Rashmika Mandanna: ತೆರೆಗೆ ಬರೋಕೆ ರೆಡಿಯಾಯ್ತು ರಶ್ಮಿಕಾರ ಮತ್ತೊಂದು ಸಿನಿಮಾ.. ಈ ಸಲನೂ ಗೆಲುವೇ ಅಂತಿದ್ದಾರೆ ಫ್ಯಾನ್ಸ್​!

ರಶ್ಮಿಕಾ ಮಂದಣ್ಣ(Rashmika Mandanna) ಈ ಸಿನಿಮಾದ ನಾಯಕಿ. ಜನಪ್ರಿಯ ಹಿರಿಯ ನಟಿಯರಾದ ಖುಷ್ಬು , ರಾಧಿಕಾ ಶರತ್ ಕುಮಾರ್ ಮತ್ತು ಊರ್ವಶಿ ಅವರಿಗೂ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ವೆನ್ನೆಲ ಕಿಶೋರ್, ರವಿ ಶಂಕರ್, ಸತ್ಯ ಮತ್ತು ಪ್ರದೀಪ್ ರಾವತ್ ಮುಂತಾದವರು ಕೂಡ ಅಭಿನಯಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ, ಶರ್ವಾನಂದ್

ರಶ್ಮಿಕಾ ಮಂದಣ್ಣ, ಶರ್ವಾನಂದ್

  • Share this:
ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಶರ್ವಾನಂದ್(Sharwanand) ಅಭಿನಯದ ಸಿನಿಮಾ ‘ಆಡಾವಳ್ಳು ಮೀಕು ಜೋಹಾರ್ಲು’(Aadavallu Meeku Johaarlu)ವನ್ನು ಅಭಿಮಾನಿಗಳು ಅತ್ಯಂತ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಮೊದಲ ಹಾಡು(Single Song) 2022ರ ಫೆಬ್ರವರಿ 4 ರಂದು ಬಿಡುಗಡೆ ಆಗಿದೆ. ದೇವಿ ಶ್ರೀ ಪ್ರಸಾದ್(Devi Sri Prasad,) ಅವರು ಸಂಯೋಜಿಸಿರುವ , ಈ ಲಿರಿಕಲ್ ವಿಡಿಯೋ(Lyrical Video) ಬಿಡುಗಡೆ ಆಗಿದೆ. ಚಿತ್ರದ ತಯಾರಕರು ಕೂಡ ಚಿತ್ರದ ವಿಶೇಷ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಈ ವಿಶೇಷ ಪೋಸ್ಟರ್‌ನಲ್ಲಿ ಶರ್ವಾನಂದ್ ‘ಆಡಾವಳ್ಳು ಮೀಕು ಜೋಹಾರ್ಲು’ ಚಿತ್ರದ ಹಾಡಿನ ದೃಶ್ಯವೊಂದಕ್ಕೆ ಸಂತೋಷದಿಂದ ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಕಾಣಬಹುದು. ‘ಆಡಾವಳ್ಳು ಮೀಕು ಜೋಹಾರ್ಲು’ ಸಿನಿಮಾವನ್ನು ಕಿಶೋರ್ ತಿರುಮಲಾ(Kishor Tirumala) ಅವರು ನಿರ್ದೇಶಿಸಿದ್ದಾರೆ. ಸುಧಾಕರ್ ಚೆರುಕುರಿ ಈ ಚಿತ್ರದ ನಿರ್ಮಾಪಕರು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ‘ಆಡಾವಳ್ಳು ಮೀಕು ಜೋಹಾರ್ಲು’ ಚಿತ್ರ ನಿರ್ಮಾಣಗೊಳ್ಳುತ್ತಿದೆ.

ರಶ್ಮಿಕಾ ಮಂದಣ್ಣ(Rashmika Mandanna) ಈ ಸಿನಿಮಾದ ನಾಯಕಿ. ಜನಪ್ರಿಯ ಹಿರಿಯ ನಟಿಯರಾದ ಖುಷ್ಬು , ರಾಧಿಕಾ ಶರತ್ ಕುಮಾರ್ ಮತ್ತು ಊರ್ವಶಿ ಅವರಿಗೂ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ವೆನ್ನೆಲ ಕಿಶೋರ್, ರವಿ ಶಂಕರ್, ಸತ್ಯ ಮತ್ತು ಪ್ರದೀಪ್ ರಾವತ್ ಮುಂತಾದವರು ಕೂಡ ಅಭಿನಯಿಸುತ್ತಿದ್ದಾರೆ.


ಫೆಬ್ರವರಿ 25ಕ್ಕೆ ಸಿನಿಮಾ ರಿಲೀಸ್!

ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಜಿತ್ ಸಾರಂಗ್ ಅವರು ಇದಕ್ಕೆ ಸಿನಿಮಾಟೋಗ್ರಾಫರ್ ಆಗಿ ಮತ್ತು ಶ್ರೀಕರ್ ಪ್ರಸಾದ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಆಡಾವಳ್ಳು ಮೀಕು ಜೋಹಾರ್ಲು ಸಿನಿಮಾವನ್ನು, 2022 ರ ಫೆಬ್ರವರಿ 25 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಚಿತ್ರದ ಮೊದಲ ಹಾಡು ಬಿಡುಗಡೆಯ ಜೊತೆಗೆ ಜೊತೆಗೆ ಅಂದರೆ ಸದ್ಯದಲ್ಲೇ ಸಿನಿಮಾದ ಪ್ರಚಾರಕ್ಕೆ ಸಂಬಂಧಪಟ್ಟ ಕೆಲಸಗಳು ಕೂಡ ಆರಂಭಗೊಂಡಿದೆ.

ಇದನ್ನೂ ಓದಿ: ಬಾಲಿವುಡ್ ಚೆಲುವೆಯರು ಬಳಸುವ ಫೇಮಸ್ ಡೇಟಿಂಗ್ ಆ್ಯಪ್​ ಇದೇ ನೋಡಿ

ತೆಲುಗು ಸಿನಿಮಾಗಳಲ್ಲಿ ಬ್ಯುಸಿ ರಶ್ಮಿಕಾ ಮಂದಣ್ಣ!

ನ್ಯಾಷನಲ್ ಕ್ರಶ್ ಎಂದೇ ಜನಪ್ರಿಯರಾಗಿರುವ ಕಿರಿಕ್ ಪಾರ್ಟಿ ಚೆಲುವೆ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲ ಸಮಯದ ಹಿಂದೆಯಷ್ಟೇ ಬಿಡುಗಡೆ ಆಗಿದ್ದ , ನಟ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ಅವರು ಅಭಿನಯಿಸಿದ್ದ ಪುಷ್ಪ ಚಿತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಆ ಚಿತ್ರದ  ಸಾಮಿ ಹಾಡು ರಶ್ಮಿಕಾರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ, ಈ ನಡುವೆ ಬಾಲಿವುಡ್‍ನಲ್ಲಿ ತಮ್ಮ ಸಿನಿಮಾ ಪಯಣವನ್ನು ಆರಂಭಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಕರೀನಾ ಸ್ನೇಹಿತನಿಗೆ ಡ್ರೈವರ್​​ ಜೊತೆ ಕೂತು ಊಟ ಮಾಡು ಅಂದಿದ್ರಂತೆ ಅವ್ರ ಅಪ್ಪ!

ಬಾಲಿವುಡ್​ನಲ್ಲೂ ರಶ್ಮಿಕಾ ಮಂದಣ್ಣ ಕಮಾಲ್​!

ಈ ಹಿಂದೆ ಅವರು ರ‍್ಯಾಪರ್ ಬಾದ್‍ಶಾ ಜೊತೆ ಟಾಪ್ ಟಕ್ಕರ್ ಎಂಬ ಪಾಪ್ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಟಾಪ್ ಟಕ್ಕರ್ ಹಾಡಿನಲ್ಲಿ ವಿಭಿನ್ನ ಲುಕ್‍ಗಳಲ್ಲಿ ಕಾಣಿಸಿಕೊಂಡು ರಶ್ಮಿಕಾ ಪ್ರೇಕ್ಷಕರ ಮನಗೆದ್ದಿದ್ದರು. ಅವರ ಬಿಳಿ ಪಂಚೆಯ ಲುಕ್ ಅಂತೂ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಇದೀಗ ತಮ್ಮ ಮೊದಲನೆಯದಾಗಿ ಅವರು ನಟ ಸಿದ್ದಾರ್ಥ್ ಮಲ್ಹೋತ್ರ ಅವರ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಆ ಚಿತ್ರವನ್ನು ಶಂತನು ಬಾಗ್ಚಿ ನಿರ್ದೇಶಿಸುತ್ತಿದ್ದಾರೆ.

ಮೇ 13ರಂದು ಬಿಡುಗಡೆಯಾಗಲಿದೆ ಮಿಷನ್​ ಮಜ್ನು!

ಮಿಷನ್ ಮಜ್ನು ಸಿನಿಮಾ 2022 ರ ಮೇ 13 ರಂದು ತೆರೆ ಕಾಣಲಿದೆ. ಬಾಲಿವುಡ್‍ನ ಮೇರು ನಟ ಅಮಿತಾಬ್ ಬಚ್ಚನ್ ಅವರ ಜೊತೆಯೂ ಕೂಡ ಅಭಿನಯಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ ರಶ್ಮಿಕಾ. ಅವರು ಬಿಗ್ ಬಿ ಜೊತೆಗೆ ಗುಡ್ ಬೈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
Published by:Vasudeva M
First published: