ಗೋವಾದಲ್ಲಿ ಖರೀದಿಸಿದ ಹೊಸ ಮನೆಯ ಫೋಟೋ ಶೇರ್​ ಮಾಡಿದ Rashmika Mandanna

ಸ್ಯಾಂಡಲ್​ವುಡ್​ ಸಾನ್ವಿ ರಶ್ಮಿಕಾ ಮಂದಣ್ಣ ಅವರು ಗೋವಾದಲ್ಲಿ ಮನೆ ಖರೀದಿಸಿದ್ದಾರೆ. ಈ ವಿಷಯವನ್ನು ಅಭಿಮಾನಿಗಳೊಂದಿಗೆ ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಹೌದು, ತಮ್ಮ ಗೋವಾದ ಮನೆಯ ಹೊರಾಂಗಣದ ಫೋಟಟೋವನ್ನು ರಶ್ಮಿಕಾ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.

ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ

ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ

  • Share this:
ಕೊರೋನಾ (Corona) ಕಾಲದಲ್ಲಿ ಇಡೀ ಚಿತ್ರರಂಗವೇ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊರೋನಾ ಇದ್ದರೂ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮಾತ್ರ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಾ ಬ್ಯುಸಿಯಾಗಿದ್ದರು. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಾ ರಶ್ಮಿಕಾ ಕೈ ತುಂಬಾ ಸಂಪಾದಿತ್ತಿದ್ದಾರೆ. ಈಗಾಗಲೇ ಹೈದರಾಬಾದಿನಲ್ಲಿ ಸ್ವಂತ ಮನೆ ಹೊಂದಿರುವ ಈ ನಟಿ ಇತ್ತೀಚೆಗಷ್ಟೆ ಮುಂಬೈನಲ್ಲೂ ಸ್ವಂತ ಮನೆ  (New Own House) ಖರೀದಿಸಿ ಸುದ್ದಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ರಶ್ಮಿಕಾ ಮತ್ತೊಂದು ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರು ತಮ್ಮ ಹೊಸ ಮನೆಯ ಪುಟ್ಟ ಝಲಕ್ ಅನ್ನು ನೆಟ್ಟಿಗರಿಗೆ ತೋರಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹೊಸ ಮನೆಯ ಚಿತ್ರವನ್ನು ಹಂಚಿಕೊಂಡಿದ್ದು ಸುದ್ದಿಯಾಗಿದ್ದಾರೆ ಕಿರಿಕ್ ಬ್ಯೂಟಿ. 

ಸ್ಯಾಂಡಲ್​ವುಡ್​ ಸಾನ್ವಿ ರಶ್ಮಿಕಾ ಮಂದಣ್ಣ ಅವರು ಗೋವಾದಲ್ಲಿ ಮನೆ ಖರೀದಿಸಿದ್ದಾರೆ. ಈ ವಿಷಯವನ್ನು ಅಭಿಮಾನಿಗಳೊಂದಿಗೆ ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಹೌದು, ತಮ್ಮ ಗೋವಾದ ಮನೆಯ ಹೊರಾಂಗಣದ ಫೋಟಟೋವನ್ನು ರಶ್ಮಿಕಾ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.

Rashmika Mandannas New home in Goa, Rashmikas goa home photos, Rashmika Mandanna, Rashmika Mandanna Movie, Rashmika Mandanna Home, Goa, Tollywood, ರಶ್ಮಿಕಾ ಮಂದಣ್ಣ, ರಶ್ಮಿಕಾ ಮಂದಣ್ಣ ಹೊಸ ಸಿನಿಮಾ, ರಶ್ಮಿಮಾ ಮಂದಣ್ಣ ಮನೆ, ಟಾಲಿವುಡ್, ಸ್ಯಾಂಡಲ್‌ವುಡ್, ರಶ್ಮಿಕಾ ಮಂದಣ್ಣ, ಬಾಲಿವುಡ್, ಗೋವಾ, sandalwood, Rashmika Mandanna Home, rashmika mandanna, goa, bollywood
ರಶ್ಮಿಕಾರ ಗೋವಾದ ಮನೆಯ ಚಿತ್ರ


ನೀವು ಗೋವಾದಲ್ಲಿ ಹೊಸ ಮನೆ ಹೊಂದಿರುವಾಗ ಎಂದು ಬರೆದು ಹೊಟ್ಟೆಕಿಚ್ಚಾ ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ. ಇನ್ನು ರಶ್ಮಿಕಾ ಈ ರೀತಿ ಶೀರ್ಷಿಕೆ ಕೊಟ್ಟಿರುವುದು ಅಭಿಮಾನಿಗಳಲ್ಲಿ ನಾನಾ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಶ್ಮಿಕಾ ಮನೆ ಖರೀದಿಸಿದರೆ ಯಾರಿಗೆ ಹೊಟ್ಟೆಕಿಚ್ಚು ಎಂದು ತಲೆ ಕೆಡಿಸಿಕೊಂಡಿದ್ದಾರೆ ಫ್ಯಾನ್ಸ್​.

ಇದನ್ನೂ ಓದಿ: Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈಗ ಮೋಸ್ಟ್​ ಡಿಸೈರಬಲ್​ ಮಹಿಳೆ

ಇನ್ನು ರಶ್ಮಿಕಾ ಅವರ ಗೋವಾದ ಮನೆಯ ಹೊರಾಂಗಣದಲ್ಲಿ ದೊಡ್ಡದಾಡ ಮರ, ಈಜು ಕೊಳ ಹಾಗೂ ಅಲ್ಲಿಯೇ ಬುದ್ಧನ ಮೂರ್ತಿಯೊಂದು ಇದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದಕ್ಕೆ ಅವರು ಒಂದರ ಹಿಂದೆ ಒಂದರಂತೆ ಮನೆ ಖರೀದಿಸುತ್ತಿರುವುದೇ ಸಾಕ್ಷಿಯಾಗಿದೆ.

ರಶ್ಮಿಕಾ ಅವರು ಮುಂಬೈನಲ್ಲಿ ಖರೀದಿಸಿರುವ ಮನೆಯೂ ಐಷಾರಾಮಿ ಹಾಗೂ ದುಬಾರಿಯಾಗಿದೆ. ಸದ್ಯ ಮೂರು ಮನೆಗಳನ್ನು ಹೊಂದಿರುವ ನಟಿ ತಮ್ಮಿಷ್ಟ ಕಾರನ್ನೂ ಖರೀದಿಸಿ ಸುದ್ದಿಯಾಗಿದ್ದರು.


ರಶ್ಮಿಕಾ ಅವರ ಸಿನಿಮಾ ವಿಷಯಕ್ಕೆ ಬಂದರೆ ಅವರು ತೆಲುಗಿನಲ್ಲಿ ಆಡವಾಳ್ಳು ಮೀಕು ಜೋಹಾರುಲು ಹಾಗೂ ಪುಷ್ಪ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆಡವಾಳ್ಳು ಮೀಕು ಜೋಹಾರುಲು ಚಿತ್ರ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಅದರಲ್ಲಿ ನಾಯಕನಾಗಿ ಶರ್ವಾನಂದ ನಟಿಸಿದ್ದಾರೆ. ಈ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.

ಇನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಅಭಿನಯಿಸುತ್ತಿರುವ ಸಿನಿಮಾ ಪುಷ್ಪ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಅವರ ಫಸ್ಟ್​ಲುಕ್ ಪೋಸ್ಟರ್ ಇತ್ತೀಚೆಗಷ್ಟೆ ರಿಲೀಸ್ ಆಗಿತ್ತು. ಈ ಪೋಸ್ಟರ್​ನಿಂದಾಗಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇನ್ನು ಸಿನಿಮಾಗಳ ಜತೆಗೆ ಜಾಃಈರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ವಿಕ್ಕಿ ಕೌಶಲ್ ಜತೆ ನಟಿಸಿರುವ ಪುರುಷರ ಒಳುಡುಪಿನ ಜಾಹೀತರಾನಿಂದಾಗಿ ನಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಲಿಲ್ಲಿ.

ಇದನ್ನೂ ಓದಿ: Rashmika Mandanna: ವೈರಲ್ ಆಗುತ್ತಿದೆ ರಶ್ಮಿಕಾರ ಮತ್ತೊಂದು ಚುಂಬನದ ಚಿತ್ರ..!

ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಅವರು ಈಗಾಗಲೇ ಮಿಷನ್​ ಮಜ್ನು ಸಿನಿಮಾದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಸಿದ್ಧಾರ್ಥ್​ ಮಲ್ಹೋತ್ರಾ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರವೇನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ಇದರ ಜೊತೆಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಅದರ ಮೊದಲ ಹಂತ ಚಿತ್ರೀಕರಣ ಈಗಾಗಲೇ ಮುಗಿದಿದೆ.
Published by:Anitha E
First published: