• Home
  • »
  • News
  • »
  • entertainment
  • »
  • Rashmika Mandanna: ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್

Rashmika Mandanna: ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಅವರಿಗೆ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ ಇದನ್ನು ಸ್ವತಃ ರಶ್ಮಿಕಾ ಅವರೇ ಮರೆತುಬಿಟ್ಟಿದ್ದಾರಾ?

  • News18 Kannada
  • Last Updated :
  • Bangalore, India
  • Share this:

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಭಾರತೀಯ ಚಿತ್ರರಂಗದಲ್ಲಿ ಈಗ ಬೇಡಿಕೆಯ ನಟಿ (Actress). ತೆಲುಗು, ತಮಿಳು, ಹಿಂದಿ ಚಿತ್ರ ರಂಗದಲ್ಲಿ ನಟಿ ಸಿನಿಮಾ ಮಾಡುತ್ತಿದ್ದಾರೆ. ನಟನೆಯ ಹಿನ್ನೆಲೆಯೇ ಇರದ ರಶ್ಮಿಕಾ ಸಿನಿಮಾಗೆ (Cinema) ಎಂಟ್ರಿ ಕೊಟ್ಟಿದ್ದು ಹೇಗೆ? ರಕ್ಷಿತ್ ಹಾಗೂ ರಿಷಬ್ ಅವರ ಸಕ್ಸಸ್​​ಫುಲ್ ಸಿನಿಮಾ ಕಿರಿಕ್ ಪಾರ್ಟಿ ರಶ್ಮಿಕಾಗೆ ಮೊದಲ ಹೆಜ್ಜೆ ಎನ್ನುವುದು ಕನ್ನಡಿಗರಿಗೆಲ್ಲ ಗೊತ್ತು. ಆದರೆ ಹೊರಗಿನ ಚಿತ್ರ ರಂಗದಲ್ಲಿ ರಶ್ಮಿಕಾ ಅವರ ಮೊದಲ ಸಿನಿಮಾ ಬಗ್ಗೆ, ಲಾಂಚ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.  ಬಹಳಷ್ಟು ಜನರು ಅವರನ್ನು ತೆಲುಗು (Telugu) ಚಿತ್ರಗಳಿಂದಲೇ ತಿಳಿದುಕೊಂಡಿದ್ದಾರೆ. ಆದರೆ ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಅವರಿಗೆ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ (Rakshit Shetty) ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ ಇದನ್ನು ಸ್ವತಃ ರಶ್ಮಿಕಾ ಅವರೇ ಮರೆತುಬಿಟ್ಟಿದ್ದಾರಾ? ಹೌದು ಎನ್ನುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದೆ.


ಕರ್ಲಿ ಟೇಲ್ಸ್ ಸಂದರ್ಶನದಲ್ಲಿ ಇದೇನು ಹೇಳಿಬಿಟ್ರು ರಶ್ಮಿಕಾ?


ಕರ್ಲಿ ಟೇಲ್ಸ್ ಎನ್ನುವುದು ಫೇಮಸ್ ಶೋ. ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ವೀಕ್ಷಕರಿರುವ ಒಂದು ಸೆಲೆಬ್ರಿಟಿ ಶೋ. ಇದರಲ್ಲಿ ಕಿಚ್ಚ ಸುದೀಪ್ ಕೂಡಾ ಭಾಗವಹಿಸಿದ್ದರು. ಈಗ ನಟಿ ರಶ್ಮಿಕಾ ಅವರೂ ಭಾಗವಹಿಸಿದ್ದಾರೆ. ಈ ಸಂದರ್ಶನದ ತುಣುಕೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.


ರಶ್ಮಿಕಾ ಹೇಳಿದ್ದೇನು?


ನಿರೂಪಕಿ ರಶ್ಮಿಕಾ ಅವರಲ್ಲಿ ಅವರ ಸಿನಿಮಾ ಎಂಟ್ರಿ, ಆ ಜರ್ನಿ ಹೇಗೆ ಶುರುವಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಭಾಗವಹಿಸಲು ನನಗೆ ಮನಸಿರಲಿಲ್ಲ. ಶಿಕ್ಷಕರು ಹೇಳಿದ ಕಾರಣ ಸ್ಪರ್ಧಿಸಿದ್ದೆ. ನಂತರ ಇದರಲ್ಲಿ ವಿಜೇತೆಯಾಗಿ ಹೊರಹೊಮ್ಮಿದೆ. ಅದರಲ್ಲಿ ಲೆವೆಲ್​ಗಳಿದ್ದವು. ನಂತರ ನನ್ನ ಫೋಟೊ ಹಾಗೂ ಟೈಟಲ್ ಪೇಪರ್​​ನಲ್ಲಿ ಪ್ರಕಟಿಸಲಾಯಿತು.




ಟೈಮ್ಸ್ ಆಫ್ ಇಂಡಿಯಾದ ಮೊದಲ ಪುಟದಲ್ಲಿ ಇದನ್ನು ಪಬ್ಲಿಷ್ ಮಾಡಲಾಯಿತು. ನಾನು ನಂತರ ನನ್ ಕಾಲೇಜು ಲೈಫ್​​ಗೆ ಹಿಂದಿರುಗಿದೆ. ಹಾಗೆಯೇ ಹೋಗುತ್ತಿತ್ತು. ಆಗ ನನಗೆ ಈ ಪ್ರೊಡಕ್ಷನ್ ಹೌಸ್​ನಿಂದ ಕಾಲ್ ಬಂತು ಎಂದು ಹೇಳಿದ್ದಾರೆ. ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು ಈಗ ನೆಟ್ಟಿಗರು ನಟಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ.




ಇದನ್ನೂ ಓದಿ: Amulya Deepavali: ಅವಳಿ ಮಕ್ಕಳ ಜೊತೆ ಅಮೂಲ್ಯಗೆ ದೀಪಾವಳಿ ಸಂಭ್ರಮ; ಫೋಟೋಗಳಲ್ಲಿ ನೋಡಿ


ನೇಟಿವ್ ಬೆಂಗಳೂರಿಯನ್ಸ್ ಎನ್ನುವ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಈ ವಿಡಿಯೋ ಕ್ಲಿಪ್ ಶೇರ್ ಮಾಡಲಾಗಿದೆ. ಈ ಜನರೇಷನ್ ಕೃತಜ್ಞತೆ ಎನ್ನುವುದನ್ನೇ ತಿಳಿದಿಲ್ಲ. ನಿಮಗ್ಯಾಕೆ ಬೇಕು ಎಂದು ಕೇಳಬೇಡಿ. ಕನ್ನಡ ಫಿಲ್ಮ್​ ಇಂಡಸ್ಟ್ರಿಯಲ್ಲಿ ಕಠಿಣ ಪರಿಶ್ರಮ ಹಾಕಿ ದುಡಿಯುವ ಪ್ರತಿಭೆಗಳ ಅಭಿಮಾನಿಗಳು ನಾವು ಹಾಗಾಗಿ ಇದನ್ನು ನೋಡಿಯೂ ನೋಡದೆ ಇರಲು ಸಾಧ್ಯವಿಲ್ಲ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

Published by:Divya D
First published: