ನಟಿ ರಶ್ಮಿಕಾ ಮಂದಣ್ಣ( Rashmika Mandanna)ಕರುನಾಡ ಕ್ರಶ್ ಆಗಿದ್ದರು. ಸಮಯ ಕಳೆದಂತೆ ಈಗ ನ್ಯಾಷ್ನಲ್ ಕ್ರಶ್ ಎಂಬ ಬಿರುದು ಪಡೆದುಕೊಂಡಿದ್ದಾರೆ. ಬರೀ ಕನ್ನಡ ಅಷ್ಟೆ ಅಲ್ಲದೇ, ತೆಲುಗು(Telugu), ತಮಿಳು(Tamil) ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇನ್ನೂ ಹಿಂದಿ(Hindi) ಭಾಷೆಯಲ್ಲೂ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಡುತ್ತಲೇ ದೊಡ್ಡ ದೊಡ್ಡ ಸ್ಟಾರ್ಗಳೊಂದಿಗೆ ಸಿನಿಮಾ ಮಾಡುವ ಅವಕಾಶ ಗಿಟ್ಟಿಸುಕೊಂಡಿದ್ದರು. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ(Rakshith Shetty), ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar), ದರ್ಶನ್(Darshan) ಜೊತೆ ಸಿನಿಮಾ ಮಾಡಿದ್ದರು. ಸದ್ಯ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಮ(Pushpa) ಸಿನಿಮಾದ್ದೇ ಎಲ್ಲ ಕಡೆ ಟಾಕ್. ಭಾರತೀಯ ಸಿನಿರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಪುಷ್ಪ. ತೆಲುಗು ಚಿತ್ರ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಹಲವು ಗೆಳೆಯರನ್ನು ಸಹ ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ. ಯಾವುದೇ ನಟರೊಟ್ಟಿಗೆ ನಟಿಸಿದರೂ ಅವರೊಟ್ಟಿಗೆ ಆತ್ಮೀಯ ಬಂಧವನ್ನು ರಶ್ಮಿಕಾ ಮಂದಣ್ಣ ಸಾಧಿಸಿಕೊಳ್ಳುತ್ತಾರೆ. ಇದೇ ರೀತಿಯಾಗಿ ಚಿತ್ರರಂಗದಲ್ಲಿ ಹಲವು ಗೆಳೆಯರನ್ನು ರಶ್ಮಿಕಾ ಹೊಂದಿದ್ದಾರೆ. ಇದೀಗ ಪುಷ್ಮ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಅಲ್ಲು ಅರ್ಜುನ್(Allu Arjun) ಅವರಿಗೆ ರಶ್ಮಿಕಾ ಮಂದಣ್ಣ ಸ್ಪೆಷಲ್ ಗಿಫ್ಟ್(Special Gift)ವೊಂದನ್ನು ನೀಡಿದ್ದಾರೆ.
ಸ್ಪೆಷಲ್ ಗಿಫ್ಟ್ ಕಂಡು ಅಲ್ಲು ಅರ್ಜುನ್ ಖುಷ್!
ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ಗೆ ರಶ್ಮಿಕಾ ಉಡುಗೊರೆಯೊಂದನ್ನು ಕಳಿಸಿದ್ದಾರೆ. ಉಡುಗೊರೆಯ ಚಿತ್ರವನ್ನು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಅಲ್ಲು ಅರ್ಜುನ್ಗೆ ಕೆಲವು ತಿನಿಸುಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ನಟಿ ರಶ್ಮಿಕಾ ಮಂದಣ್ಣ ಸುಂದರವಾದ ಗಿಫ್ಟ್ ಬಾಕ್ಸ್ನಲ್ಲಿಟ್ಟು, ತಾವೇ ಕೈಯಾರೆ ಒಂದು ಪುಟ್ಟ ನೋಟ್ ಅನ್ನು ಬರೆದು ಕಳಿಸಿಕೊಟ್ಟಿದ್ದಾರೆ. ರಶ್ಮಿಕಾ ಕಳಿಸಿರುವ ಉಡುಗೊರೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ''ಈ ಅಚಾನಕ್ ಉಡುಗೊರೆಗೆ ಬಹಳ ಧನ್ಯವಾದಗಳು ಪ್ರೀತಿಯ ರಶ್ಮಿಕಾ'' ಎಂದು ಬರೆದುಕೊಂಡಿದ್ದಾರೆ.
ಇದನ್ನುಓದಿ : ಡಿಸೆಂಬರ್ 9ಕ್ಕೆ ಕತ್ರಿನಾ-ವಿಕ್ಕಿ ಅದ್ದೂರಿ ವಿವಾಹ: ಇಲ್ಲಿದೆ ಅವರ ಅನ್ಟೋಲ್ಡ್ ಲವ್ಸ್ಟೋರಿ!
‘ಆಲ್ ದಿ ಬೆಸ್ಟ್.. ಪ್ರೀತಿಯೊಂದಿಗೆ ರಶ್ಮಿಕಾ...’
ಇನ್ನೂಈ ಗಿಫ್ಟ್ ಜೊತೆ ರಶ್ಮಿಕಾ ಮಂದಣ್ಣ ಲೆಟರ್ವೊಂದು ಬರೆದು ಕಳಿಸಿದ್ದಾರೆ. ‘
ನಿಮಗೆ ಈ ಥರಹದ್ದು ಏನಾದರೂ ಕಳಿಸಬೇಕು ಎನಿಸಿತು ಸರ್, 'ಪುಷ್ಪ' ಸಿನಿಮಾಕ್ಕೆ ಆಲ್ ದಿ ಬೆಸ್ಟ್, ಪ್ರೀತಿಯೊಂದಿಗೆ ರಶ್ಮಿಕಾ'' ಎಂಬ ನೋಟ್ ಅನ್ನು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ. ಜೊತೆಗೆ, 'ಒಂದಿಷ್ಟು ಪ್ರೀತಿಯನ್ನು ನಿಮ್ಮ ಕಡೆ ಕಳಿಸುತ್ತಿದ್ದೇನೆ'' ಎಂಬ ಮತ್ತೊಂದು ಕ್ಯೂಟ್ ನೋಟ್ ಅನ್ನು ಬರೆದು ರಶ್ಮಿಕಾ, ಅಲ್ಲು ಅರ್ಜುನ್ಗೆ ಕಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ಸಿನಿಮಾ 'ಗುಡ್ ಬೈ'ನಲ್ಲಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ನಟಿಸುವಾಗ ಅಪ್ಪಂದಿರ ದಿನಕ್ಕೆ ಅಮಿತಾಬ್ ಬಚ್ಚನ್ ಅವರಿಗೆ ಉಡುಗೊರೆ ನೀಡಿದ್ದರು. ರಶ್ಮಿಕಾ ಅವರ ಒಳ್ಳೆಯ ಗುಣಗಳನ್ನು ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ದೀಪಿಕಾ ಪಡುಕೋಣೆಗೆ ಸೀರೆ, ಅರಿಶಿನ-ಕುಂಕುಮ ಕೊಟ್ಟು ಸೆಟ್ಗೆ ವೆಲ್ಕಮ್: ಫೋಟೋಗಳು ವೈರಲ್!
ಡಿಸೆಂಬರ್ 17 ಕ್ಕೆ ತೆರೆ ಮೇಲೆ ಅಬ್ಬರಿಸಲಿದೆ ‘ಪುಷ್ಪ’
ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾ ಡಿಸೆಂಬರ್ 17ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಮಲಯಾಳಂನ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ ಕನ್ನಡಿಗ ಡಾಲಿ ಧನಂಜಯ್, ಕಿಶೋರ್, ತೆಲುಗು ಹಾಸ್ಯನಟ ಸುನಿಲ್ ಸಹ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮತ್ತೊಂದು ಪ್ರಮುಖ ವಿಶೇಷತೆಯೆಂದರೆ ಇದೇ ಮೊದಲ ಬಾರಿಗೆ ಸಮಂತಾ ಐಟಂ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ