Rashmika Mandanna: ಎಷ್ಟು ದಿನ ಈ ಬಿರುದು ಇರುತ್ತೋ ಅಷ್ಟು ದಿನ ಮಜಾ ಮಾಡೋದು! ರಶ್ಮಿಕಾ ಹೀಗಂದಿದ್ಯಾಕೆ?

ತನ್ನ ಪಬ್ಲಿಕ್ ಅಪಿಯರೆನ್ಸ್ ಬಗ್ಗೆ ಎಂದಿಗೂ ಒತ್ತಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವ ರಶ್ಮಿಕಾ ನಾನು ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದರೆ ಆ ತಂಡಕ್ಕೆ ನಾನು ಕೇವಲ ರಶ್ಮಿಕಾ ಮತ್ತು ನಟಿಯಷ್ಟೇ. ಅಲ್ಲಿ ಯಾವುದೇ ನ್ಯಾಷನಲ್ ಕ್ರಷ್ ಎಂಬ ಹಮ್ಮು-ಬಿಮ್ಮು ಇರುವುದಿಲ್ಲ ಎಂದಿದ್ದಾರೆ

Rashmika Mandanna

Rashmika Mandanna

  • Share this:
ರಶ್ಮಿಕಾ ಮಂದಣ್ಣ(Rashmika Mandanna), ದಕ್ಷಿಣ ಭಾರತದ (South India) ಖ್ಯಾತ ನಟಿ. ಕರ್ನಾಟಕದ ಬ್ಯೂಟಿ. ಕನ್ನಡ ಅಲ್ಲದೇ ಪರಭಾಷೆಗಳಲ್ಲೂ ಮಿಂಚುತ್ತಿರುವ ಚೆಲುವೆ. ಕನ್ನಡ, ತೆಲಗು, ತಮಿಳು ಚಿತ್ರರಂಗದಲ್ಲಿ ರಶ್ಮಿಕಾರದ್ದೇ ಹವಾ. ಇನ್ನೊಂದು ಮೈಲಿಗಲ್ಲು(Milestone) ಎನ್ನುವಂತೆ ಈಕೆ ಬಾಲಿವುಡ್‌ನಲ್ಲೂ(Bollywood) ಸಿನಿಮಾ ಮಾಡ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಸೌಂದರ್ಯ, ನಟನೆ, ಡ್ಯಾನ್ಸ್‌ಗೆ ಅಭಿಮಾನಿಗಳು ಫಿಧಾ ಆಗಿಬಿಟ್ಟಿದ್ದಾರೆ. ಮೊದಲು ಕರ್ನಾಟಕ ಕ್ರಶ್ ಎಂದೆನಿಸಿಕೊಂಡಿದ್ದ ರಶ್ಮಿಕಾ ಈಗ ನ್ಯಾಶನಲ್ ಕ್ರಶ್(National Crush) ಆಗಿಬಿಟ್ಟಿದ್ದಾರೆ.

ನ್ಯಾಶನಲ್ ಕ್ರಶ್ ಆಫ್ ಇಂಡಿಯಾ
ರಕ್ಷಿತ್ ಶೆಟ್ಟಿ ಅಭಿನಯದ, ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ.. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸ್ಟಾರ್ ನಟರ ಜೊತೆ ನಟಿಸುತ್ತಿದ್ದು, ಅವರ ಸಂಭಾವನೆ ಕೋಟಿ ಕೋಟಿ.

ರಶ್ಮಿಕಾ ಅವರ ಇತ್ತೀಚಿಗೆ ಬಿಡುಗಡೆಯಾದ ಪುಷ್ಪ: ದಿ ರೈಸ್ ಚಿತ್ರ ರಶ್ಮಿಕಾ ಡಿಮ್ಯಾಂಡನ್ನು ಇನ್ನೂ ಹೆಚ್ಚಿಸಿದೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಸಿನಿಮಾದಲ್ಲಿ ಹೈಲೈಟ್ ಆಗಿದ್ದಾರೆ. ಸಿನಿಮಾದಲ್ಲಿನ ನಟನೆ, ಡ್ಯಾನ್ಸ್ ಸಿನಿರಸಿಕರಿಗೆ ಹಬ್ಬದಂತಿದೆ. search engine giant Google ರಶ್ಮಿಕಾ ಮಂದಣ್ಣಗೆ 'ನ್ಯಾಶನಲ್ ಕ್ರಶ್ ಆಫ್ ಇಂಡಿಯಾ' ಎಂಬ ಬಿರುದು ಕೊಟ್ಟಿರುವುದು ನಮಗೆ ನಿಮಗೆ ಗೊತ್ತಿರುವ ವಿಷಯ.

ಇದನ್ನೂ ಓದಿ: Rashmika Mandanna: ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಣೆ? ಏನೋ ನಡೀತಿರೋದಂತೂ ಪಕ್ಕಾ!

'ನ್ಯಾಶನಲ್ ಕ್ರಶ್ ಆಫ್ ಇಂಡಿಯಾ' ಬಿರುದಿನ ಬಗ್ಗೆ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡಿದ್ದರೆ. ಅದರ ಬಗ್ಗೆ ಇಲ್ಲಿದೆ ಡೀಟೇಲ್ಸ್. ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ 'ನ್ಯಾಷನಲ್ ಕ್ರಶ್' ಟೈಟಲ್ ಬಗ್ಗೆ ಮಾತನಾಡಿದ್ದಾರೆ. ಇದಕ್ಕಾಗಿ ಮೊದಲು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತು ಮುಂದುವರೆಸುತ್ತಾ, 'ನ್ಯಾಷನಲ್ ಕ್ರಶ್' ಬಿರುದನ್ನು ಉಳಿಸಿಕೊಳ್ಳಲು ಯಾವತ್ತೂ ನಾನು ನನ್ನ ಮೇಲೆ ಯಾವುದೇ ಒತ್ತಡ ಹೇರಿಕೊಳ್ಳುವುದಿಲ್ಲ ಎಂದಿದ್ದಾರೆ.

ಪುಷ್ಪ ತಂಡಕ್ಕೆ ಅಭಿನಂದನೆ
ಬಾಲಿವುಡ್ ಸಿನಿಮಾ ಲೈಫ್ ಬಗ್ಗೆ ಮಾತನಾಡುತ್ತಾ, ರಶ್ಮಿಕಾ ತನ್ನ ಪಬ್ಲಿಕ್ ಅಪಿಯರೆನ್ಸ್‌ ಬಗ್ಗೆ  ಎಂದಿಗೂ ಒತ್ತಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ನಾನು ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದರೆ ಆ ತಂಡಕ್ಕೆ ನಾನು ಕೇವಲ ರಶ್ಮಿಕಾ ಮತ್ತು ನಟಿಯಷ್ಟೇ. ಅಲ್ಲಿ ಯಾವುದೇ ನ್ಯಾಷನಲ್ ಕ್ರಷ್ ಎಂಬ ಹಮ್ಮು-ಬಿಮ್ಮು ಇರುವುದಿಲ್ಲ. ಹಾಗಿದ್ದರೆ ಸಿನಿಮಾ ಮಾಡುವುದು ಕಷ್ಟ ಎಂದಿದ್ದಾರೆ. ಹಳ್ಳಿಯ ದೃಶ್ಯಗಳಲ್ಲಿ ಅಭಿನಯಿಸುವಾಗ ಅಲ್ಲಿಗೆ ತಕ್ಕಂತೆ ಮೇಕಪ್, ನಟನೆ ಇರಬೇಕು. ಪುಷ್ಪದಲ್ಲಿ ಆ ರೀತಿಯಾಗಿ ನನ್ನನ್ನು ಚೆನ್ನಾಗಿ ತೋರಿಸಿದ್ದಾರೆ ಅಂತಾ ಪುಷ್ಪ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ನಾನು ಅಭಾರಿ
ಸೆಲೆಬ್ರಿಟಿಯಾಗಲು ಸಾಕಷ್ಟು ಕಸರತ್ತುಗಳು ನಡೆಯುತ್ತವೆ, ಅದನ್ನು ಉಳಿಸಿಕೊಳ್ಳಬೇಕು ಎಂದರು. ನ್ಯಾಶನಲ್ ಕ್ರಶ್ ಟೈಟಲ್ ಕುರಿತು ರಶ್ಮಿಕಾ ಹೇಳಿದ್ದು, ಆ ಟೈಟಲ್ ಹಾಗೆ ಉಳಿದರೆ ನಾನು ಅದಕ್ಕೆ ಕೃತಜ್ಞಳಾಗಿರುತ್ತೇನೆ. ಅದು ಇಲ್ಲದಿದ್ದರೂ ನಾನು ಖುಷಿಯಾಗಿರುತ್ತೇನೆ. ಹಾಗಂತ ಅದನ್ನು ಉಳಿಸಿಕೊಳ್ಳಲು ನನ್ನ ಮೇಲೆ ಒತ್ತಡ ತಂದು ಕೊಳ್ಳುವುದಿಲ್ಲ. ಈ ಬಿರುದು ಜನರಿಂದ ಸಿಕ್ಕಿರುವ ಮೆಚ್ಚುಗೆ, ನಾನು ಇಲ್ಲಿಯವರೆಗೆ ಪಟ್ಟ ಶ್ರಮ. ಟೈಟಲ್ ಇದ್ರೂ, ಇಲ್ಲದಿದ್ರೂ ನಾನು ಯಾವಾಗಲು ಅದಕ್ಕೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Rashmika Mandanna: ಇದೇನ್​ ಈ ಪಾಟಿ ಸಂಭಾವನೆ ಹೆಚ್ಚಿಸಿಕೊಳ್ಳೋದಾ? ಇಷ್ಟು ದುಡ್ಡು ಕೇಳಿದ್ರೆ ಪ್ರೊಡ್ಯೂಸರ್​​ ಕಥೆಯೇನು?

ಪುಷ್ಪ: ದಿ ರೈಸ್ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ರಶ್ಮಿಕಾ ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಸಿನಿಮಾದಲ್ಲಿ ಭಾಗಿಯಾಗಿದ್ದು. ಚಿತ್ರ ಗಳಿಸಿದ ಯಶಸ್ಸಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಪುಷ್ಪ 2 ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಿಲ್ಲ. ಸಾಲು ಸಾಲು ಸಿನಿಮಾಗಳು ರಶ್ಮಿಕಾ ಭತ್ತಳಿಕೆಯಲ್ಲಿದ್ದು, ನಮ್ಮ ಕರ್ನಾಕದ ಬೆಡಗಿ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿರುವುದು ಖುಷಿಯ ವಿಚಾರ.
Published by:vanithasanjevani vanithasanjevani
First published: