ಕೊಡಗಿನ ಕುವರಿ ರಶ್ಮಿಕಾ (Rashmika Mandanna) ಮಂದಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾ ಒಂದಿಲ್ಲ ಒಂದು ವಿಚಾರಕ್ಕೆ ವೈರಲ್ ಆಗೋ ರಶ್ಮಿಕಾ ಈ ಸಲ ಬೇರೆ ವಿಷಯಕ್ಕೆ ಟಾಪ್ (Top) ಅಲ್ಲಿಯೇ ಇದ್ದಾರೆ. ಮೊನ್ನೆ ಮೊನ್ನೆ ಕೈ ಸನ್ನೆ ಮಾಡಿ ರಶ್ಮಿಕಾ ಮಂದಣ್ಣ ಕಿರಿಕ್ (Kirik) ಮಾಡಿಕೊಂಡಿದ್ದರು. ಈ ವಿಚಾರವಂತೂ ಆಗ ಸಿಕ್ಕಾಪಟ್ಟೆ ಟ್ರೋಲ್ (Troll) ಕೂಡ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಅಂತಹ ರಶ್ಮಿಕಾ ಮಂದಣ್ಣ ಈ ಬಾರಿ ಅಂತಹ ಕಿರಿಕ್ ಏನೂ ಮಾಡಿಕೊಂಡಿಲ್ಲ. ಅದರ ಬದಲಾಗಿ, ತಮ್ಮದೇ ಚಿತ್ರವೊಂದರ ಹಾಡಿನಿಂದಲೇ (Songs) ಸದ್ಯ ಸುದ್ದಿಯಲ್ಲಿದ್ದಾರೆ. ಆ ಸಿನಿಮಾದ ಹಾಡು ಯಾವುದು? ಏನಕ್ಕೆ ರಶ್ಮಿಕಾ ಮಂದಣ್ಣ ಈಗ ಟಾಪ್ ಅಲ್ಲಿಯೇ ಇದ್ದಾರೆ. ಏನ್ ಅದರ ಹಿಂದಿನ ಕಥೆ ಎಲ್ಲವನ್ನೂ ಇಲ್ಲಿ ಹೇಳಿದ್ದೇವೆ ಓದಿ.
ರಶ್ಮಿಕಾ ಮಂದಣ್ಣ ಬಹು ಭಾಷೆಯಲ್ಲಿ ಮಿಂಚಿಂಗ್!
ರಶ್ಮಿಕಾ ಮಂದಣ್ಣ ವಿನಃ ಕಾರಣ ಕೆಲವೊಮ್ಮೆ ವೈರಲ್ ಆಗುತ್ತಾರೆ. ಇದರಿಂದ ಕಾಮೆಂಟ್ಗಳ ಮೇಲೆ ಕಾಮೆಂಟ್ಗಳ ಕೂಡ ಬರುತ್ತವೆ. ಇತ್ತೀಚಿಗೆ ಕೈ ಸನ್ನೆ ಮಾಡಿಯೇ ಕಿರಿಕ್ ಮಾಡಿಕೊಂಡಿದ್ದರು. ಇದರಿಂದ ಕಿರಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಇದಕ್ಕೆ ತಿರುಗೇಟು ಕೊಟ್ಟಿದ್ದರು.
ರಶ್ಮಿಕಾ ಮಂದಣ್ಣ ಹಾಗೆ ಮಾಡಿದರು, ಹೀಗೆ ಮಾಡಿದರು ರಿಷಬ್ಗೆ ಸಾರಿ ಕೇಳಿದ್ರು. ಹೀಗೆ ಹತ್ತು ಹಲವು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದವು. ಯುಟ್ಯೂಬ್ ಚಾನೆಲ್ಗಳಲ್ಲೂ ವೈರಲ್ ಆಗಿರೋದು ಅಷ್ಟೇ ಸತ್ಯ.
ರಶ್ಮಿಕಾ ಮಂದಣ್ಣ ಈಗ ಯಾವ ವಿಚಾರದಲ್ಲಿ ಟಾಪ್?
ರಶ್ಮಿಕಾ ಮಂದಣ್ಣ ಈಗೊಂದು ವಿಚಾರದಲ್ಲಿ ಟಾಪ್ ಅಲ್ಲಿಯೇ ಇದ್ದಾರೆ. ಆ ವಿಷಯ ಬೇರೆ ಏನೋ ಅಲ್ಲ. ರಶ್ಮಿಕಾ ಮಂದಣ್ಣ ಅಭಿನಯದ ಒಂದು ಸಿನಿಮಾದ ಹಾಡು ಫುಲ್ ಟಾಪ್ ಅಲ್ಲಿಯೇ ಇದೆ. ಯುಟ್ಯೂಬ್ ನಲ್ಲಿಯೇ ಈಗ ಇದರದ್ದೇ ಸದ್ದು-ಗದ್ದಲ. ಹಾಗೇನೆ ಕಿಚ್ಚು. ಅಂದ್ಹಾಗೆ ಈ ಹಾಡು ಯಾವುದು ಗೊತ್ತೇ?
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಈಗ ಫುಲ್ ಟಾಪ್!
ಹೌದು, ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಫುಲ್ ಟಾಪ್ ಅಲ್ಲಿಯೇ ಇದೆ. ಸಿನಿಮಾ ಬಂದಾಗಲೇ ಈ ಗೀತೆ ವೈರಲ್ ಆಗಿತ್ತು. ಅದರಲ್ಲೂ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಸ್ಟೆಪ್ ಅಂತೂ ಭಾರೀ ವೈರಲ್ ಆಗಿತ್ತು. ರೀಲ್ಸ್ ಅಲ್ಲೂ ಇದೇ ಹಂಗಾಮ ಮಾಡಿತ್ತು. ಅದೇ ಹಾಡು ಈಗಲೂ ಓಡ್ತಾನೇ ಇದೆ. ವೈರಲ್ ಆಗುತ್ತಲೇ ಇದೆ.
ಇದನ್ನೂ ಓದಿ: Sandalwood: ಸಿನಿಮಾ ಸೂಪರ್ ಆಗಿದ್ರೂ ಜನ ಚಿತ್ರಮಂದಿರಕ್ಕೆ ಬರ್ತಿಲ್ಲ! ಕಾರಣ ಇದೇ ಇರಬಹುದಾ?
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಯುಟ್ಯೂಬ್ ಮ್ಯೂಸಿಕ್ ವೀಡಿಯೋ ಹಾಗೂ ಯುಟ್ಯೂಬ್ ಚಾನಲ್ಗಳ ಪಟ್ಟಿ ಈಗ ಹೊರ ಬಿದ್ದಿದೆ. ಈ ಲೆಕ್ಕದಲ್ಲಿ ಪುಷ್ಟ ಚಿತ್ರದ ಶ್ರೀವಲ್ಲಿ ಟಾಪ್ ಮ್ಯೂಸಿಕ್ ವೀಡಿಯೋನೇ ಆಗಿದೆ. ಅಷ್ಟೇ ಅಲ್ಲ, ಶಾರ್ಟ್ ಬ್ರೇಕ್ ಟಾಪ್ ಕ್ರಿಯೇಟರ್ ಆಗಿದೆ.
ಶ್ರೀವಲ್ಲಿ ಒಂದೇನಾ ಟಾಪ್ ಅಲ್ಲಿರೋ ಹಾಡು?
ಇದು ಮೊದಲ ಸ್ಥಾನದಲ್ಲಿದ್ರೆ, ವಿಜಯ್ ದಳಪತಿ ಅಭಿನಯದ ಬೀಸ್ಟ್ ಚಿತ್ರದ ಅರೇಬಿಕ್ ಕೂತು ಹಾಡು ಕೂಡ ಲಿಸ್ಟ್ ನಲ್ಲಿಯೇ ಇದೆ. ಪುಷ್ಪ ಚಿತ್ರದ ಸಾಮಿ ಸಾಮಿ ಹಾಡು ಕೂಡ ಈ ಒಂದು ಲಿಸ್ಟ್ ನಲ್ಲಿಯೇ ಇದೆ. ರಶ್ಮಿಕಾ ಮಂದಣ್ಣ ಕಿರಿಕ್ ಒಂದು ಕಡೆಯಾದ್ರೆ, ರಶ್ಮಿಕಾ ಕೆಲಸ ಮಾಡೋ ಸಿನಿಮಾಗಳು ಟಾಪ್ ಅಲ್ಲಿಯೂ ಇವೆ. ಹಾಡುಗಳೂ ಸೂಪರ್ ಟಾಪ್ ಅಲ್ಲಿರೋದೇ ವಿಶೇಷ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ