ಸಿನಿರಂಗದಲ್ಲಿ ಕೆಲವು ನಾಯಕಿಯರು ಒಬ್ಬರ ಮೇಲೊಬ್ಬರು ಸಿಟ್ಟಾಗಿ ಕಮೆಂಟ್ ಮಾಡುವುದು ಸಹಜ. ಒಬ್ಬರನ್ನು ಕಂಡೆ ಮತ್ತೊಬ್ಬರಿಗೆ ಆಗುವುದಿಲ್ಲ. ಈ ಕುರಿತಾಗಿ ಸಾಕಷ್ಟು ಸಲ ಸಂದರ್ಶನಗಳಲ್ಲಿ ನೋಡಿರುತ್ತೀರಿ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒಬ್ಬರ ಮೇಲೊಬ್ಬರು ಮಾತಿನ ಬಾಣಗಳನ್ನು ಪ್ರಯೋಗ ಮಾಡುತ್ತಿರುತ್ತಾರೆ. ಆದರೆ ಈ ವಿಷಯದಲ್ಲಿ ರಶ್ಮಿಕಾ ಕೊಂಚ ವಿಭಿನ್ನ ಎನಿಸಿಕೊಂಡಿದ್ದಾರೆ.
ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಲಾಕ್ಡೌನ್ನಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಸದ್ದು ಮಾಡಿದ ನಟಿ. ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದ್ದ ನಟಿ, ಈಗ ಟಾಲಿವುಡ್ನ ಮತ್ತೊಬ್ಬ ನಟಿ ಕೀರ್ತಿ ಸುರೇಶ್ ಅವರ ಅಭಿನಯದ ಬಗ್ಗೆ ಕಮೆಂಟ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.
ಹೆಚ್ಚಾಗಿ ವಿವಾದಗಳಿಂದಲೇ ಟ್ರೋಲ್ ಆಗುವ ರಶ್ಮಿಕಾ, ನಟಿ ಕೀರ್ತಿ ಸುರೇಶ್ ಅವರ ಅಭಿನಯದ ಬಗ್ಗೆ ಕಮೆಂಟ್ ಮಾಡಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ನಟನೆಯ 'ಪೆಂಗ್ವಿನ್' ಸಿನಿಮಾ ಲಾಕ್ಡೌನ್ನಿಂದಾಗಿ ಒಟಿಟಿ ಮೂಲಕ ತೆರೆಕಂಡಿದೆ. ಈ ಚಿತ್ರದಲ್ಲಿ ಕೀರ್ತಿ ಅಭಿನಯದ ತುಂಬಾ ಚೆನ್ನಾಗಿದೆ ಎಂದು ಲಿಲ್ಲಿ ಹಾಡಿ ಹೊಗಳಿದ್ದಾರೆ.
ಸಿದ್ದರಾಮಯ್ಯನವರ ಸೊಸೆ ಸ್ಮಿತಾರ ಜೊತೆ ಮೇಘನಾ ರಾಜ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರಥಮ್..!
ಇದನ್ನೂ ಓದಿ: ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಯ್ತು 'ಕೃಷ್ಣ ಆ್ಯಂಡ್ ಹಿಸ್ ಲೀಲ' : ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ