ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಬಾಲಿವುಡ್ ನಲ್ಲೂ (Bollywood) ಬಹು ಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಬಿಗ್ ಸ್ಕ್ರೀನ್ಗಳಲ್ಲಿ ಮಿಂಚುತ್ತಿದ್ದಾರೆ. ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು ಬಳಿಕ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಪ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಪ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾಗೆ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ಬರಾಗಿದ್ದಾರೆ. ಸಿನಿಮಾ ಕೆಲಸದ ಜೊತೆಗೆ ಫಿಟ್ ಆಗಿರಲು ಡಯೆಟ್ ಜೊತೆ ವರ್ಕೌಟ್ ಮಾಡ್ತಾರೆ ರಶ್ಮಿಕಾ. ಅನೇಕ ಬಾರಿ ಅವರು ಜಿಮ್ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ವರ್ಕೌಟ್ ವಿಡಿಯೋ ಹಂಚಿಕೊಂಡ ಸಮಂತಾ
ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ (Actress Samantha) ಇದೀಗ ಸಂಪೂರ್ಣ ಗುಣಮುಖರಾಗ್ತಿದ್ದಾರೆ. ಸಮಂತಾ ಅವರು ಮೈಯೋಸಿಟಿಸ್ (Myositis) ಹೆಸರಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಸಿನಿಮಾ ಕೆಲಸಕ್ಕೂ ಬ್ರೇಕ್ ನೀಡಿದ್ದ ನಟಿ ಸಮಂತಾ ಇದೀಗ ಮತ್ತೆ ಸಿನಿಮಾ ಶೂಟಿಂಗ್ಗಳಲ್ಲಿ (Shooting) ಭಾಗಿ ಆಗ್ತಿದ್ದಾರೆ. ಸ್ಯಾಮ್ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ (Shaakuntalam) ಶೀಘ್ರದಲ್ಲೇ ರಿಲೀಸ್ ಆಗಲಿದೆ. ನಟಿ ಕೂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.
ತಾನು ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಕಾಯಿಲೆ ಕಾಣಿಸಿದ ನಂತರ ಸ್ನಾಯುಗಳಲ್ಲಿ ಸೆಳೆತ ಶುರುವಾಗಿತ್ತು. ಅನೇಕ ದಿನಗಳ ಕಾಲ ವಿಶ್ರಾಂತಿ ಪಡೆದ ನಟಿ ಸಮಂತಾ ಟ್ರಿಟ್ಮೆಂಟ್ ಪಡೆದು ಗುಣಮುಖರಾಗಿದ್ದಾರೆ. ಇದೀಗ ಮತ್ತೆ ತಮ್ಮ ಫಿಟ್ನೆಸ್ ಬಗ್ಗೆ ಗಮನಹರಿಸಿರುವ ಸಮಂತಾ ಜಿಮ್ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಮೊದಲಿನಿಂದಲೂ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಸಮಂತಾ ತಮ್ಮ ವರ್ಕೌಟ್ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿದ್ರು. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ರು, ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.
ಫುಲ್ ಫಿಟ್ ಆಗ್ತಿದ್ದಾರೆ ಸಮಂತಾ
ಮೊದಲಿನಿಂದಲೂ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಸಮಂತಾ ತಮ್ಮ ವರ್ಕೌಟ್ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿದ್ರು. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ರು, ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ