ರಶ್ಮಿಕಾ ಜಾಗಕ್ಕೆ ಹೊಸ ನಟಿ ಎಂಟ್ರಿ: ಶಂಕರ್-ರಾಮ್‌ಚರಣ್ ಮೆಗಾ ಪ್ರಾಜೆಕ್ಟ್​ಗೆ ಕಿಯಾರಾ ನಾಯಕಿ!

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣವೋ ಏನೋ ರಶ್ಮಿಕಾ ಮಂದಣ್ಣ ಕೆಲ ಬಿಗ್ ಪ್ರಾಜೆಕ್ಟ್​ಗಳನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಇತ್ತೀಚೆಗಿನ ಉದಾಹರಣೆ ರೋಬೋ, ಇಂಡಿಯನ್ ಖ್ಯಾತಿಯ ಮಾಸ್ಟರ್ ಡೈರೆಕ್ಟರ್ ಶಂಕರ್ ಅವರ ಹೊಸ ಸಿನಿಮಾ.

ಕಿಯಾರಾ ಅಡ್ವಾಣಿ ಹಾಗೂ ರಶ್ಮಿಕಾ ಮಂದಣ್ಣ

ಕಿಯಾರಾ ಅಡ್ವಾಣಿ ಹಾಗೂ ರಶ್ಮಿಕಾ ಮಂದಣ್ಣ

  • Share this:
ಸ್ಯಾಂಡಲ್​ವುಡ್​ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಗಳಲ್ಲೇ ಬ್ಯುಸಿ. ಈ ವರ್ಷ ರಿಲೀಸ್ ಆದ ಪೊಗರು ಚಿತ್ರದ ಬಳಿಕ ಅವರು ಬೇರೆ ಯಾವ ಕನ್ನಡ ಚಿತ್ರಕ್ಕೂ ಸೈನ್ ಮಾಡಿಲ್ಲ. ಅದಕ್ಕೆ ಕಾರಣ ಮುಗಿಲು ಮುಟ್ಟಿರುವ ಅವರ ಸಂಭಾವನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿಯೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಹೆಚ್ಚು ಬ್ಯುಸಿಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಅವರು ನಟಿಸಿರುವ ಮೊದಲ ತಮಿಳು ಸಿನಿಮಾ ಸುಲ್ತಾನ್ ಲಾಕ್‌ಡೌನ್‌ನಿಂದಾಗಿ ಓಟಿಟಿಯಲ್ಲಿ ಸದ್ದು ಮಾಡಿತ್ತು. ಈಗ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ ಸಿನಿಮಾ ತೆರೆಗೆ ಬರಲು ರೆಡಿಯಿದೆ. ಜೊತೆಗೆ ಮಿಷನ್ ಮಜ್ನೂ ಹಾಗೂ ಗುಡ್‌ಬೈ ಎಂಬ ಎರಡು ಬಾಲಿವುಡ್ ಸಿನಿಮಾಗಳಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.

ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣವೋ ಏನೋ ರಶ್ಮಿಕಾ ಮಂದಣ್ಣ ಕೆಲ ಬಿಗ್ ಪ್ರಾಜೆಕ್ಟ್​ಗಳನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಇತ್ತೀಚೆಗಿನ ಉದಾಹರಣೆ ರೋಬೋ, ಇಂಡಿಯನ್ ಖ್ಯಾತಿಯ ಮಾಸ್ಟರ್ ಡೈರೆಕ್ಟರ್ ಶಂಕರ್ ಅವರ ಹೊಸ ಸಿನಿಮಾ.

Sivakarthikeyan, Rashmika Mandanna, pushpa, National crush Rashmika Mandanna, mission majnu, jathi ratnalu, Anudeep, Actress Rashmika Mandanna, ಶಿವಕಾರ್ತಿಕೇಯನ್, ರಶ್ಮಿಕಾ ಮಂದಣ್ಣ, ತಮಿಳು ಸಿನಿಮಾ, ಕಾಲಿವುಡ್​ ಸಿನಿಮಾ,Rashmika Mandanna to pair up with Shivakarthikeyan in Kollywood movie ae
ರಶ್ಮಿಕಾ ಮಂದಣ್ಣ


ಹೌದು, ಕಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶಿಸಲಿರುವ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ನಾಯಕನಾಗಲಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ದಕ್ಷಿಣ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿತ್ತು. ಆದರೆ, ಆ ಸುದ್ದಿಗೆ ಸದ್ಯ ಬ್ರೇಕ್ ಬಿದ್ದಿದೆ. ಖುದ್ದು ನಿರ್ದೇಶಕ ಶಂಕರ್ ಅವರೇ ಅದಕ್ಕೆ ಅಂತ್ಯ ಹಾಡಿದ್ದು, ಕಿಯಾರಾ ಅಡ್ವಾಣಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 8 Elimination: ಇವತ್ತು ಬಿಗ್ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇ..!

2014ರಲ್ಲಿ ಫಗ್ಲಿ ಮೂಲಕ ಬಾಲಿವುಡ್ ಡೆಬ್ಯೂ ಮಾಡಿದ್ದ ಅವರು, ಎಂ ಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ, ಮಷಿನ್, ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್, ಗುಡ್ ನ್ಯೂಸ್, ಲಕ್ಷ್ಮಿ, ಇಂದೂ ಕಿ ಜವಾನಿ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶೇರ್‌ಶಾಹ್, ಭೂಲ್ ಭುಲೈಯ್ಯಾ 2, ಜುಗ್ ಜುಗ್ ಜೀಯೋ, ಮಿಸ್ಟರ್ ಲೆಲೆ ಹೀಗೆ ಬ್ಯಾಕ್ ಟು ಬ್ಯಾಕ್ ಬಾಲಿವುಡ್‌ನಲ್ಲೇ ಬ್ಯುಸಿಯಾಗಿದ್ದಾರೆ.

ಇನ್ನು ಬಿಟೌನ್ ಸುಂದರಿ ಕಿಯಾರಾ ಅಡ್ವಾನಿ ಅವರಿಗೆ ಟಾಲಿವುಡ್ ಹೊಸತೇನಲ್ಲ. 2018ರಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕರಾಗಿ ಭರತ್ ಅನೆ ನೇನು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕಿಯಾರಾ, 2019ರ ವಿನಯ ವಿಧೇಯ ರಾಮ ಚಿತ್ರದಲ್ಲಿ ರಾಮ್ ಚರಣ್ ತೇಜಾಗೆ ಜೋಡಿಯಾಗಿದ್ದರು.

ಇದನ್ನೂ ಓದಿ: Bigg Boss Kannada 8 Elimination: ನಗುತ್ತಲೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆದ ಶುಭಾ ಪೂಂಜಾ: ಕಣ್ಣೀರಿಟ್ಟ ಮಂಜು ಪಾವಗಡ..!

ಈಗ ಮತ್ತೆ ಮೆಗಾ ಪವರ್ ‌ಸ್ಟಾರ್‌ಗೆ ಮತ್ತೊಮ್ಮೆ ಮತ್ತೊಂದು ಮೆಗಾ ಪ್ರಾಜೆಕ್ಟ್​ನಲ್ಲಿ ಜೋಡಿಯಾಗಲಿದ್ದಾರೆ ಕಿಯಾರಾ ಅಡ್ವಾಣಿ. ವಿಶೇಷ ಅಂದರೆ ಕನ್ನಡದಲ್ಲೂ ಪವರ್, ಜೂಮ್, ಜಾಗ್ವಾರ್, ಆರೇಂಜ್ ಸೇರಿದಂತೆ ಇತ್ತೀಚೆಗಷ್ಟೇ ರಿಲೀಸ್ ಆದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಟಿಸಿದ್ದ ಯುವರತ್ನ ಚಿತ್ರಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಎಸ್‌ಎಸ್ ಥಮನ್ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ.
Published by:Anitha E
First published: