ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಭಿನಯಿಸಿದ ಎರಡನೇ ತಮಿಳು (Tamil) ಸಿನಿಮಾ ರಿಲೀಸ್ ಆಗಿದೆ. ಜೋಸೆಫ್ ವಿಜಯ್ (Joseph Vijay) ಹಾಗೂ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕಾಂಬಿನೇಷನ್ನ ಸಿನಿಮಾ ರಿಲೀಸ್ಗು ಮುನ್ನವೇ ಸಖತ್ ಕ್ರೇಜ್ ಸೃಷ್ಟಿಸಿತ್ತು. ವಿಜಯ್ ರಾಜೇಂದ್ರನ್ ಅಂದರೆ ಹೀರೋ ಕುಟುಂಬದ ಮೂವರು ಸಹೋದರರಲ್ಲಿ ಕಿರಿಯವರಾಗಿದ್ದಾರೆ. ರಾಜೇಂದ್ರನ್ (Sharathkumar) ಅವರು ಗಣಿಗಾರಿಕೆ ವ್ಯವಹಾರ ಮಾಡುತ್ತಿರುತ್ತಾರೆ. ಅವರ ಇತರ ಇಬ್ಬರು ಪುತ್ರರು ಇರುವ ಅವಿಭಕ್ತ ಕುಟುಂಬ ಒಟ್ಟಿಗೆ ವಾಸಿಸುತ್ತದೆ.
ವಿಜಯ್ ತನ್ನ ತಂದೆಯೊಂದಿಗೆ ಕುಟುಂಬದ ವ್ಯವಹಾರಕ್ಕೆ ಕೈಜೋಡಿಸದೆ ಇದ್ದಾಗ ಹೀರೋ ತಂದೆ ತನ್ನ ಮನೆಯನ್ನು ತೊರೆಯುವಂತೆ ಕೇಳುತ್ತಾನೆ. ರಾಜೇಂದ್ರನ್ಗೆ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ವಿಜಯ್ ಏಳು ವರ್ಷಗಳ ನಂತರ ತನ್ನ ತಂದೆಯ 65 ನೇ ಹುಟ್ಟುಹಬ್ಬವನ್ನು ಆಚರಿಸಲು ಮನೆಗೆ ಹಿಂತಿರುಗುತ್ತಾನೆ.
ಈ ಸಮಯದಲ್ಲಿ ಪರಿಸ್ಥಿತಿ ಬದಲಾಗಿರುತ್ತದೆ. ಮನೆ, ಕುಟುಂಬ ವ್ಯವಹಾರ ಎಂದರೆ ದೂರ ಓಡುತ್ತಿದ್ದ ವಿಜಯ್ ಮನೆಯಲ್ಲಿಯೇ ಇರಲು ಏಕೆ ನಿರ್ಧರಿಸುತ್ತಾರೆ? ಅವರ ತಂದೆ ಅವರನ್ನು ಅವರ ಕಂಪನಿಗಳ ಸಿಇಒ ಆಗಿ ಏಕೆ ಮಾಡುತ್ತಾರೆ? ಇದು ಇಂಟ್ರೆಸ್ಟಿಂಗ್ ಮೂವ್.
ಸ್ಟೋರಿ ಸ್ಟೈಲ್ ಚೇಂಜ್
ವಿಜಯ್ ಅವರ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ಸಾಲು ಸಾಲು ಮಾಸ್ ಸಿನಿಮಾ ಕೊಟ್ಟ ವಿಜಯ್ ಸಡನ್ನಾಗಿ ಸಿನಿಮಾ ಸ್ಟೈಲ್ ಚೇಂಜ್ ಮಾಡಿದ್ದು ಅಚ್ಚರಿ ಏನಲ್ಲ. ಕಾರಣ ಅವರ ಮಾಸ್ಟರ್, ಬೀಸ್ಟ್ ಸಿನಿಮಾಗಳು ಸಾಮಾನ್ಯ ಒಂದೇ ಕಥೆ, ಒಂದೇ ಟೈಪ್ ಎನಿಸಿ ಸ್ವಲ್ಪ ಡಲ್ ಹೊಡೆದಿದ್ದು ಸತ್ಯ. ಹಾಗೆ ನೋಡಿದರೆ ವಾರಿಸು ಸ್ವಲ್ಪ ಡಿಫರೆಂಟ್.
ಸಿನಿಮಾ ಸಾಕಷ್ಟು ಫ್ಯಾಮಿಲಿ ಸೆಂಟಿಮೆಂಟ್, ಆಕ್ಷನ್, ರೊಮ್ಯಾನ್ಸ್ ಮತ್ತು ಹಾಸ್ಯದಿಂದ ತುಂಬಿದೆ. ಚಿತ್ರದ ಮೊದಲಾರ್ಧದಲ್ಲಿ ಮೋಜು ಮತ್ತು ಉಲ್ಲಾಸ ತುಂಬಿದ್ದು ಪ್ರೇಕ್ಷಕನಿಗೆ ರಿಲ್ಯಾಕ್ಸ್ ಎನಿಸುತ್ತದೆ. ದ್ವಿತೀಯಾರ್ಧದಲ್ಲಿ ಸರಿಯಾಗಿ ಸಿನಿಮಾ ಶುರುವಾಗುತ್ತದೆ. ಸಿನಿಮಾದಲ್ಲಿ ಕಾಮೆಡಿ ಸಖತ್ತಾಗಿ ವರ್ಕೌಟ್ ಆಗಿದೆ.
ಇದನ್ನೂ ಓದಿ: Vijay-Rashmika Mandanna: ಕಿರಿಕ್ ಚೆಲುವೆಯ ಮುಡಿಗೆ ರೆಡ್ ರೋಸ್ ಇಟ್ಟ ವಿಜಯ್! ವಾರಿಸು ಸಖತ್ ಫೋಟೋಸ್
ಶಾಮ್, ಶ್ರೀಕಾಂತ್, ಶರತ್ ಕುಮಾರ್, ಪ್ರಕಾಶ್ ರಾಜ್, ರಶ್ಮಿಕಾ ಮಂದಣ್ಣ, ಯೋಗಿ ಬಾಬು, ಜಯಸುಧಾ, ಸಂಗೀತಾ ಕ್ರಿಶ್, ಸಂಯುಕ್ತ ಷಣ್ಮುಘನಾಥನ್, ನಂದಿನಿ ರೈ, ಗಣೇಶ್ ವೆಂಕಟ್ರಾಮನ್, ಶ್ರೀಮನ್, ವಿಟಿವಿ ಗಣೇಶ್, ಪ್ರಭು, ಸುಮನ್, ಖುಷ್ಬು - ಪಾತ್ರ ಸಿನಿಮಾಗೆ ಬಲ ಕೊಡುತ್ತದೆ.
ಸಂಗೀತ ನಿರ್ದೇಶಕ ಎಸ್ ಥಮನ್ ಅವರ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಜಾನಿ ಮಾಸ್ಟರ್ ಅವರ ರಂಜಿತಮೆ ಸಖತ್ತಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ವಿಜಯ್ ಅಭಿನಯದ ವಾರಿಸು ಅವರ ಅಭಿಮಾನಿಗಳಿಗೆ ಸಖತ್ ಟ್ರೀಟ್ ಎನ್ನುವುದರಲ್ಲಿ ನೋ ಡೌಟ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ