Rashmika Mandanna: ನನ್ನನ್ನು ನೋಡಿ ಸ್ವಲ್ಪ ಕಲಿಯಿರಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ..?

New Workout Video: ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ ಜೀವನದ ಒಂದು ಲಕ್ಷಣ ಎಂದರೆ ತಪ್ಪಾಗದು. ಆದರೆ ಸಾಕಷ್ಟು ಮಂದಿ ಬೆಳಗೆದ್ದು ವ್ಯಾಯಾಮ ಮಾಡಲು ತಮಗೆ ಪ್ರೇರಣೆ ಬೇಕೆಂದು ಹೇಳುತ್ತಿರುತ್ತಾರೆ. ಅಂತಹವರಿಗೆ ರಶ್ಮಿಕಾ ಇಲ್ಲೊಂದು ವಿಡಿಯೋ ಪೋಸ್ಟ್​ ಮಾಡಿದ್ದು, ಬುದ್ಧಿಮಾತು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಫಿಟ್ನೆಸ್​ ಫ್ರೀಕ್​ ಅನ್ನೋದು ಗೊತ್ತೇ ಇದೆ. ಅವರ ಹಳೇ ವರ್ಕೌಟ್​ ವಿಡಿಯೋ ನೋಡಿದರೆ ಸಾಕು ಅದು ಅರ್ಥವಾಗುತ್ತದೆ. ಲಾಕ್​ಡೌನ್​ನಲ್ಲಿ ಮನೆಯಲ್ಲಿದ್ದಾಗಲೂ ರಶ್ಮಿಕಾ ವ್ಯಾಯಾಮ ಮಾಡುತ್ತಾ ಬೆವರಿಳಿಸುತ್ತಿದ್ದರು. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವ ನಟಿ,  ತಮ್ಮ ಫಿಟ್ನೆಸ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಅವರು ಜಿಮ್​ನಲ್ಲಿ ಬೆವರಿಳಿಸುವ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಈ ಹಿಂದೆ ಅವರು ಗೋವಾಗೆ ಪ್ರವಾಸಕ್ಕೆಂದು ಹೋಗಿದ್ದಾಗಲೂ ಕಡಲ ಕಿನಾರೆಯಲ್ಲಿ ತುಂಡುಡುಗೆ ಧರಿಸಿ, ವರ್ಕೌಟ್​ ಮಾಡಿದ್ದರು. ಅದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈಗಲೂ ಸಹ ಲಿಲ್ಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ವರ್ಕೌಟ್​ ಮಾಡಲು ಇಷ್ಟವಿದ್ದರೂ, ನೆವ ಹೇಳುವವರಿಗೆ ಒಂದು ಕಿವಿ ಮಾತು ಹೇಳಿದ್ದಾರೆ. ಜೊತೆಗೆ ವಿಡಿಯೋ ಸಹ ಹಂಚಿಕೊಂಡಿದ್ದಾರೆ. 

ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ ಜೀವನದ ಒಂದು ಲಕ್ಷಣ ಎಂದರೆ ತಪ್ಪಾಗದು. ಆದರೆ ಸಾಕಷ್ಟು ಮಂದಿ ಬೆಳಗೆದ್ದು ವ್ಯಾಯಾಮ ಮಾಡಲು ತಮಗೆ ಪ್ರೇರಣೆ ಬೇಕೆಂದು ಹೇಳುತ್ತಿರುತ್ತಾರೆ. ಅಂತಹವರಿಗೆ ರಶ್ಮಿಕಾ ಇಲ್ಲೊಂದು ವಿಡಿಯೋ ಪೋಸ್ಟ್​ ಮಾಡಿದ್ದು, ಬುದ್ಧಿಮಾತು ಹೇಳಿದ್ದಾರೆ.ವ್ಯಾಯಾಮ ಮಾಡಲು ಪ್ರೇರಣೆಬೇಕೆಂದು ಏಕೆ ಹೇಳುತ್ತೀರಿ..! ನನ್ನನ್ನು ನೋಡಿ ಸ್ವಲ್ಪ ಕಲಿಯಿರಿ ಅಂತ ತಮ್ಮ ಫಿಟ್ನೆಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲೂ ಒಂದು ಸಖತ್ ವರ್ಕೌಟ್​ ವಿಡಿಯೋ ಪೋಸ್ಟ್​ ಮಾಡಿದ್ದಾರೆ.


ಸ್ಯಾಂಡಲ್​ವುಡ್​ನಿಂದ ಟಾಲಿವುಡ್​ಗೆ ಹೋಗಿ ಅಲ್ಲೇ ಹೆಸರು ಮಾಡುತ್ತಿರುವ ನಟಿಯರಲ್ಲಿ ರಶ್ಮಿಕಾ ಸಹ ಒಬ್ಬರು. ರಶ್ಮಿಕಾ, ತೆಲುಗಿನಲ್ಲಿ ಚಲೋ ಸಿನಿಮಾದ ಮೂಲಕ ಟಾಲಿವುಡ್​ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡವರು. ಈಗ ಸ್ಯಾಂಡಲ್​ವುಡ್​ಗಿಂತ ಹೆಚ್ಚಾಗಿ ತೆಲುಗಿನ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಇನ್ನು ಶರ್ವಾನಂದ ಜೊತೆ ಹಾಗೂ ಅಲ್ಲು ಅರ್ಜುನ್ ಜೊತೆ ಪ್ರತ್ಯೇಕವಾದ ಸಿನಿಮಾಗಳಲ್ಲಿ ವ್ಯಸ್ತವಾಗಿದ್ದಾರೆ. ಜೊತೆಗೆ ತಮಿಳಿನಲ್ಲಿ ಮತ್ತೊಂದು ಪ್ರಾಜೆಕ್ಟ್ ತನ್ನದಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Published by:Anitha E
First published: