Rashmika Mandanna: ರಷ್ಯಾದಲ್ಲಿ ರಶ್ಮಿಕಾ, ಮೊದಲ ದಿನದ ಸೆಲ್ಫೀ ಶೇರ್ ಮಾಡಿದ ಪುಷ್ಪಾ ನಟಿ

Rashmika Mandanna In Russia: ನಟಿ ಡಿಬಟ್ ಮೂವಿ ಮಿಷನ್ ಮಜ್ನು ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಅವರು ಸ್ಪೈ ಥ್ರಿಲ್ಲರ್‌ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಜೋಡಿಯಾಗಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪುಷ್ಪಾ: ದಿ ರೈಸ್(Pushpa: The Rise) ಹಿಟ್ ಆಗಿದ್ದು ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ಕೆರಿಯರ್ ಇನ್ನಷ್ಟು ಬ್ರೈಟ್ ಆಗಿದೆ. ಟಾಲಿವುಡ್ನ(Tollywood) ಪ್ಯಾನ್ ಇಂಡಿಯಾ ಸಿನಿಮಾಗೆ ಹಿರೋಯಿನ್ ಆದ ರಶ್ಮಿಕಾಗೆ ಇನ್ನಷ್ಟು ಅವಕಾಶಗಳು ಹರಿದುಬರುತ್ತಿವೆ. ನಟಿ ಸಕ್ಸಸ್ ಎಂಜಾಯ್ ಮಾಡಿ ಸುಮ್ಮನೆ ಕೂತಿಲ್ಲ, ತಮ್ಮ ಕಿಟ್ಟಿಯಲ್ಲಿರುವ ಇತರ ಪ್ರಾಜೆಕ್ಟ್ಗಳಲ್ಲಿ ಸಕ್ಸಸ್ಫುಲ್ ಆಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಿರಿಕ್ ಪಾರ್ಟಿ(Kirik Party) ಚೆಲುವೆ ಈಗಾಗಲೇ ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ಬೈ(Good Bye) ಸಿನಿಮಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದು ಬಾಲಿವುಡ್ ಎಂಟ್ರಿಗೆ ಸಿದ್ಧರಾಗಿದ್ದಾರೆ. ಅದರ ಜೊತೆ ಜೊತೆಗೇ ಸೌತ್ ಸಿನಿಮಾ ಆಫರ್ಗಳನ್ನು ಮ್ಯಾನೇಜ್ ಮಾಡುತ್ತಾ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ ಗೀತ ಗೋವಿಂದಂ ನಟಿ.

  ಸದ್ಯ ಕೊಡಗಿನ ಬೆಡಗಿ ರಷ್ಯಾಗೆ(Russia) ಪ್ರಯಾಣ ಮಾಡಿದ್ದಾರೆ. ಅರೆ ಮುಂಬೈಗೆ ಹೋಗೋದು ಗೊತ್ತು, ಇದ್ಯಾವಾಗ ರಷ್ಯಾಗೆ ಹೋದರು ಎಂದುಕೊಳ್ಳಬೇಡಿ, ಅಂತೂ ಇಂತೂ ನಟಿ ರಷ್ಯಾಗೆ ತಲುಪಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ನಟಿ ಮುಂಬೈನಲ್ಲಿ(Mumbai) ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ(Camera) ಸೆರೆಯಾಗುತ್ತಲೇ ಇರುತ್ತಾರೆ. ಈಗ ರಷ್ಯಾಗೂ ಹಾರಿಬಿಟ್ಟಿದ್ದಾರೆ.

  ಡೇ ವನ್ ಇನ್ ರಷ್ಯಾ
  ರಶ್ಮಿಕಾ ಮಂದಣ್ಣ ರಷ್ಯಾಗೆ ಪ್ರಯಾಣ ಮಾಡಿದ್ದು ಈಗಾಗಲೇ ರಷ್ಯಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ರಷ್ಯಾ ತಲುಪಿದ್ದೇ ತಡ ಸಖತ್ ಖುಷ್ ಆಗಿದ್ದಾರೆ ಟಾಪ್ ಟಕ್ಕರ್ ಚೆಲುವೆ. ಪುಷ್ಪಾ ನಟಿ ಮಿರರ್ ಸೆಲ್ಫೀ ಕ್ಲಿಕ್ ಮಾಡಿದ್ದು, ಇದರಲ್ಲಿ ನಟಿ ಪಿಂಕ್ ಸ್ವೆಟರ್ ಶರ್ಟ್ ಧರಿಸಿ ಕ್ಯಾಪ್ ಹಾಕಿದ್ದನ್ನು ಕಾಣಬಹುದು. ಚಂದದ ಫೋಟೋ ಶೇರ್ ಮಾಡಿದ ನಟಿ ರೆಡಿ ಫಾರ್ ಮೈ ಡೇ ವನ್ ಇನ್ ರಷ್ಯಾ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದಕ್ಕೆ ಕಮೆಂಟ್ ಮಾಡಿದ ಸಮಂತಾ ರುಥ್ ಪ್ರಭು ಅವರು ಕ್ಯೂಟ್ ಎಂದು ಬರೆದಿದ್ದಾರೆ.
  ಇದನ್ನೂ ಓದಿ: ಕ್ಯಾಬ್ ಡ್ರೈವರ್​​ಗಳಿಗಾಗಿ ಸಂಭಾವನೆ ತೆಗೆದುಕೊಳ್ಳದೆ ಹಾಡು ಹಾಡಿದ್ರಂತೆ ಅಪ್ಪು!

  ರಾಶಿ ಖನ್ನಾ ಕೂಡಾ ರಷ್ಯಾದಲ್ಲಿದ್ದಾರೆ
  ನಟಿ ರಾಶಿ ಖನ್ನಾ ಅವರೂ ರಷ್ಯಾದಿಂದ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ನಟ ನಾಗ ಚೈತನ್ಯ ಜೊತೆಗೆ ಥಾಂಕ್ಯೂ ಕಾಮೆಡಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ನಟಿ ಶೇರ್ ಮಾಡಿದ ಫೋಟೋಗಳನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

  ಸ್ವಲ್ಪ ಸಮಯದ ಹಿಂದೆ, ರಶ್ಮಿಕಾ ಮಂದಣ್ಣ Instagramನಲ್ಲಿ ತಮ್ಮ ನೆಚ್ಚಿನ ಪೆಟ್ ಓರಾ ಜೊತೆಗೆ ಚಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವಳಿಲ್ಲದೆ ನಾನು ಏನು ಮಾಡಲಿ ಎಂದು ಪ್ರಶ್ನಿಸಿ ನಟಿ ಶೀರ್ಷಿಕೆ ನೀಡಿದ್ದರು. ಓರಾ ರಶ್ಮಿಕಾ ಮಂದಣ್ಣ ಅವರನ್ನು ಚುಂಬಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಮೆಗಾಸ್ಟಾರ್ ರಾಮ್ ಚರಣ್ ಅವರ ಆರ್‌ಸಿ 16 ಗೆ ನಟಿಯರ ಆಯ್ಕೆಯಲ್ಲಿ ರಶ್ಮಿಕಾ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇದು ಅಧಿಕೃತವಾಗಿ ಎನೌನ್ಸ್ ಆಗದೇ ಇದ್ದರೂ ರಶ್ಮಿಕಾ ಮಂದಣ್ಣ ಮತ್ತೊಂದು ಪ್ರಾಜೆಕ್ಟ್ ಅನ್ನು ಸೈನ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಗೌತಮ್ ತಿನ್ನನೂರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

  ಇದನ್ನೂ ಓದಿ: ಮತ್ತೆ ಸದ್ದು ಮಾಡ್ತಿದೆ ಅನುಷ್ಕಾ-ಪ್ರಭಾಸ್ ಲವ್ ಸ್ಟೋರಿ! ಶೀಘ್ರದಲ್ಲೇ ಮದುವೆ?

  ನಟಿ ಡಿಬಟ್ ಮೂವಿ ಮಿಷನ್ ಮಜ್ನು ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಅವರು ಸ್ಪೈ ಥ್ರಿಲ್ಲರ್‌ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಜೋಡಿಯಾಗಲಿದ್ದಾರೆ. ಆವರ ಕಿಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸುವ ಗುಡ್ ಬೈ ಕೂಡ ಇದೆ. 2022ರಲ್ಲಿ ರಶ್ಮಿಕಾ ಮಂದಣ್ಣ ಕೆಲವು ಬಿಗ್ ಪ್ರಾಜೆಕ್ಟ್ಗಳನ್ನು ಮಾಡಲಿದ್ದಾರೆ.
  Published by:Sandhya M
  First published: