Pushpa ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಅಲ್ಲು ಅರ್ಜುನ್​ಗೆ ಜೊತೆಯಾದ Rashmika Mandanna

ರಶ್ಮಿಕಾ ಮಂದಣ್ಣ ಅವರು ಈ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿನಿಪ್ರಿಯರ ಮುಂದೆ ಬರಲಿದ್ದಾರೆ ಎಂದೂ ಹೇಳಲಾಗಿತ್ತು. ಅಂತೆಯೇ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಈ ಸಲ ಸಖತ್ ರಗಡ್​ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

  • Share this:
ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ (Stylish Star Allu Arjun) ಹಾಗೂ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹುನಿರೀಕ್ಷಿತ ಸಿನಿಮಾ  ಪುಷ್ಪ (Pushpa Movie). ಮೈತ್ರಿ ಮೂವಿ ಮೇಕರ್ಸ್  (Mythri Movie Makers) ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿ ಅನ್ನೋದು ಬಿಟ್ಟರೆ, ಬೇರೆ ಯಾವ ವಿಷಯವೂ ಸಹ  ಇಲ್ಲಿಯವೆರೆಗೆ ಬಹಿರಂಗವಾಗಿರಲಿಲ್ಲ. ಈ ಹಿಂದೆ ಈ ಸಿನಿಮಾದ ಸೆಟ್​ನಿಂದ ಲೀಕ್​ ಆಗಿದ್ದ ಕೆಲವು ವಿಡಿಯೋ ಹಾಗೂ ಚಿತ್ರಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆಗಲೇ ಅಲ್ಲು ಅರ್ಜುನ್ ಅವರ ಲುಕ್​ ಮಾತ್ರ ರಿವೀಲ್ ಆಗಿತ್ತು. ಆದರೆ ಈಗ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅವರ ಪಾತ್ರದ ಫಸ್ಟ್​ಲುಕ್​ ಪೋಸ್ಟರ್ (First Look Poster) ಹಾಗೂ ಅವರ ಪಾತ್ರದ ಹೆಸರು ರಿವೀಲ್ ಆಗಿದೆ. ನಿನ್ನೆಯೇ ರಶ್ಮಿಕಾ ಮಂದಣ್ಣಅವರು ಈ ಕುರಿತಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸುಳಿವು ನೀಡಿದ್ದರು. 

ರಶ್ಮಿಕಾ ಮಂದಣ್ಣ ಅವರು ಈ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿನಿಪ್ರಿಯರ ಮುಂದೆ ಬರಲಿದ್ದಾರೆ ಎಂದೂ ಹೇಳಲಾಗಿತ್ತು. ಅಂತೆಯೇ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಈ ಸಲ ಸಖತ್ ರಗಡ್​ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲು ಅರ್ಜುನ್​ಗೆ ಶ್ರೀವಲ್ಲಿಯಾಗಿ ಜೊತೆಯಾಗಿದ್ದಾರೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.


ರಶ್ಮಿಕಾ ಅವರು ಸೀರೆಯುಡುವ ತಯಾರಿ ನಡೆಸಿದ್ದು, ರವಿಕೆ ಹಾಗೂ ಲಂಗ ತೊಟ್ಟು ಕಿವಿಯೋಲೆ ಧರಿಸುತ್ತಿದ್ದಾರೆ ಈ ಪೋಸ್ಟರ್​ನಲ್ಲಿ. ಅವರ ಮುಂದೆ ಒಂದು ದೊಡ್ಡ ತಟ್ಟೆಯಲ್ಲಿ ಸೀರೆ ಹಾಗೂ ಮುಡಿಯಲು ಹೂವನ್ನೂ ಸಹ ಇರಿಸಲಾಗಿದೆ. ಇದನ್ನು ನೋಡಿದರೆ ಶ್ರೀವಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಿರುವಂತೆ ಇದೆ. ಒಟ್ಟಾರೆ ರಶ್ಮಿಕಾ ಅವರ ಈ ಲುಕ್​ ಅವರ ಅಭಿಮಾನಿಗಳಿಗೆ ಸಿಕ್ಕಿರುವ ಟ್ರೀಟ್​ ಎಂದರೆ ತಪ್ಪಾಗದು.

ಇದನ್ನೂ ಓದಿ: ಕಣ್ಣಲ್ಲಿ ಜಾದೂ ಇದೆ ಎನ್ನುತ್ತಲೇ ಮಾದಕ ನೋಟ ಬೀರಿದ Rashmika Mandanna: ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಕಿರಿಕ್ ಬ್ಯೂಟಿ

ಟಾಲಿವುಡ್​ ನಿರ್ದೇಶಕ ಸುಕುಮಾರ್​ ಅವರು ನಿರ್ದೇಶಿಸುತ್ತಿರುವ ಸಿನಿಮಾ ಪುಷ್ಪ. ಈ ಚಿತ್ರದ ಬಹುತೇಕ ಭಾಗದ ಶೂಟಿಂಗ್ ಮುಗಿದಿದೆ. ಅಲ್ಲು ಅರ್ಜುನ್ ಅವರು ಪುಷ್ಪರಾಜ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಲಾರಿ ಚಾಲಕನಾಗಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್​ಗಳು, ಟೀಸರ್​ ಹಾಡುಗಳು ರಿಲೀಸ್​ ಆಗಿದ್ದು ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿವೆ. ಈಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ತಲಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್​ ಆಗಲಿದೆ.

ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹೈದರಾಬಾದಿನಲ್ಲೇ ಇದ್ದಾರೆ. ಇಲ್ಲಿ ಪುಷ್ಪ ಹಾಗೂ ಆಡವಾಳ್ಳು ಮೀಕು ಜೋಹಾರುಲು ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಇವರು ಅಭಿನಯದ ಮಿಷನ್​ ಮಜ್ನು ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ಖುಷಿಯಲ್ಲಿ ಚಿತ್ರತಂಡ ಪಾರ್ಟಿ ಕೂಡ ಆಯೋಜಿಸಿತ್ತು.

ಇದನ್ನೂ ಓದಿ: Rashmika Mandanna: ಆ ಒಂದೇ ಒಂದು ದೃಶ್ಯದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ರಶ್ಮಿಕಾ ಮಂದಣ್ಣ..!

ಮಿಷನ್​ ಮಜ್ನು ಸಿನಿಮಾವನ್ನು ನಾಶಾಂತನು ಬಾಗ್ಚಿ ನಿರ್ದೇಶನ ಮಾಡಿದ್ದು, ಇದರ ಮೂಲಕವೇ ರಶ್ಮಿಕಾ ಮಂದಣ್ಣ ಬಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ರಶ್ಮಿಕಾ ನಾಯಕಿ ಅನ್ನೋದು ಮಾತ್ರವಷ್ಟೆ ಸದ್ಯದವರೆಗೆ ಲಭ್ಯವಾಗಿರುವ ಮಾಹಿತಿ. ಇದರ ಜೊತೆಗೆ ರಶ್ಮಿಕಾ ಅವರು ಅಮಿತಾಭ್​ ಬಚ್ಚನ್​ ಅವರ ಜೊತೆ ಗುಡ್​ ಬೈ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಭಾಗದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ.
Published by:Anitha E
First published: