• Home
  • »
  • News
  • »
  • entertainment
  • »
  • Ranbir Kapoor-Rashmika Mandanna: ನಟ ರಣಬೀರ್ ಸೆಟ್​​ನಲ್ಲಿ ಹೇಗಿರ್ತಾರೆ? ರಶ್ಮಿಕಾ ಹೇಳಿದ್ದಾರೆ ಕೇಳಿ

Ranbir Kapoor-Rashmika Mandanna: ನಟ ರಣಬೀರ್ ಸೆಟ್​​ನಲ್ಲಿ ಹೇಗಿರ್ತಾರೆ? ರಶ್ಮಿಕಾ ಹೇಳಿದ್ದಾರೆ ಕೇಳಿ

ರಶ್ಮಿಕಾ ಮಂದಣ್ಭ

ರಶ್ಮಿಕಾ ಮಂದಣ್ಭ

ಬಾಲಿವುಡ್ ಲೈಫ್ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಬಗ್ಗೆ ಮತ್ತು ಶೂಟಿಂಗ್ ಸೆಟ್ ನಲ್ಲಿ ಅವರು ಮಾಡುವ ತುಂಟತನ ಮತ್ತು ಕುಚೇಷ್ಟೆಗಳ ಬಗ್ಗೆ ಮತ್ತು ರಣಬೀರ್ ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಸಹ ಹೇಳಿದರು.

  • Trending Desk
  • Last Updated :
  • Mumbai, India
  • Share this:

ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಚಿತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್ ನಲ್ಲಿ (Bollywood) ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಅಂತಾನೆ ಹೇಳಬಹುದು. ಹೌದು. ನಟಿ ಈಗಾಗಲೇ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಪ್ರೇಕ್ಷಕರ ಹೃದಯಗಳನ್ನು ಗೆದ್ದು, ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಅಂತ ಹೇಳಬಹುದು. ಈಗ, ಅವರು ಹಿಂದಿ ಚಲನಚಿತ್ರೋದ್ಯಮದಲ್ಲೂ ಉನ್ನತ ಸ್ಥಾನವನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ. ರಶ್ಮಿಕಾ ಇತ್ತೀಚೆಗೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ಚಿತ್ರದಲ್ಲಿ ನಟಿಸುವುದರೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕೆ ‘ಗುಡ್ ಬೈ’ (Good Bye) ಎಂದು ಹೆಸರಿಡಲಾಗಿದ್ದು, ಇದರಲ್ಲಿ ನೀನಾ ಗುಪ್ತಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಸಾಮಾನ್ಯವಾಗಿ, ದಕ್ಷಿಣ ಭಾರತದ ಚಿತ್ರೋದ್ಯಮದ ನಟಿಯರಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ತುಂಬಾ ವರ್ಷಗಳೇ ತೆಗೆದುಕೊಳ್ಳುತ್ತದೆ. ಆದರೆ ರಶ್ಮಿಕಾ ಅವರು ತಮ್ಮ ನಟನೆಯಿಂದ ಹಿಂದಿ ಚಿತ್ರರಂಗಕ್ಕೆ ಬೇಗನೆ ಲಗ್ಗೆ ಇಟ್ಟಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಂದರೆ ಇದರರ್ಥ ಭಾರತದಾದ್ಯಂತ ಸಿನಿ ರಸಿಕರಿಗೆ ರಶ್ಮಿಕಾ ಅವರ ನಟನೆ ಇಷ್ಟವಾಗಿದೆಯಂತ ಹೇಳಬಹುದು.


ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ರಶ್ಮಿಕಾ


ಒಟ್ಟಿನಲ್ಲಿ ನಟಿ ರಶ್ಮಿಕಾ ಅವರು ಒಂದಲ್ಲ ಒಂದು ಒಳ್ಳೆಯ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟಿ ಅಂತ ಹೇಳಿದರೆ ಸುಳ್ಳಲ್ಲ. ನಟಿ ತಮ್ಮ ಚಿತ್ರಗಳ ಯಶಸ್ಸಿನಿಂದ ತುಂಬಾನೇ ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು. ಈಗ ನಟಿ ಮತ್ತೆ ಸುದ್ದಿಯಲ್ಲಿರುವುದು ನಟ ರಣಬೀರ್ ಕಪೂರ್ ಅವರ ಬಗ್ಗೆ ಮಾತಾಡಿದ್ದು ಅಂತ ಹೇಳಬಹುದು ನೋಡಿ.


ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಶೀಘ್ರದಲ್ಲಿಯೇ ಕಾಣಿಸಿಕೊಳ್ಳಲಿರುವ ನಟಿ, ತಮ್ಮ ಹೊಸ ಸಹ ನಟನ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.


ರಶ್ಮಿಕಾ ಅವರು ರಣಬೀರ್ ಬಗ್ಗೆ ಹೇಳಿದ್ದೇನು?


ಬಾಲಿವುಡ್ ಲೈಫ್ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಬಗ್ಗೆ ಮತ್ತು ಶೂಟಿಂಗ್ ಸೆಟ್ ನಲ್ಲಿ ಅವರು ಮಾಡುವ ತುಂಟತನ ಮತ್ತು ಕುಚೇಷ್ಟೆಗಳ ಬಗ್ಗೆ ಮತ್ತು ರಣಬೀರ್ ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಸಹ ಹೇಳಿದರು.


ಇದನ್ನೂ ಓದಿ: Jogi Prem Birthday: ಮಧ್ಯ ರಾತ್ರಿಯೇ ಜೋಗಿ ಪ್ರೇಮ್ ಜನ್ಮ ದಿನ ಆಚರಣೆ! ಬರ್ತ್​ಡೇ ದಿನ ಊರಲ್ಲೇ ಇರಲ್ಲ K.D ಡೈರೆಕ್ಟರ್


ನಟಿ ರಶ್ಮಿಕಾ ಅವರು "ರಣಬೀರ್ ತನ್ನ ಎಲ್ಲಾ ತಂಡದ ಸದಸ್ಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವ್ಯಕ್ತಿ ಮತ್ತು ಅವರು ನಿಜವಾಗಿಯೂ ಒಬ್ಬ ಸೈನಿಕನಂತೆ ಕೆಲಸ ಮಾಡುತ್ತಾರೆ. ಅವರು ಎಲ್ಲರೊಂದಿಗೆ ಮಾತನಾಡುವ ಮತ್ತು ಶಾಂತ ರೀತಿಯಿಂದ ವರ್ತಿಸುವ ಅತ್ಯಂತ ಸರಳ ವ್ಯಕ್ತಿ" ಎಂದು ಹೇಳಿದರು.


"ಇಷ್ಟೊಂದು ಸಾಧನೆ ಮಾಡಿದವರು ಅಷ್ಟು ಸರಳ ಹೃದಯಿಯಾಗಿರುವುದು ತುಂಬಾ ಅಪರೂಪ ಮತ್ತು ಒಳ್ಳೆಯದು ಕೂಡ" ಎಂದು ನಟಿ ಹೇಳಿದರು.


ಸೆಟ್ ನಲ್ಲಿ ಹೇಗಿರ್ತಾರಂತೆ ರಣಬೀರ್?


ಸೆಟ್ ನಲ್ಲಿ ನಟ ರಣಬೀರ್ ತುಂಟತನ ತೋರುತ್ತಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಅವರು “ರಣಬೀರ್ ಬಗ್ಗೆ ಅದನ್ನು ಹೇಳಲು ಸಾಧ್ಯವಿಲ್ಲ, ಏಕೆಂದರೆ ನಾನು ಅವರಿಗಿಂತ ಹೆಚ್ಚು ತುಂಟತನ ಮಾಡುತ್ತೇನೆ” ಎಂದು ಹೇಳಿದರು. ಅವರು ನನ್ನನ್ನು ಕಿರಿಕಿರಿಗೊಳಿಸುವುದಕ್ಕಿಂತಲೂ ಹೆಚ್ಚಾಗಿ ನಾನೇ ಅವರನ್ನು ಹೆಚ್ಚು ಕಿರಿಕಿರಿಗೊಳಿಸುತ್ತಿದ್ದೆ. ರಣಬೀರ್ ಅವರು ತುಂಬಾನೇ ಒಳ್ಳೆಯ ವ್ಯಕ್ತಿ” ಎಂದು ಅವರು ಹೇಳಿದರು.


ಇದನ್ನೂ ಓದಿ: Kantara-Sapthami Gowda: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?


ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ರಶ್ಮಿಕಾ ಅವರು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಲ್ಲಿ ‘ಮಿಷನ್ ಮಜ್ನು’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ ರಶ್ಮಿಕಾ ಅವರು ತೆಲುಗು ನಟ ಅಲ್ಲು ಅರ್ಜುನ್ ಜೊತೆಯಲ್ಲಿ ಪುಷ್ಪಾ ಫ್ರ್ಯಾಂಚೈಸ್ ನ ಎರಡನೇ ಭಾಗದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದೆ.

Published by:Divya D
First published: