Rashmika Mandanna: ಸಿಂಪಲ್ ಲುಕ್​​ನಲ್ಲಿ ರಶ್ಮಿಕಾ ಮಂದಣ್ಣ; ಏರ್​ಪೋರ್ಟ್​ನಲ್ಲಿ ಫ್ಯಾನ್ಸ್ ಜೊತೆ ಶ್ರೀವಲ್ಲಿ ಸೆಲ್ಫಿ

ಸಾಲು ಸಾಲು ಚಿತ್ರಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಇಂದು (ಆಗಸ್ಟ್​ 28 ರಂದು) ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ರಶ್ಮಿಕಾ ಜೊತೆ ಫೋಟೋ ತೆಗಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ನ್ಯಾಶನಲ್ ಕ್ರಶ್ ಹಾಗೂ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ ಬಾಲಿವುಡ್​ ಚಿತ್ರದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಕೆಲಸದ ಹಿನ್ನೆಲೆ ಮುಂಬೈಗೆ ಭೇಟಿ ನೀಡದ್ದ ರಶ್ಮಿಕಾ ಸಿಂಪಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸರಳವಾದ ಲೈಟ್​ ಬ್ಲೂ ಕುರ್ತಿ, ಜೀನ್ಸ್ ಹಾಗೂ ಸಿಂಪಲ್​ ಮೇಕಪ್​ನಲ್ಲಿ​ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಮನಗೆದ್ದಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ನೋಡಿದ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ತಾಳ್ಮೆಯಿಂದಲೇ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

ಅಭಿಮಾನಿಗಳ ಜೊತೆ ರಶ್ಮಿಕಾ

ಸಾಲು ಸಾಲು ಚಿತ್ರಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ ಇಂದು (ಆಗಸ್ಟ್​ 28 ರಂದು) ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ರಶ್ಮಿಕಾ ಜೊತೆ ಫೋಟೋ ತೆಗಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಬಾಲಕನ ಹೆಗಲ ಮೇಲೆ ಕೈ ಹಾಕಿ ರಶ್ಮಿಕಾ ಫೋಟೋಗೆ ಪೋಸ್​ ಕೊಟ್ಟರು. ಅನೇಕರು ಸೆಲ್ಫಿ ಕೇಳಿದ್ರು ನಿರಾಕರಿಸದೆ ರಶ್ಮಿಕಾ ಎಲ್ಲರ ಜೊತೆ ಸೆಲ್ಫಿಗೆ ಪೋಸ್​ ಕೊಟ್ಟಿದ್ದಾರೆ. ಪಾಪರಾಜೋ ವೈರಲ್ ಭಯಾನಿ ಎನ್ನುವರು ಈ ವಿಡಿಯೋ ಶೇರ್​ ಮಾಡಿದ್ದಾರೆ.


ವಿಡಿಯೋ ವೈರಲ್​, ಫ್ಯಾನ್ಸ್​ ಕಾಮೆಂಟ್​

ರಶ್ಮಿಕಾ ವಿನಮ್ರತೆ ಹಾಗೂ ಡೌನ್ ಟು ಅರ್ಥ್ ಸ್ವಭಾವವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಅನೇಕರು ರಶ್ಮಿಕಾ ನಗುವೇ ಚೆಂದ ಎಂದಿದ್ದಾರೆ. ಇನ್ನು ಕೆಲವರು ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ತಾರೆ ಎಂದಿದ್ದಾರೆ. ಇನ್ನೊಬ್ಬರು ಅವಳು ಸ್ವಲ್ಪ ಅತಿಯಾಗಿ ವರ್ತಿಸುತ್ತಾಳೆ ಎಂದು ಕಾಮೆಂಟ್​ ಮಾಡಿದ್ದಾರೆ.ಅಮಿತಾಬ್​ ಚಿತ್ರದಲ್ಲಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅಮಿತಾಭ್ ಬಚ್ಚನ್ ಅಭಿನಯದ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಡಾರ್ಕ್ ಥ್ರಿಲ್ಲರ್ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್​ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಪುಪ್ಪಾ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದು, ಅಭಿಮಾನದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

Rashmika Mandanna: ಇದೇ ನನ್ನ ಪುಟ್ಟ ಪ್ರಪಂಚ ಎಂದ ರಶ್ಮಿಕಾ ಮಂದಣ್ಣ; 4 ಸ್ಪೆಷನ್ ಫೋಟೋಗಳ ಬಗ್ಗೆ ಶ್ರೀವಲ್ಲಿ ಭಾವನಾತ್ಮಕ ಬರಹ!

ಕನ್ನಡದ ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ


Published by:Pavana HS
First published: