• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rashmika Mandanna: ಅಯ್ಯೋ ಇದೇನ್​ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್​ ಹೆಸ್ರು ಬರೆಯೋಕೂ ಬರಲ್ವಾ?

Rashmika Mandanna: ಅಯ್ಯೋ ಇದೇನ್​ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್​ ಹೆಸ್ರು ಬರೆಯೋಕೂ ಬರಲ್ವಾ?

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿ(OTT)ಯಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ‘ಪುಷ್ಪ’ ಸಿನಿಮಾ  ಸ್ಟ್ರೀಮ್(Stream)  ಆಗುತ್ತಿದೆ. ಈಗ ಸಿನಿಮಾ ತಂಡ ಮಾಡಿರುವ ಮತ್ತೊಂದು ಎಡವಟ್ಟು ಸಖತ್​ ಟ್ರೋಲ್​(Troll) ಆಗುತ್ತಿದೆ. ಸಿನಿಮಾದ ನಟಿಯ ಹೆಸರನ್ನು ಸರಿಯಾಗಿ ಬರೆಯದೇ ಚಿತ್ರತಂಡ ಟ್ರೋಲ್​ಗೆ ಒಳಗಾಗಿದೆ.

ಮುಂದೆ ಓದಿ ...
  • Share this:

ಕರುನಾಡ ಕ್ರಶ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ರೇಂಜ್ (Range)​ ಈಗ ಬದಲಾಗಿದೆ. ಕಿರಿಕ್​ ಪಾರ್ಟಿ (Kirik Party) ಸಿನಿಮಾ ಮೂಲಕ ತೆರೆಗೆ ಬಂದ ನಟಿ ರಶ್ಮಿಕಾ, ಈಗ ಭಾರತದ ಟಾಪ್​ ಹೀರೋಯಿನ್ (Top Heroin)​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಹೆಸರಾಂತ ನಟಿಯರಿಗೆ ಸೆಡ್ಡು ಹೊಡೆದು, ತಮ್ಮ ಸ್ಥಾನವನ್ನು ಬಿಗಿ ಪಡಿಸಿಕೊಂಡಿದ್ದಾರೆ. ಕರುನಾಡ ಕ್ರಶ್​ ಆಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್ (National Crush)​. ಈಕೆ ಸಿನಿಮಾ ಮಾಡಲು ನಿರ್ಮಾಪಕರು ತಾ ಮುಂದೆ.. ನಾ ಮುಂದೆ ಎಂದು ಕ್ಯೂನಲ್ಲಿ ಕಾಯುತ್ತಿದ್ದಾರಂತೆ. ‘ಪುಷ್ಪ’(Pushpa) ಚಿತ್ರದಲ್ಲಿ ಇವರ ಅಭಿನಯಕ್ಕೆ ಫುಲ್ ಮಾರ್ಕ್ಸ್​ ಸಿಕ್ಕಿದೆ. 'ಪುಷ್ಪ' ಸಿನಿಮಾ ಸೂಪರ್ ಹಿಟ್(Super Hit) ಆಗಿದೆ. ಕೇವಲ 20 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿ(OTT)ಯಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ‘ಪುಷ್ಪ’ ಸಿನಿಮಾ  ಸ್ಟ್ರೀಮ್(Stream)  ಆಗುತ್ತಿದೆ. ಈಗ ಸಿನಿಮಾ ತಂಡ ಮಾಡಿರುವ ಮತ್ತೊಂದು ಎಡವಟ್ಟು ಸಖತ್​ ಟ್ರೋಲ್​(Troll) ಆಗುತ್ತಿದೆ. ಸಿನಿಮಾದ ನಟಿಯ ಹೆಸರನ್ನು ಸರಿಯಾಗಿ ಬರೆಯದೇ ಚಿತ್ರತಂಡ ಟ್ರೋಲ್​ಗೆ ಒಳಗಾಗಿದೆ.


ರಸ್ಮಿಕಾ ಮಾಡೋಣ ಎಂದು ಹೆಸರು ಕೊಟ್ಟ ಚಿತ್ರತಂಡ!


ಡಿಸೆಂಬರ್ 07ರಂದು 'ಪುಷ್ಪ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಸಿನಿಮಾ ಅಂತ್ಯವಾದ ಬಳಿಕ ಟೈಟಲ್ ಕಾರ್ಡ್‌ ಪ್ರದರ್ಶಿಸಲಾಗಿದೆ. ಪ್ರತಿಯೊಬ್ಬ ನಟರ ಚಿತ್ರದೊಟ್ಟಿಗೆ ಇಂಗ್ಲೀಷ್‌ನಲ್ಲಿ ಅವರ ಹೆಸರನ್ನು ಹಾಕಲಾಗಿದೆ. ಮೊದಲಿಗೆ ನಾಯಕ ಅಲ್ಲು ಅರ್ಜುನ್, ನಂತರ ನಟ ಫಹಾದ್ ಫಾಸಿಲ್ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಹಾಕಲಾಗಿದೆ. ಆದರೆ ಇಂಗ್ಲೀಷ್‌ನಲ್ಲಿ ರಶ್ಮಿಕಾ ಮಂದಣ್ಣ ಎಂದು ಬರೆವ ಬದಲಿಗೆ 'ರಸ್ಮಿಕಾ ಮಾಡೋಣ' ಎಂದು ಬರೆಯಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೋಲ್​ ಆಗುತ್ತಿದೆ. ಮೊದಲೇ ಸಿನಿಮಾ ಬಿಡುಗಡೆಯಾದಗ ಭಾರೀ ಟ್ರೋಲ್ ಆಗಿತ್ತು. ಇದೀಗ ಒಟಿಟಿಯಲ್ಲಿ ರಿಲೀಸ್​ ಆದಾಗಲೂ ಟ್ರೋಲ್ ಆಗುತ್ತಿದೆ.


ಟ್ರೋಲ್​ ಆಗುತ್ತಿರುವ ಫೋಟೋ


ಇದನ್ನು ಓದಿ: ಕೊಡಗಿನ ಕುವರಿಗೆ ಕನ್ನಡದಲ್ಲೇ ಕವನ ಹೇಳಿದ ಬಾಲಯ್ಯ: ವ್ಹಾವ್​.. ಎಷ್ಟು ಚೆಂದ ನಂದಮೂರಿ ಬಾಲಕೃಷ್ಣ!


ಸಖತ್​ ಟ್ರೋಲ್​ ಆಗುತ್ತಿದೆ ಈ ಹೆಸ್ರು ಫೋಟೋ!


ಒಟಿಟಿಗೆ ತಕ್ಕಂತೆ ಸಿನಿಮಾ ತಂಡದವರೇ ಸಿನಿಮಾವನ್ನು ಡಿಸೈನ್ ಮಾಡಿಕೊಡುವುದು ವಾಡಿಕೆ. ಹಾಗಾಗಿ ಸಿನಿಮಾ ತಂಡವದವೇ ಹೀಗೆ ಟೈಟಲ್ ಕಾರ್ಡ್ ಹಾಕಿ ಕೊಟ್ಟಿದ್ದಾರೆ. . ಆದರೆ ಸಿನಿಮಾದ ನಾಯಕ ನಟಿಯ ಹೆಸರನ್ನೇ ತಪ್ಪಾಗಿ ಬರೆದಿರುವುದು ಚಿತ್ರತಂಡಕ್ಕೆ ನಟಿಯರ ಬಗ್ಗೆ ಇರುವ ಅಸಡ್ಡೆಯನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿವೆ. ಇನ್ನೂ ಕೆಲವರು ಕನ್ನಡ ಬರಲ್ಲ ಎಂದು ಹೇಳುತ್ತೀರಾ. ಈಗ ನೋಡಿ ನಿಮಗೆ ಗೊತ್ತಾಗುತ್ತೆ. ನೀವು ಕನ್ನಡವನ್ನು ತಪ್ಪಾಗಿ ಹೇಳಿದಾಗ ಹೇಗಾಗುತ್ತೆ ಎಂದು ಈಗ ತಿಳಿಯುತ್ತೆ ಎಂದು ರಶ್ಮಿಕಾ ಕಾಲೆಳೆದಿದ್ದಾರೆ.


ಇದನ್ನು ಓದಿ: Samantha ಜೊತೆ ಡಿವೋರ್ಸ್​ ನಂತ್ರ ನಾಗಚೈತನ್ಯ ಜೊತೆ ಕಾಣಿಸಿಕೊಂಡ ಈ ಚೆಲುವೆ ಯಾರು?​ ಪ್ರೈವೇಟ್​ ಜೆಟ್​ನಲ್ಲಿ ಇಬ್ರು ಮಾಡಿದ್ದೇನು?


ರಶ್ಮಿಕಾಗೆ ಕನ್ನಡದಲ್ಲಿ ಕವನ ಹೇಳಿದ ಬಾಲಯ್ಯ!


‘ಚೆಲುವಲ್ಲಿ ಬೇಲೂರ ಬಾಲೆ, ಮನಸಲ್ಲಿ ಮೈಸೂರು ಮಲ್ಲೆ, ನುಡಿಯಲ್ಲಿ ಕಸ್ತೂರಿ, ನಡೆಯಲ್ಲಿ ಕಾವೇರಿ, ಸೊಬಗಲ್ಲಿ ಮಡಿಕೇರಿ, ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ, ಕರ್ನಾಟಕದ ಹುಡುಗಿ'' ಎಂದು ರಶ್ಮಿಕಾ ಮಂದಣ್ಣಗೆ ಕವನ ಹೇಳಿದ್ದಾರೆ ಬಾಲಕೃಷ್ಣ. ಬಾಲಯ್ಯ ಕನ್ನಡದಲ್ಲಿ ಕವನ ಹೇಳಿದ್ದನ್ನು ಕೇಳಿ, ರಶ್ಮಿಕಾ ಮಂದಣ್ಣ ಅವರ ಕೆನ್ನೆ ಕೆಂಪಾಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮತ್ತೊಂದೆಡೆ ಈ ವಿಡಿಯೋ ಇಟ್ಟುಕೊಂಡು ಸೋಷಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್​ ಮಾಡಲಾಗುತ್ತಿದೆ.

First published: