ಕೊರೋನ ಭೀತಿಯಿಂದಾಗಿ ಮನೆಗಳಲ್ಲಿ ಮದುವೆ ಹೊರತುಪಡಿಸಿ ಉಳಿಯದ ಯಾವುದೇ ಕಾರ್ಯಕ್ರಮಗಳನ್ನು ಆಚರಿಸು ಹಿಂದೆ ಮುಂದೆ ನೋಡಲಾಗುತ್ತಿದೆ. ಮದುವೆ ಮಾಡಿದರೂ ಅದು ಸರಳವಾಗಿ ಹಾಗೂ ಕಡಿಮೆ ಜನರಿರಬೇಕು. ಕೊರೋನಾ ಭೀತಿಯಿಂದಾಗಿ ಮನೆಗಳಲ್ಲಿ ಜನರು ಕಾರ್ಯಕ್ರಮಗಳನ್ನು ಆಚರಿಸದೆ ಸ್ವಯಂಪ್ರೇರಿತರಾಗಿ ಮುಂದೂಡುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಯಾರಾದರು ಎದುರು ಸಿಕ್ಕರೂ ಜನರು ಕೈ ಕುಲುಕುವುದನ್ನೂ ನಿಲ್ಲಿಸಿದ್ದಾರೆ. ಇನ್ನೂ ಇಷ್ಟಪಟ್ಟವರಿಗೆ ಹಾಗೂ ಹಿತೈಶಿಗಳಿಗೆ ಉಡುಗೊರೆ ಕೊಡುವುದು ದೂರದ ಮಾತು. ಹೀಗಿರುವಾಗಲೇ
ರಶ್ಮಿಕಾ ಮಂದಣ್ಣ , ಪ್ರಿನ್ಸ್ ಮಹೇಶ್ ಬಾಬು ಅವರ ಮನೆಗೆ ಕೊಡಗಿನಿಂದ ಒಂದು ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ.
![mahesh babu says he hates the persons who are dishonest in real life]()
ನಮ್ರತಾ ಹಾಗೂ ಮಹೇಶ್ ಬಾಬು
ರಶ್ಮಿಕಾ ಕೋವಿಡ್ ಲಾಕ್ಡೌನ್ ವೇಳೆ ಕಳುಹಿಸಿರುವ ಉಡುಗೊರೆಯಿಂದಾಗಿ ಪ್ರಿನ್ಸ್ ಪತ್ನಿ ನಮ್ರತಾರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಆರಂವಾಗಿದ್ದು, ಕೊಡಗಿನಿಂದ ಆರ್ಗ್ಯಾನಿಕ್ ಗಿಫ್ಟ್ ಬಂದಿದೆ ಎಂದು ನಮ್ರತಾ ಶಿರೋಡ್ಕರ್ ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದ ಉಡುಗೊರೆಯ ಫೋಟೋ ಹಂಚಿಕೊಂಡಿದ್ದಾರೆ.
ರಶ್ಮಿಕಾ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್, ಸಿಹಿಯಾದ ಜೇನು ತುಪ್ಪ ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನು ಮಹೇಶ್ ಬಾಬು ಅವರ ಮನೆಗೆ ಕಳುಹಿಸಿದ್ದಾರೆ. ಇದು ನಮ್ಮ ಮೊದಲ ಮಾನ್ಸೂನ್ ಹಾಗೂ ಲಾಕ್ಡೌನ್ ಉಡುಗೊರೆ ಎಂದಿರುವ ನಮ್ರತಾ, ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ. ರಶ್ಮಿಕಾ ಹಾಗೂ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು.
Skanda Ashok: ಮಗುವಿನ ನಿರೀಕ್ಷೆಯಲ್ಲಿ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್- ಶಿಖಾ..!
ಇದನ್ನೂ ಓದಿ: ತಮಿಳು ನಟ ವಿಜಯ್ಗಾಗಿ ಹುಲಾಹೂಪ್ ಹಿಡಿದು ಡ್ಯಾನ್ಸ್ ಮಾಡಿದ ಸಂಯುಕ್ತಾ ಹೆಗಡೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ