Rashmika Mandannaರ ಈ ಮುದ್ದಾದ ಫೋಟೋ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ..!

ನಟಿ ರಶ್ಮಿಕಾ ಈಗಾಗಲೇ ಕನ್ನಡ ಚಿತ್ರರಂಗ ಅಲ್ಲದೆ ತೆಲುಗು ಚಿತ್ರರಂಗ, ಬಾಲಿವುಡ್ ಹೀಗೆ ಇನ್ನೂ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಅನೇಕ ಜನ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ಈ ಚಲನಚಿತ್ರೋದ್ಯಮದ ಅನೇಕ ನಟ ನಟಿಯರು ಸುಮ್ಮನೆ ಏಕೆ ತಲೆ ನೋವು ಎಂದು ಈ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿರುವುದನ್ನು ನಾವೆಲ್ಲ ನೋಡಿದ್ದೇವೆ.ಆದರೆ ಕೆಲವು ನಟ ನಟಿಯರು ಅದರಲ್ಲೂ ಇದೀಗ ಚಿತ್ರೋದ್ಯಮಕ್ಕೆ ಬಂದಿರುವ ನಟ ನಟಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುತ್ತಾರೆ. ಸದಾ ಒಂದಲ್ಲ ಒಂದು ಫೋಟೋಗಳನ್ನು ಪೋಸ್ಟ್ ಮಾಡುತ್ತಾ, ಏನಾದರೊಂದು ವಿಶೇಷವಾದ ಸಂಗತಿಯನ್ನು ಪೋಸ್ಟ್ ಮಾಡುತ್ತಾ ಸಕ್ರಿಯರಾಗಿರುತ್ತಾರೆ. ಹೀಗೆ ಮಾಡುವುದರಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸಹ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ.

ನಟಿ ರಶ್ಮಿಕಾ ಈಗಾಗಲೇ ಕನ್ನಡ ಚಿತ್ರರಂಗ ಅಲ್ಲದೆ ತೆಲುಗು ಚಿತ್ರರಂಗ, ಬಾಲಿವುಡ್ ಹೀಗೆ ಇನ್ನೂ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಅನೇಕ ಜನ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ, ರಶ್ಮಿಕಾ ಸದಾ ಸಕಾರಾತ್ಮಕವಾದ ಭಾವನೆ ಹರಡುವಂತಹ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.


‘ಡಿಯರ್ ಕಾಮ್ರೇಡ್’ ನಟಿ ರಶ್ಮಿಕಾ ಇತ್ತೀಚೆಗೆ ಒಂದು ಮುದ್ದಾದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಅವರು ಆಲೂಗಡ್ಡೆಯ ಡಿಶ್​ ಅನ್ನು ಆನಂದಿಸುತ್ತಿರುವ ಮತ್ತು ರಶ್ಮಿಕಾ ತಮ್ಮ ಎರಡು ಕೈಗಳನ್ನು ತಮ್ಮ ಕೆನ್ನೆಗೆ ಒತ್ತಿಕೊಂಡು ಕಣ್ಣುಗಳನ್ನು ಅಗಲವಾಗಿ ತೆರೆದು ಮುದ್ದಾದ ಎಕ್ಸ್​ಪ್ರೆಶನ್​ ತೋರಿಸಿದ್ದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ರಶ್ಮಿಕಾ ತಮ್ಮ ಜಿಮ್ ತಾಲೀಮಿನಿಂದ ರಜೆ ಪಡೆದು ಉತ್ತಮ ಊಟ ಸೇವಿಸುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್​ ದೇವರಕೊಂಡ ಜತೆ ಮತ್ತೆ ಸಿನಿಮಾ ಮಾಡಲು ಕಾತರರಾಗಿದ್ದಾರೆ ರಶ್ಮಿಕಾ ಮಂದಣ್ಣ..!

ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಶ್ಮಿಕಾ "ಬಿಡುವಿನ ದಿನದಂದು ಆಲೂಗೆಡ್ಡೆಯ ಖಾದ್ಯ" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಸುಮಾರು 23 ಲಕ್ಷ ಜನ ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಏಕೆ ತುಂಬಾ ಅಭಿಮಾನಿಗಳು ಇಷ್ಟಪಡುತ್ತಾರೆ ಎನ್ನುವುದಕ್ಕೆ ನಮಗೆ ಅನೇಕ ಕಾರಣಗಳನ್ನು ಪದೇ ಪದೇ ನೀಡುತ್ತಿರುತ್ತಾರೆ.

ಅವರ ಮುದ್ದಾದ ಮುಖದ ಫೋಟೋಗಳನ್ನು ಮತ್ತು ಸಂತೋಷದ ಕ್ಷಣಗಳ ಫೋಟೋಗಳೊಂದಿಗೆ ತಮ್ಮ ಅಭಿಮಾನಿಗಳನ್ನು ಸದಾ ರಂಜಿಸುತ್ತಲೇ ಇರುತ್ತಾರೆ. ತನ್ನ ಸಾಕು ಪ್ರಾಣಿ ಔರಾದೊಂದಿಗೆ ಸಮಯ ಕಳೆಯಲಿ ಅಥವಾ ಜಿಮ್‌ನಲ್ಲಿ ತಾಲೀಮು ಮಾಡಲಿ ಹೀಗೆ ಎಲ್ಲಾ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ರಶ್ಮಿಕಾ ದಕ್ಷಿಣ ಭಾರತವಲ್ಲದೆ ಉತ್ತರ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Rashmika Mandanna: ಸಖತ್​ ಕ್ರೇಜಿಯಾಗಿದೆ ರಶ್ಮಿಕಾರ Morning Kiss​ ಸ್ಟೋರಿ

ಈಗಾಗಲೇ ರಶ್ಮಿಕಾ ತಮ್ಮ ಮುಂಬರುವ ಎರಡು ಹಿಂದಿ ಚಲನಚಿತ್ರಗಳಾದ ‘ಮಿಷನ್ ಮಜ್ನು’ ಮತ್ತು ‘ಗುಡ್‌ಬೈ’ ಚಿತ್ರೀಕರಣ ಮುಗಿಸಿದ್ದಾರೆ. ‘ಗುಡ್‌ಬೈ’ ಚಿತ್ರದಲ್ಲಿ ರಶ್ಮಿಕಾ ಬಾಲಿವುಡ್‌ನ ಬಿಗ್ ಬಿ ಅಂತಾನೆ ಖ್ಯಾತಿ ಪಡೆದ ಅಮಿತಾಭ್ ಬಚ್ಚನ್‌ರೊಂದಿಗೆ ನಟಿಸಿದ್ದಾರೆ. ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಜತೆ ತೆರೆ ಹಂಚಿಕೊಂಡಿದ್ದಾರೆ.

ಟಾಲಿವುಡ್ ನಟ ಅಲ್ಲು ಅರ್ಜುನ್‌ರೊಂದಿಗೆ ಪ್ಯಾನ್-ಇಂಡಿಯಾ ಚಿತ್ರ ‘ಪುಷ್ಪ’ ಅಲ್ಲದೆ, ನಟ ಶರ್ವಾನಂದ್ ಜೊತೆಗೆ ‘ಆಡವಾಳ್ಳು ಮೀಕು ಜೋಹಾರುಲು ಎಂಬ ತೆಲುಗು ಚಿತ್ರವನ್ನೂ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಪುಷ್ಪ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಎರಡು ಭಾಗಗಳಲ್ಲಿ ರಿಲೀಸ್​ ಆಗಲಿದೆ.
Published by:Anitha E
First published: