ಬೆಳ್ಳಂದೂರು ಕೆರೆಯಲ್ಲಿ ಮುಳುಗಿ ಫೋಟೋಶೂಟ್​ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಇಲ್ಲಿದೆ....

ನೀರಿನ ಮಾಲಿನ್ಯವನ್ನು ತಡೆಗಟ್ಟಲು ಫೋಟೋಶೂಟ್​ ಮಾಡಿಸಿದ್ದ ನಟಿ ರಶ್ಮಿಕಾ ಮಂದಣ್ಣ ಸ್ನೇಹಿತರ ಮನೆಯ ಈಜುಕೊಳದಲ್ಲಿ ಅಂಡರ್​ವಾಟರ್​ ಫೋಟೋಶೂಟ್​ ಮಾಡಿಸಿ ಅದಕ್ಕೆ ಎಫೆಕ್ಟ್​ ಕೊಡಿಸಿದ್ದರು. ಉಳಿದ 2-3 ಫೋಟೋಗಳನ್ನು ಬೆಳ್ಳಂದೂರು ಕೆರೆಯ ಬಳಿ ತೆಗೆಸಿಕೊಂಡಿದ್ದರು. ಆದರೆ, ಆಕೆ ಬೆಳ್ಳಂದೂರು ಕೆರೆಯೊಳಗೇ ಮುಳುಗಿ ಫೋಟೋಶೂಟ್​ ಮಾಡಿಸಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿತ್ತು.

sushma chakre | news18
Updated:December 15, 2018, 5:36 PM IST
ಬೆಳ್ಳಂದೂರು ಕೆರೆಯಲ್ಲಿ ಮುಳುಗಿ ಫೋಟೋಶೂಟ್​ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಇಲ್ಲಿದೆ....
ರಶ್ಮಿಕಾ ಮಂದಣ್ಣ
  • News18
  • Last Updated: December 15, 2018, 5:36 PM IST
  • Share this:
ಕೆರೆಗಳ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನೀರೊಳಗೆ ಫೋಟೋಶೂಟ್​ ಮಾಡಿಸಿ ಸುದ್ದಿಯಾಗಿದ್ದರು ರಶ್ಮಿಕಾ. ಬೆಂಗಳೂರಿನ ಅತ್ಯಂತ ಕಲುಷಿತ ಕೆರೆಯಾದ ಬೆಳ್ಳಂದೂರು ಕೆರೆಯೊಳಗೆ ಇಳಿದು ರಶ್ಮಿಕಾ ಫೋಟೋಶೂಟ್​ ಮಾಡಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆ ಫೋಟೋಗಳು ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ, ರಾಸಾಯನಿಗಳಿಂದ ತುಂಬಿರುವ ಬೆಳ್ಳಂದೂರು ಕೆರೆಯ ನೀರಿನಲ್ಲಿ ಫೋಟೋಶೂಟ್​ ಮಾಡಿಸಲು ರಶ್ಮಿಕಾ ಹೇಗೆ ಧೈರ್ಯ ಮಾಡಿದರು? ಅಥವಾ ಬೇರೆಲ್ಲೋ ಫೋಟೋಶೂಟ್​ ಮಾಡಿಸಿ ಬೆಳ್ಳಂದೂರು ಕೆರೆ ಎಂದು ಹೇಳುತ್ತಿದ್ದಾರಾ? ಎಂಬ ಪ್ರಶ್ನೆಗಳು ಕೂಡ ಅಭಿಮಾನಿಗಳಲ್ಲಿ ಎದ್ದಿದ್ದವು.

ಆ ಎಲ್ಲ ಪ್ರಶ್ನೆಗಳಿಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ. ತಮ್ಮ ಫೋಟೋಶೂಟ್​ನ ಫೋಟೋಗಳನ್ನು ನಿನ್ನೆ ಟ್ವಿಟ್ಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ತಾನೆಲ್ಲೂ ಅವುಗಳನ್ನು ಬೆಳ್ಳಂದೂರು ಕೆರೆಯಲ್ಲಿ ಇಳಿದು ತೆಗೆದ ಫೋಟೋಗಳೆಂದು ಹೇಳಿಯೇ ಇಲ್ಲ. ಯಾರೋ ಒಬ್ಬರು ಆ ರೀತಿ ಸುದ್ದಿ ಪ್ರಕಟಿಸಿದರೆಂದು ಎಲ್ಲರೂ ಅದನ್ನೇ ನಂಬಿದ್ದಾರೆ ಎಂದಿದ್ದಾರೆ. ಅಸಲಿ ವಿಷಯ ಏನೆಂದರೆ ರಶ್ಮಿಕಾ ಬೆಳ್ಳಂದೂರು ಕೆರೆಯ ಬಳಿ ಫೋಟೋಶೂಟ್​ ಮಾಡಿದ್ದೇನೋ ನಿಜ. ಆದರೆ, ಆ ನೀರನ್ನು ಕಾಲಿಗೆ ತಾಗಲು ಕೂಡ ಬಿಟ್ಟಿಲ್ಲವಂತೆ. ಮತ್ತೆ ಆ ನೀರಲ್ಲಿ ಮುಳುಗಿದ್ದು ಹೇಗೆ ಅಂತೀರಾ?ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕಗಳು ತುಂಬಿ ಕೆರೆಯ ನಡುವೆಯೇ ಬೆಂಕಿ ಹೊತ್ತಿಕೊಂಡಿತ್ತು. ಮಳೆ ಬರುವಾಗ ಕೆರೆಯ ರಾಸಾಯನಿಕಗಳು ನೊರೆಯಾಗಿ ಮಾರ್ಪಾಡುಗೊಂಡು ರಸ್ತೆಯಲ್ಲೆಲ್ಲ ಬಿಳಿ ನೊರೆ ತುಂಬಿಕೊಳ್ಳುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು.ಹೀಗಾಗಿ, ಕೆರೆಯನ್ನು ಸಂರಕ್ಷಿಸಲು ಜನರಲ್ಲಿ ಫೋಟೋಶೂಟ್​ ಮೂಲಕ ಜಾಗೃತಿ ಮೂಡಿಸೋಣ ಎಂದು ಶಾಲಾದಿನಗಳಲ್ಲಿ ರಶ್ಮಿಕಾ ಅವರ ಸೀನಿಯರ್​ ಆಗಿದ್ದ ಸನ್ಮತಿ ಪ್ರಸಾದ್​ ಅವರು ಕೇಳಿದಾಗ ರಶ್ಮಿಕಾ ಕೂಡ ತನ್ನಿಂದ ಒಳ್ಳೆಯ ಕೆಲಸವಾಗುವುದಾದರೆ ಆಗಲಿ ಎಂದು ಒಪ್ಪಿಗೆ ಸೂಚಿಸಿದ್ದರು. ಜನರಲ್ಲಿ ಜಾಗೃತಿ ಮೂಡಿಸಲು ಈ ಫೋಟೋಶೂಟ್​ ಮಾಡಿಸಿದ್ದರಿಂದ ಇದಕ್ಕೆ ರಶ್ಮಿಕಾ ಯಾವ ಸಂಭಾವನೆಯನ್ನೂ ಪಡೆದಿಲ್ಲ.

ಮೊದಲು ರಶ್ಮಿಕಾ ಅವರ ಸ್ನೇಹಿತರ ಮನೆಯ ಈಜುಕೊಳದಲ್ಲಿ ಫೋಟೋಶೂಟ್​ ಮಾಡಲಾಗಿತ್ತು. ಪ್ಲಾಸ್ಟಿಕ್​ ಮತ್ತಿತರ ವಸ್ತುಗಳು ನೀರಿನಲ್ಲಿ ತೇಲುತ್ತಿರುವಾಗ ಅದರ ಮಧ್ಯದಲ್ಲಿ ರಶ್ಮಿಕಾ ಇರುವಂತೆ ಅಂಡರ್​ ವಾಟರ್​ನಲ್ಲಿ ಫೋಟೋಶೂಟ್​ ಮಾಡಲಾಗಿತ್ತು. ಅದಾದ ಬಳಿಕ, ಬೆಳ್ಳಂದೂರು ಕೆರೆಯ ದಡದಲ್ಲಿ ನಿಂತ ರಶ್ಮಿಕಾ ಅವರ ಫೋಟೋಶೂಟ್​ ಮಾಡಲಾಗಿತ್ತು. ಒಂದೆಡೆ ಬಿಳಿನೊರೆ ಇನ್ನೊಂದೆಡೆ ಗ್ಲಾಮರಸ್​ ಆಗಿ ದಡದಲ್ಲಿ ನಿಂತ ರಶ್ಮಿಕಾ ಅವರ ಆ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದವು.ಆ ಫೋಟೋಗಳನ್ನು ತಮ್ಮ ಟ್ವಿಟ್ಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ಬೆಳ್ಳಂದೂರು ಕೆಎರ ಎಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಎಂಬುದು ನನಗೆ ಅಲ್ಲಿಗೇ ಹೋಗಿ ನೋಡುವವರೆಗೂ ತಿಳಿದಿರಲಿಲ್ಲ. ಜನರಿಗೆ ಕೆರೆ ಮತ್ತು ನೀರನ್ನು ಶುದ್ಧವಾಗಿಟ್ಟುಕೊಳ್ಳಿ ಎಂದು ಹೇಳುವಷ್ಟು ನಾನು ದೊಡ್ಡವಳಲ್ಲ. ಆದರೆ, ಇಂತಹ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ ಎಂಬುದನ್ನು ಕೇಳಿದರೆ ಮನಸು ಛಿದ್ರವಾಗುತ್ತದೆ. ನಮ್ಮ ಸುತ್ತಮುತ್ತಲೂ ಅನೇಕ ಕಡೆ ಇದೇ ರೀತಿಯ ಪರಿಸ್ಥಿತಿಯಿದೆ ಎಂದು ಬರೆದುಕೊಂಡಿದ್ದರು.ಅದನ್ನು ನೋಡಿ ತಪ್ಪಾಗಿ ಭಾವಿಸಿದ ಹಲವರು ರಶ್ಮಿಕಾ ಬೆಳ್ಳಂದೂರು ಕೆರೆಯೊಳಗೆ ಮುಳುಗಿ ಫೋಟೋಶೂಟ್​ ಮಾಡಿಸಿದ್ದಾರೆ ಎಂದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ಆ ನೀರನ್ನು ನೀವೇನಾದರೂ ನೋಡಿದರೆ ಹತ್ತಿರ ಹೋಗಲೂ ಭಯವಾಗುತ್ತದೆ. ಅಲ್ಲಿನ ಕೆಟ್ಟ ವಾಸನೆಯಿಂದ ರಸ್ತೆಯಲ್ಲಿ ಹೋಗುವಾಗಲೂ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಅಲ್ಲಿಗೆ ಹೋದಾಗ ನನಗೆ ಕಾರಿನಿಂದ ಕೆಳಗೆ ಇಳಿಯಲೂ ಸಾಧ್ಯವಾಗದಂತಹ ವಾತಾವರಣವಿತ್ತು. ಅಂದಮೇಲೆ, ನಾನು ಆ ನೀರಿನಲ್ಲಿ ಮುಳುಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದೇನೆ ಎಂದು ಜನರು ಹೇಗೆ ಅಂದುಕೊಂಡರೋ ಖಂಡಿತವಾಗಿಯೂ ನನಗೆ ಗೊತ್ತಾಗುತ್ತಿಲ್ಲ. ನಾನು ಬೆಳ್ಳಂದೂರು ಕೆರೆಯ ದಡದಲ್ಲಿ ನಿಂತು ಫೋಟೋಶೂಟ್​ ಮಾಡಿಸಿಕೊಂಡಿದ್ದೇನೋ ನಿಜ ಆದರೆ, ಅದರೊಳಗೆ ಇಳಿದಿಲ್ಲ ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂದೂರು ಕೆರೆಯಲ್ಲಿ ಮುಳುಗುವ ಮೂಲಕ ಕೆರೆಗಳ ರಕ್ಷಣೆಗೆ ಮುಂದಾದ ರಶ್ಮಿಕಾ..!

First published:December 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ