ಬರೀ ಕನ್ನಡ ಚಿತ್ರೋದ್ಯಮವಲ್ಲದೆ, ಬೇರೆ ಚಿತ್ರೋದ್ಯಮಗಳಾದ ತಮಿಳು, ತೆಲುಗು ಮತ್ತು ಹಿಂದಿ ಇಂಡಸ್ಟ್ರಿಗಳಲ್ಲಿಯೂ ನಟಿಸಿರುವ ನಟಿ ಅಂತ ಹೇಳಿದರೆ ಸಾಕು, ಅಭಿಮಾನಿಗಳಿಗೆ ನಾವು ರಶ್ಮಿಕಾ ಮಂದಣ್ಣ (Rashmika Mandanna) ಅವರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ಸರಿಯಾಗಿ ಊಹಿಸುತ್ತಾರೆ. ಅಷ್ಟರ ಮಟ್ಟಿಗೆ ಅವರ ಅಭಿನಯದಿಂದ ಈ ಎಲ್ಲಾ ಚಿತ್ರೋದ್ಯಮದಲ್ಲಿ (Film Industry) ಹೆಸರು ಮಾಡಿದ್ದಾರೆ. ಈಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವಂತಹ ನಟಿ (Actress) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟು ದಿನಗಳ ಕಾಲ ಅವರು ನಟಿಸಿದ ಪುಷ್ಪಾ ಚಿತ್ರದಿಂದ ತುಂಬಾನೇ ಸುದ್ದಿಯಲ್ಲಿದ್ದರು. ಈಗ ಮತ್ತೊಮ್ಮೆ ಈ ನಟಿ ಸುದ್ದಿಯಲ್ಲಿ ಇದ್ದಾರೆ. ಆದರೆ ಈ ಬಾರಿ ಇವರು ಸುದ್ದಿಯಲ್ಲಿ ಇರುವುದು ಒಳ್ಳೆಯ ಕಾರಣಕ್ಕಲ್ಲ ಬಿಡಿ.
ಹೌದು.. ನಟಿ ರಶ್ಮಿಕಾ ಮಂದಣ್ಣ ಅವರು ತಾವು ನಟಿಸಿರುವ ಮತ್ತು ನಟಿಸುತ್ತಿರುವ ಚಲನಚಿತ್ರಗಳ ನಿರ್ಮಾಪಕರಿಂದ ತಮ್ಮ ಮುದ್ದಿನ ನಾಯಿಗೆ ವಿಮಾನ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಾರೆ ಎಂಬ ವರದಿಗಳು ಈಗಾಗಲೇ ಆನ್‌ಲೈನ್ ನಲ್ಲಿ ಜೋರಾಗಿಯೇ ಹರಿದಾಡುತ್ತಿದ್ದುದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ನಗೆಪಾಟಲಿಗೆ ಗುರಿಯಾದ ರಶ್ಮಿಕಾ
ಈ ವರದಿಗಳು ನೋಡಿ ನಟಿ ರಶ್ಮಿಕಾ ಅವರು ಏನು ಹೇಳಲಿಲ್ಲವೇ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬೇಕಲ್ಲವೇ? ಈ ವರದಿಗಳು ರಶ್ಮಿಕಾ ಕಣ್ಣಿಗೆ ಬಿದ್ದ ನಂತರ ಶುಕ್ರವಾರ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ ನೋಡಿ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಟ್ವೀಟ್ ಮಾಡಿದ್ದಾರೆ. ಈ ವರದಿಯಿಂದ ರಶ್ಮಿಕಾ ಅವರು ನಗೆಪಾಟಲಿಗೆ ಗುರಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ನಾಯಿಗೂ ಬೇಕಂತೆ ಫ್ಲೈಟ್ ಟಿಕೆಟ್
'ರಶ್ಮಿಕಾ ತನ್ನ ಸಾಕು ನಾಯಿಗಾಗಿ ಫ್ಲೈಟ್ ಟಿಕೆಟ್ ಗಳನ್ನು ಕೇಳುತ್ತಾರೆ' ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಉಲ್ಲೇಖಿಸಿ, ನಟಿ ‘ರೋಲಿಂಗ್ ಆನ್ ದಿ ಫ್ಲೋರ್ ಲಾಫಿಂಗ್’ ಸ್ಮೈಲಿಯನ್ನು ಹಲವಾರು ಬಾರಿ ಟ್ವೀಟ್ ಮಾಡಿದ್ದಾರೆ ಮತ್ತು "ಹೇ ಇಷ್ಟೊಂದು ನೀಚರಾಗಬೇಡಿ. ಔರಾ ನನ್ನೊಂದಿಗೆ ಪ್ರಯಾಣಿಸಲು ನೀವು ಬಯಸಿದರೂ, ಅವಳು ನನ್ನೊಂದಿಗೆ ಸುತ್ತಾಡಲು ಬಯಸುವುದಿಲ್ಲ. ಹೈದರಾಬಾದ್ ನಲ್ಲಿ ಅವಳು ತುಂಬಾ ಸಂತೋಷವಾಗಿದ್ದಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು" ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Shivarajkumar: ಅನುಶ್ರೀಗೆ ಶಿವಣ್ಣ ಕೊಟ್ರು ಸೂಪರ್ ಗಿಫ್ಟ್, ಭಾವುಕರಾಗಿ ಹೀಗಂದ್ರು ನಿರೂಪಕಿ!
ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸುತ್ತಿರುವ ಹಿಂದಿ ಚಿತ್ರವಾದ ‘ಮಿಷನ್ ಮಜ್ನು’ ದೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ತನ್ನ ಮುದ್ದಿನ ನಾಯಿಗೆ ನಿರ್ಮಾಪಕರಿಂದ ವಿಮಾನ ಟಿಕೆಟ್ ಕೇಳುತ್ತಿದ್ದಾರೆ ಎಂಬ ಮಾಧ್ಯಮ ವರದಿಯನ್ನು ನಗೆಪಾಟಲಿಗೀಡು ಮಾಡಿದ್ದಾರೆ.
ಅವರು ಇಷ್ಟಕ್ಕೆ ಸುಮ್ಮನಾಗದೇ ಹಾಗೆಯೇ ತಮ್ಮ ಟ್ವೀಟ್ ಅನ್ನು ಮುಂದುವರೆಸಿ "ಕ್ಷಮಿಸಿ, ಆದರೆ ಇದು ನನ್ನ ದಿನವನ್ನು ಖುಷಿ ಖುಷಿಯಾಗಿ ಶುರುಮಾಡಲು ಸಹಾಯಮಾಡಿತು. ನನಗೆ ನಗು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ನೋಡಿ ಇದನ್ನು ಕೇಳಿ" ಅಂತ ನಟಿ ಬರೆದಿದ್ದಾರೆ. ನಿಮ್ಮ ಬಗ್ಗೆ ಈ ರೀತಿಯ ಇನ್ನೂ ಹಲವಾರು ಸುದ್ದಿ ವರದಿಗಳಿವೆ ಎಂದು ಅವರ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಬರೆದು ನಟಿಗೆ ಸೂಚಿಸಿದರು.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ ನಟಿ
ಇದಕ್ಕೆ ಪ್ರತಿಕ್ರಿಯಿಸಿದ ನಟಿ "ನಿಜವಾಗಿಯೂ? ದಯವಿಟ್ಟು ಅವುಗಳನ್ನು ನನಗೆ ಕಳುಹಿಸುತ್ತಲೇ ಇರಿ. ಓ ದೇವರೇ ನನ್ನ ಎಲ್ಲಾ ಪ್ರೀತಿಯ ಅಭಿಮಾನಿಗಳಿಗೆ ನನ್ನ ಬಗ್ಗೆ ಎಂತ ಎಂತಹ ಸುದ್ದಿಗಳನ್ನು ನೀಡಲಾಗುತ್ತಿದೆ ಅಂತ ನಾನು ನೋಡುತ್ತೇನೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Vikrant Rona: ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದಾ ಸ್ಟೆಪ್, ಫ್ಯಾನ್ಸ್ ಮಾಡಿರುವ ಈ ವಿಡಿಯೋ ಫುಲ್ ವೈರಲ್
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ರಶ್ಮಿಕಾ ಅವರು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸಿದ 'ಮಿಷನ್ ಮಜ್ನು' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಟಿ ಇನ್ನೊಬ್ಬ ಬಾಲಿವುಡ್ ನಟ ರಣಬೀರ್ ಕಪೂರ್ ಅವರೊಂದಿಗೆ 'ಅನಿಮಲ್' ಚಿತ್ರದಲ್ಲಿಯೂ ನಟಿಸಲಿದ್ದಾರೆ. ಈ ಚಿತ್ರವನ್ನು ಸಂದೀಪ್ ವಂಗಾ ರೆಡ್ಡಿ ನಿರ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ