಷಕರ ಕುತೂಹಲಕ್ಕೆ ಅಲ್ಪ ವಿರಾಮ ಬಿದ್ದಂತಾಗಿದೆ.  ಬಾಲಿವುಡ್ ರ‍್ಯಾಪರ್​​ ಬಾದ್​ ಶಾರ (Rapper Bad shah ) ಟಾಪ್​ ಟಕ್ಕರ್​ (Top Tucker) ಮ್ಯೂಸಿಕ್​ ವಿಡಿಯೋದ ಟೀಸರ್​ ರಿಲೀಸ್ ಆಗಿದೆ. ಈ ಕುರಿತಾಗಿ ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದಾರೆ.

ಟಾಪ್​ ಟಕ್ಕರ್​ ವಿಡಿಯೋ ಹಾಡಿನ ಪೋಸ್ಟರ್​

ಟಾಪ್​ ಟಕ್ಕರ್​ ವಿಡಿಯೋ ಹಾಡಿನ ಪೋಸ್ಟರ್​

  • Share this:
ಸ್ಯಾಂಡಲ್​ವುಡ್​ನ ಕಿರಿಕ್​ ಬ್ಯೂಟಿ ಟಾಲಿವುಡ್​ ನಂತರ ಬಾಲಿವುಡ್​ಗೆ ಕಾಲಿಟ್ಟಿರುವ ವಿಷಯ ತಿಳಿದಿದೆ. ಬಾಲಿವುಡ್​ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗುವ ಮುನ್ನವೇ ರಶ್ಮಿಕಾ ಮಂದಣ್ಣ (Rashmika Mandanna) ಹಿಂದಿ ಮ್ಯೂಸಿಕ್​ ವಿಡಿಯೋ ಹಾಡಿನ ಮೂಲಕ ಹಿಂದಿ ಸಿನಿ ಪ್ರಿಯರಿಗೆ ಪರಿಚಯವಾಗಲಿದ್ದಾರೆ. ಈ ಹಿಂದೆಯೇ ಹೇಳಿದಂತೆ ರಶ್ಮಿಕಾ ಮಂದಣ್ಣ ಬಾಲಿವುಡ್ ರ‍್ಯಾಪರ್​​ ಬಾದ್​ ಶಾರ (Rapper Bad shah ) ಟಾಪ್​ ಟಕ್ಕರ್​ (Top Tucker) ಮ್ಯೂಸಿಕ್​ ವಿಡಿಯೋದಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲವು ತಿಂಗಳ ಹಿಂದೆಯೇ ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಬಾದ್​ ಶಾ ಜೊತೆ ರಶ್ಮಿಕಾ ಸಖತ್​ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡಿನ ಹಲವಾರು ಪೋಸ್ಟರ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ. ರಶ್ಮಿಕಾ ಅವರ ವಿಭಿನ್ನ ಲುಕ್​ ಲಿಲ್ಲಿ ಫ್ಯಾನ್ಸ್​ಗಳಲ್ಲಿನ ನಿರೀಕ್ಷೆ ಹೆಚ್ಚಿಸಿದೆ. 

ಬಹಳ ದಿನಗಳಿಂದ ರಶ್ಮಿಕಾ ಅಭಿನಯದ ಹಿಂದಿ ವಿಡಿಯೋ ಹಾಡಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈಗ ಪ್ರೇಕ್ಷಕರ ಕುತೂಹಲಕ್ಕೆ ಅಲ್ಪ ವಿರಾಮ ಬಿದ್ದಂತಾಗಿದೆ.  ಬಾಲಿವುಡ್ ರ‍್ಯಾಪರ್​​ ಬಾದ್​ ಶಾರ (Rapper Bad shah ) ಟಾಪ್​ ಟಕ್ಕರ್​ (Top Tucker) ಮ್ಯೂಸಿಕ್​ ವಿಡಿಯೋದ ಟೀಸರ್​ ರಿಲೀಸ್ ಆಗಿದೆ. ಈ ಕುರಿತಾಗಿ ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದಾರೆ.

Top top top tucker.. 💃🏻 this is so exciting.. 1st time I’ve done something like this.. 💃🏻 and I’ve got to do it with the best in their respective industries.. yaaaaay!! So exciting.. releasing soon you guys!! 🥳 https://t.co/giiEcXlJJy pic.twitter.com/Q8U3cr6cqCಬಾದ್​ ಶಾ ಹಾಗೂ ವಿಘ್ನೇಶ್​ ಶಿವನ್​ ಅವರು ಬರೆದಿರುವ ಸಾಹಿತ್ಯಕ್ಕೆ ಬಾದ್​ ಶಾ, ಜೋನಿತಾ ಗಾಂಧಿ ಹಾಗೂ ಯುವನ್​ ಶಂಕರ್ ರಾಜಾ ದನಿಯಾಗಿದ್ದಾರೆ. ಸುಮಿತ್ ಸಿಂಗ್​ ನಿರ್ಮಾಣದ ಈ ವಿಡಿಯೋ ಹಾಡಿನಲ್ಲಿ ರಶ್ಮಿಕಾ ಸಖತ್​ ವಿಭಿನ್ನವಾಗಿ ಹಾಗೂ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ಹಿಂದೆ ಕಾಣಿಸಿಕೊಳ್ಳದ ರೀತಿಯಲ್ಲಿ ನಟಿಸಿರುವುದಾಗಿ ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.ಇನ್ನೇನು ಕೆಲವೇ ದಿನಗಳಲ್ಲಿ ಈ ಮ್ಯೂಸಿಕ್​ ವಿಡಿಯೋ ರಿಲೀಸ್​ ಆಗಲಿದೆ. ಈ ಮೂಲಕ ರಶ್ಮಿಕಾ ಹಿಂದಿ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಇನ್ನು ಈ ಹಿಂದೆ ಬಾದ್​ ಶಾ ಮಾಡುವ ಮ್ಯೂಸಿಕ್​ ವಿಡಿಯೋಗಳು ಸಖತ್​ ವೈರಲ್​ ಆಗಿದ್ದು ಸೂಪರ್​ ಹಿಟ್​ ಆಗಿವೆ.

ಸಿದ್ಧಾರ್ಥ್​ ಮಲ್ಹೋತ್ರ ಜತೆ ರಶ್ಮಿಕಾ ನಟಿಸುತ್ತಿರುವ ಮಿಷನ್​ ಮಜ್ನು ಹಿಂದಿ ಸಿನಿಮಾದ ಮುಹೂರ್ತ ಸಹ ನೆರೆವೇರಿದೆ. ಸಿದ್ದಾರ್ಥ್ ಈಗಾಗಲೇ ಶೂಟಿಂಗ್​ನಲ್ಲಿ ಭಾಗಿಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಶ್ಮಿಕಾ ಸಹ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಬಾಲಿವುಡ್​ ಸಿನಿಮಾ ಇದಾಗಿದೆ.ರಶ್ಮಿಕಾ ಮಂದಣ್ಣ ಅಭಿನಯದ ತಮಿಳಿನ ಸುಲ್ತಾನ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಅಲ್ಲದೆ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ನಟಿಸಿರುವ ಪೊಗರು ಸಿನಿಮಾ ಇದೇ ತಿಂಗಳು 19ರಂದು ರಿಲೀಸ್​ ಆಗಲಿದೆ. ರಶ್ಮಿಕಾ ಈಗಾಗಲೇ ಪೊಗರು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ಬೆಂಗಳೂರಿಗೂ ಬಂದಿದ್ದಾರೆ ಕಿರಿಕ್​ ಬ್ಯೂಟಿ.
Published by:Anitha E
First published: