Rashmika Mandanna: ರಶ್ಮಿಕಾಳ ಹಿಂದಿನ 5 ಸಿನಿಮಾಗಳ ಕಲೆಕ್ಷನ್ ಎಷ್ಟು ಗೊತ್ತಾ? ಕೋಟಿಗಳಿಗೆ ಬೆಲೆನೇ ಇಲ್ವಾ ಗುರೂ..!

ಈ ನಟಿ ಕೆಲವೇ ವರ್ಷಗಳಲ್ಲಿ ತಾನು ಅಭಿನಯಿಸಿದ ಹಿಟ್ ಚಿತ್ರಗಳಿಂದ ತುಂಬಾನೇ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಬಹುದು. ಬನ್ನಿ ಹಾಗಾದರೆ ಈ ನಟಿ ನಟಿಸಿರುವ ಐದು ಹಿಟ್ ಚಿತ್ರಗಳ ಪಟ್ಟಿ ಇಲ್ಲಿದೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಈಗ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ರಶ್ಮಿಕಾ ಮಂದಣ್ಣ (Rasmika Mandanna) ಅವರು ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅವರು 2016 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ 'ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ನಟನೆ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು, ಇದನ್ನು ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿದ್ದರು. ಚಲನಚಿತ್ರಗಳ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ನಂತರ, ಅವರು ತೆಲುಗಿನ ಚಿತ್ರ ‘ಗೀತಾ ಗೋವಿಂದಂ’ (Geetha Govindam), ‘ಡಿಯರ್ ಕಾಮ್ರೇಡ್’ (Dear Comrade), ‘ಸರಿಲೇರು ನೀಕೆವ್ವರು’ (Sarileru Neekevvaru), ‘ಭೀಷ್ಮ’ (Bheeshma) ಮತ್ತು ‘ಸುಲ್ತಾನ್’ (Sultan) ನಂತಹ ಚಲನಚಿತ್ರಗಳೊಂದಿಗೆ ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಗಳಿಸಿದರು. ಅವರು ಈಗ ಟಾಲಿವುಡ್ ಮತ್ತು ಬಾಲಿವುಡ್ (Bollywood) ಚಿತ್ರಗಳನ್ನು ಹೊಂದಿರುವ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಪ್ರಸ್ತುತ, 'ಮಿಶನ್ ಮಜ್ನು' (Misson Majnu) ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ರಶ್ಮಿಕಾ ಸಜ್ಜಾಗುತ್ತಿದ್ದಾರೆ.

ಈ ನಟಿ ಕೆಲವೇ ವರ್ಷಗಳಲ್ಲಿ ತಾನು ಅಭಿನಯಿಸಿದ ಹಿಟ್ ಚಿತ್ರಗಳಿಂದ ತುಂಬಾನೇ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಬಹುದು. ಬನ್ನಿ ಹಾಗಾದರೆ ಈ ನಟಿ ನಟಿಸಿರುವ ಐದು ಹಿಟ್ ಚಿತ್ರಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ, ಅದು ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿ ಕಲೆಕ್ಷನ್ ಸಹ ಮಾಡಿಕೊಟ್ಟಿತು ಎಂದು ಹೇಳಬಹುದು.

1. ಸರಿಲೇರು ನೀಕೆವ್ವರು

‘ಸರಿಲೇರು ನೀಕೆವ್ವರು’ ಚಿತ್ರವು ಒಂದು ಆಕ್ಷನ್ ಮತ್ತು ಹಾಸ್ಯ ಭರಿತ ಚಿತ್ರವಾಗಿದ್ದು, ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿ ಕೊಂಡಿದ್ದರು. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರವನ್ನು ತಮಿಳಿನಲ್ಲಿ ‘ಇವಾನುಕ್ಕು ಸಾರಿಯಾನಾ ಆಲ್ ಇಲೈ’ ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಇದು ತಮಿಳುನಾಡಿನ 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ವಿಶ್ವದಾದ್ಯಂತ 260 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಗಳಿಸಿದೆ.

2. ಭೀಷ್ಮ

ಕೋವಿಡ್-19 ನಿಂದಾಗಿ ವಿಶ್ವಾದ್ಯಂತ ಲಾಕ್‌ಡೌನ್ ಹೇರುವ ಕೇವಲ ಒಂದು ತಿಂಗಳ ಮೊದಲು, ವೆಂಕಿ ಕುಡುಮುಲಾ ಅವರ ಭೀಷ್ಮ ಚಿತ್ರದಲ್ಲಿ ನಟ ನೀತಿನ್ ಮತ್ತು ರಶ್ಮಿಕಾ ನಟಿಸಿದ್ದು, ಫೆಬ್ರವರಿ 21, 2020 ರಂದು ಬಿಡುಗಡೆಯಾಯಿತು. ರಶ್ಮಿಕಾ ಮತ್ತು ನೀತಿನ್ ಅವರ ತೆರೆಯ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಚಿತ್ರವು ಬರೀ ಏಳು ದಿನಗಳಲ್ಲಿ ವಿಶ್ವದಾದ್ಯಂತ 40 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿತ್ತು.

3. ಪೊಗರು

ಪೊಗರು ಕನ್ನಡ ಚಿತ್ರದಲ್ಲಿ ನಟ ಧ್ರುವ ಸರ್ಜಾ ಅವರ ಜೊತೆ ರಶ್ಮಿಕಾ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದರು. ಕನ್ನಡ ಚಲನಚಿತ್ರವನ್ನು ಅರುಣ ಬಾಲಾಜಿ ಬರೆದಿದ್ದಾರೆ ಮತ್ತು ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಪೊಗರು ಫೆಬ್ರವರಿ 19, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರವು ಬರೀ 2 ದಿನಗಳಲ್ಲಿ 21 ಕೋಟಿ ರೂಪಾಯಿ ಹಣ ಗಳಿಸಿತು. ಸಕ್ಸಸ್ ಮೀಟ್ ನಲ್ಲಿ ನಿರ್ಮಾಪಕರು ಘೋಷಿಸಿದ ಹಾಗೆ ಈ ಚಲನಚಿತ್ರವು 6 ದಿನಗಳಲ್ಲಿ 45 ಕೋಟಿ ರೂಪಾಯಿ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಜೊತೆ ಮದುವೆ, ಕೊನೆಗೂ ಮೌನ ಮುರಿದ ದೇವರಕೊಂಡ

4. ಸುಲ್ತಾನ್

ಬಕ್ಕಿಯಾರಾಜ್ ಕಣ್ಣನ್ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿ ಮತ್ತು ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನಟಿ ಮಂದಣ್ಣ ಅವರ ಕಾಲಿವುಡ್ ಪಾದಾರ್ಪಣೆಯನ್ನು ಸೂಚಿಸುತ್ತದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಎಸ್ ಆರ್ ಪ್ರಭು ನಿರ್ಮಿಸಿದ ಸಂಪೂರ್ಣ ಕುಟುಂಬ ಮತ್ತು ಆಕ್ಷನ್ ಎಂಟರ್ ಟೈನರ್ ಚಿತ್ರ. ಬಾಕ್ಸ್ ಆಫೀಸ್ ಇಂಡಿಯಾದ ವರದಿಗಳ ಪ್ರಕಾರ, ಸುಲ್ಥಾನ್ ವಿಶ್ವದಾದ್ಯಂತ ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ 12 ಕೋಟಿ ರೂ.ಗಳನ್ನು (ನೆಟ್) ಗಳಿಸಿದೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ಜೊತೆ ಇದೇ ಕಾರಣಕ್ಕೆ ಬ್ರೇಕಪ್​, 4 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ!

5. ಪುಷ್ಪಾ: ದಿ ರೈಸ್

ರಶ್ಮಿಕಾ ಅವರ ಇತ್ತೀಚಿನ ಹಿಟ್ ಚಿತ್ರ ಎಂದರೆ ಅದು ನಟ ಅಲ್ಲು ಅರ್ಜುನ್ ಅವರ ಜೊತೆಗೆ ನಟಿಸಿದ ಪುಷ್ಪಾ: ದಿ ರೈಸ್ ಎಂದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸುಕುಮಾರ್ ಅವರು ಬರೆದು ನಿರ್ದೇಶಿಸಿದ ಪುಷ್ಪಾ ಚಿತ್ರವು ಡಿಸೆಂಬರ್ 17, 2021 ರಂದು ಬಿಡುಗಡೆ ಮಾಡಲಾಯಿತು. ಈ ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಆಕ್ಷನ್ ಚಿತ್ರವು 50 ದಿನಗಳಲ್ಲಿ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 365 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಗಳಿಸಿದೆ.
Published by:Vasudeva M
First published: