• Home
  • »
  • News
  • »
  • entertainment
  • »
  • Rashmika-Samantha: ಸಮಂತಾ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್​​; ಸ್ಯಾಮ್​ ಕಾಯಿಲೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

Rashmika-Samantha: ಸಮಂತಾ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್​​; ಸ್ಯಾಮ್​ ಕಾಯಿಲೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

ಸಮಂತಾ, ರಶ್ಮಿಕಾ ಮಂದಣ್ಣ

ಸಮಂತಾ, ರಶ್ಮಿಕಾ ಮಂದಣ್ಣ

ಸಮಂತಾ ವಿಚಾರದಲ್ಲಿ ನಾನು ಪೊಸೆಸಿವ್​ ಎಂದು ರಶ್ಮಿಕಾ ಹೇಳಿದ್ದು, ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಸದಾ ಸಮಂತಾಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  • Share this:

ನಟಿ ಸಮಂತಾ (Samantha) ಹಾಗೂ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೌತ್​ ಇಂಡಸ್ಟ್ರಿಯ ಟಾಪ್​ ಹೀರೋಯಿನ್​​ಗಳು. ಬಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಮಣಿಯರು. ಪುಪ್ಪ ಯಶಸ್ಸಿನ ಬಳಿಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ ಸಿನಿಮಾಗಳಲ್ಲಿ (Bollywood Movies) ಅಭಿನಯಿಸುತ್ತಿದ್ದಾರೆ. ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ ಸಮಂತಾ ಅಭಿನಯದ ಯಶೋದ ಸಿನಿಮಾ (Yashoda Movie) ಕೂಡ ತೆರೆಕಂಡು ಸೂಪರ್​ ಸಕ್ಸಸ್​ ಕಂಡಿದೆ. ಆರೋಗ್ಯ ಸಮಸ್ಯೆಯಿಂದ (Health Problem) ಬಳಲುತ್ತಿರುವ ಸಮಂತಾ ರುತ್​ ಪ್ರಭು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ಸ್ಯಾಮ್​ ಕಾಯಿಲೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತಾಡಿದ್ದಾರೆ.


ಸಮಂತಾ ಬಗ್ಗೆ ರಶ್ಮಿಕಾ ಮನದಾಳದ ಮಾತು


ತಮಿಳಿನ ವರಿಸು ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ತೊಡಗಿಕೊಂಡಿದ್ದಾರೆ. ಇದೆ ವೇಳೆ ಸಂದರ್ಶನವೊಂದರಲ್ಲಿ ಮಾತಾಡಿದ ರಶ್ಮಿಕಾ, ನಟಿ ಸಮಂತಾ ರುತ್​ ಪ್ರಭು ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಒಳ್ಳೆ ಹೃದಯವುಳ್ಳ ವ್ಯಕ್ತಿ ಎಂದು ಹೇಳಿದ್ದಾರೆ.


Rashmika Mandanna Says She's Extremely Possessive of Samantha Reacts To Her Myositis Diagnosis
ಸಮಂತಾ, ರಶ್ಮಿಕಾ ಮಂದಣ್ಣ


ಸಮಂತಾ ವಿಚಾರದಲ್ಲಿ ನಾನು ಪೊಸೆಸಿವ್​


ಸಮಂತಾ ವಿಚಾರದಲ್ಲಿ ನಾನು ಪೊಸೆಸಿವ್​ ಎಂದು ರಶ್ಮಿಕಾ ಹೇಳಿದ್ದು, ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಜೊತೆಗೆ ಅವರನ್ನು ರಕ್ಷಿಸಲು ಬಯಸುತ್ತೇನೆ. ಸದಾ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.



ಶೀಘ್ರದಲ್ಲೇ ಗುಣಮುಖರಾಗಿ ಶೂಟಿಂಗ್​ಗೆ ಮರಳುತ್ತಾರೆ


ಮೈಯೋಸಿಟಿಸ್​ ಕಾಯಿಲೆ ಬಗ್ಗೆ ಸಮಂತಾ ಹೇಳಿಕೊಂಡಾಗ ನನಗೆ ತುಂಬಾ ಬೇಸರವಾಗಿತ್ತು. ಸದ್ಯಕ್ಕೆ ಸಮಂತಾ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಶೂಟಿಂಗ್​ಗೆ ಮರಳುತ್ತಾರೆ ಎಂದು ನಟಿ ರಶ್ಮಿಕಾ ಹೇಳಿದ್ದಾರೆ.


Rashmika Mandanna Says She's Extremely Possessive of Samantha Reacts To Her Myositis Diagnosis
ಸಮಂತಾ, ರಶ್ಮಿಕಾ ಮಂದಣ್ಣ


ಪುಪ್ಪ ಸಿನಿಮಾದಲ್ಲಿ ಮಿಂಚಿದ ನಟಿಯರು


ಟಾಲಿವುಡ್​ನ ಪುಪ್ಪಾ ಸಿನಿಮಾ ಈ ಇಬ್ಬರು ನಟಿ ಮಣಿಯರಿಗೆ ಉತ್ತಮ ಫ್ರೇಮ್​ ತಂದುಕೊಟ್ಟ ಸಿನಿಮಾ ಆಗಿದೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅಭಿನಯಿಸಿದ್ರೆ. ಇತ್ತ ಇದೇ ಐಟಂ ಸಾಂಗ್​ ನಲ್ಲಿ ನಟಿಸಿದ ಸಮಂತಾ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು. ಸಮಂತಾ ಡ್ಯಾನ್ಸ್​ಗೆ ಅಭಿಮಾನಿಗಳು ಫಿದಾ ಆದ್ರು. ಬಳಿಕ ಇಬ್ಬರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚಿದ್ರು.


ಇದನ್ನೂ ಓದಿ: Aamir Khan-NTR: ಸೌತ್​ ಸಿನಿಮಾದತ್ತ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್! NTR ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್!?


ಬಾಲಿವುಡ್​ನಿಂದ ಆಫರ್​ಗಳ ಸುರಿಮಳೆ


ಪುಪ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಹಾಗೂ ಸಮಂತಾಗೆ ಬಾಲಿವುಡ್​ನಿಂದ ಆಫರ್​ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್​ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು.


ಸಮಂತಾ ಕೈ ತಪ್ಪಿತು ಸಿನಿಮಾಗಳು


ಇತ್ತ ಅನಾರೋಗ್ಯಕ್ಕೆ ಒಳಗಾದ ಸಮಂತಾಗೆ ಸಿಕ್ಕ ಬಾಲಿವುಡ್ ಸಿನಿಮಾ ಆಫರ್​ಗಳು ಕೈತಪ್ಪಿ ಹೋಗಿದೆ. ಶೂಟಿಂಗ್​ ಕೆಲಸದಿಂದ ಬ್ರೇಕ್​ ತೆಗೆದುಕೊಂಡಿರುವ ಸಮಂತಾ, ಸಂಪೂರ್ಣ ಗುಣಮುಖರಾಗುವ ವರೆಗೂ ನಟಿಸೋದಿಲ್ಲ ಎಂದು 3 ತಿಂಗಳು ವಿಶ್ರಾಂತಿಯಲ್ಲಿದ್ದಾರೆ. ಈ ಹಿನ್ನೆಲೆ ಕೆಲ ಸಿನಿಮಾದಿಂದ ಅವ್ರೇ ಹೊರನಡೆದಿದ್ದಾರೆ. ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಚಿತ್ರ ಫೆಬ್ರವರಿಯಲ್ಲಿ ರಿಲೀಸ್​ ಆಗಲಿದೆ.

Published by:ಪಾವನ ಎಚ್ ಎಸ್
First published: