ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದಾರೆ. ಪ್ರೇಮಿಗಳ ದಿನಾಚರಣೆಯ (Valentines day) ಮುನ್ನಾದಿನ ನನ್ನ ಪ್ರೇಮಿ ಯಾರು ಹೇಳಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದ ನಟಿ (Actress) ಈಗ ಮತ್ತೊಂದು ಅಚ್ಚರಿ ಕೊಟ್ಟಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಂದರ್ಭ ನಟಿ ಬೆಡ್ರೂಂನಿಂದಲೇ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಫ್ಯಾನ್ಸ್ (Fans) ಜೊತೆ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದು ಇದರಲ್ಲಿ ನಟಿ ಬೆಡ್ ಮೇಲೆ ಕೆಲವು ಖುಷಿಯ ಕ್ಷಣಗಳನ್ನು ಎಂಜಾಯ್ ಮಾಡುವುದನ್ನು ಕಾಣಬಹುದು.
ನಮ್ಮಿಂದ ನಿಮಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ
ನಟಿ ವಿಡಿಯೋವನ್ನು ಶೇರ್ ಮಾಡಿ ನಮ್ಮಿಂದ ನಿಮಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ನಟಿಯ ವಿಡಿಯೋಗೆ ಪೋಸ್ಟ್ ಮಾಡಿದ 16 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಆಗಿದೆ.
ವಿಡಿಯೋ ನೋಡಿದ ಬಹಳಷ್ಟು ಜನರಿ ಇದಕ್ಕೆ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ರಶ್ಮಿಕಾ ಅವರ ವಿಡಿಯೋ ನೋಡಿ, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿಯನ್ನು ನೋಡಿ ಸಾಕಾಯ್ತು. ನೀವು ವಿಜಯ್ ಬೇಗ ಮದುವೆಯಾಗಿ ಎಂದು ಬೇಡಿಕೆ ಇಟ್ಟಿದ್ದಾರೆ.
ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಸ್ಕ್ರೀನ್ ಸ್ಪೇಸ್ ಕಮ್ಮಿ ಇದ್ಯಂತೆ
ಪುಷ್ಪ ಪಾರ್ಟ್ 2 ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ನಿರ್ದೇಶಕ ಸುಕುಮಾರ್ ಚಿತ್ರವನ್ನು ಅದ್ಧೂರಿಯಾಗಿ ರೆಡಿ ಮಾಡುತ್ತಿದ್ದಾರೆ. ಇದೀಗ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಸ್ಕ್ರೀನ್ ಸ್ಪೇಸ್ ಕಡಿಮೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
View this post on Instagram
ನಿರ್ದೇಶಕ ಸುಕುಮಾರ್ ಪುಷ್ಪ 2 ಚಿತ್ರವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮ್ಮ ಕ್ರಿಯೇಟಿವಿಟಿಗೆ ಮತ್ತಷ್ಟು ಕೆಲಸ ಕೊಟ್ಟು ಪಾತ್ರಗಳನ್ನು ರಚಿಸಿದ್ದಾರೆ. ಇದೀಗ ಸುಕುಮಾರ್ ರಶ್ಮಿಕಾ ಮಂದಣ್ಣ ಶಾಕ್ ಕೊಟ್ಟಿದ್ದಾರೆ. ಶ್ರೀವಲ್ಲಿ ಸ್ಕ್ರೀನ್ ಸ್ಪೇಸ್ ಕಡಿಮೆ ಮಾಡಿದ್ದಾರಂತೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ಪುಷ್ಪ ಮೊದಲ ಭಾಗದೊಂದಿಗೆ ಪ್ಯಾನ್ ಇಂಡಿಯಾ ಕ್ರೇಜ್ ಹುಟ್ಟಿ ಹಾಕಿದ್ದಾರೆ.
ಬಿಟೌನ್ ನಲ್ಲೂ ಪುಷ್ಪಾ ಭರ್ಜರಿ ಸದ್ದು ಮಾಡಿದೆ. ಬನ್ನಿ ಮಾಸ್ ಲುಕ್ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರನ್ನು ಸೆಳೆದಿತ್ತು.
ಆದರೆ ಇದೀಗ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರವನ್ನು ಸುಕುಮಾರ್ ಸ್ವಲ್ಪ ಕಡಿಮೆ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಅಲ್ಲು ಅರ್ಜುನ್ ರೂಲಿಂಗ್ ಮತ್ತಷ್ಟು ಹೆಚ್ಚಾಗಲಿದೆ. ಸದ್ಯ ಈ ಪುಷ್ಪ 2 ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಈ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಬನ್ನಿ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಗಿಫ್ಟ್ ನೀಡಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ವೈಜಾಗ್ ಶೆಡ್ಯೂಲ್ ಮುಗಿಸಿರುವ ಸುಕುಮಾರ್ ಮುಂದಿನ ಶೆಡ್ಯೂಲ್ನನ್ನು ಹೈದರಾಬಾದ್ ನಲ್ಲಿ ಪ್ಲಾನ್ ಮಾಡುತ್ತಿದ್ದಾರೆ. ಇದೇ ವೇಳೆ ರಶ್ಮಿಕಾ ಪಾತ್ರಕ್ಕೆ ಸಂಬಂಧಿಸಿದ ಪ್ರಮುಖ ದೃಶ್ಯಗಳ ಚಿತ್ರೀಕರಣ ಕೂಡ ನಡೆಯಲಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಅಲ್ಲು ಅರ್ಜುನ್ಗೆ ಪ್ಯಾನ್ ವರ್ಲ್ಡ್ ಕ್ರೇಜ್ ಹುಟ್ಟುಹಾಕಲು ಸುಕುಮಾರ್ ಪ್ಲಾನ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ