ನೆರೆ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರ ನೀಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ

news18
Updated:August 29, 2018, 1:40 PM IST
ನೆರೆ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರ ನೀಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ
-rashmika_mandanna instagram
news18
Updated: August 29, 2018, 1:40 PM IST
-ನ್ಯೂಸ್ 18 ಕನ್ನಡ

ಕರುನಾಡ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರಿಂದು ಕೊಡಗಿನ ನಿರಾಶ್ರಿತರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಕಳೆದೊಂದು ತಿಂಗಳಿಂದ ಮಳೆಯ ಆರ್ಭಟಕ್ಕೆ ನಲುಗಿದ್ದ  ಜಿಲ್ಲೆಯ ಸಂತ್ರಸ್ತರನ್ನು ವಿರಾಜಪೇಟೆಯ ಕಲ್ಯಾಣ ಮಂಟಪಕ್ಕೆ ಕಿರಿಕ್ ಬೆಡಗಿ ಕರೆಸಿಕೊಂಡಿದ್ದರು. ಅವರ ದುಃಖವನ್ನು ಆಲಿಸಿದ ಚಮಕ್ ಸುಂದರಿ ಮುಂದಿನ ದಿನಗಳಲ್ಲಿ ತನ್ನ ಕೈಲಾಗುವ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಅಪಾರ ನಾಶ ನಷ್ಟಗಳುಂಟಾಗಿರುವುದು ನನಗೆ ತಿಳಿದಾಗ ನಾನು ಥಾಯ್ಲೆಂಡ್​ನಲ್ಲಿ ಸಿನಿಮಾದ ಚಿತ್ರೀಕರಣದಲ್ಲಿದ್ದೆ. ಯಾವ ರೀತಿಯಾಗಿ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ಅಪ್ಪನನ್ನು ಆ ವೇಳೆ ಕೇಳಿಕೊಂಡಿದ್ದೆ. ಈ ವೇಳೆ ಅಪ್ಪ ನನ್ನನ್ನು ಸಮಾಧನ ಪಡಿಸಿ ಶೂಟಿಂಗ್ ಮುಗಿಸಿ ಬಂದ ಮೇಲೆ ಯೋಚನೆ ಮಾಡೋಣ ಅಂತ ತಿಳಿಸಿದ್ದರು. ಇದೀಗ ಕೊಡಗಿಗೆ ಆಗಮಿಸಿದ ನಾನು ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ಕೊಡಬೇಕೆಂದು ಬಯಸಿದ್ದೆ. ಆದರೆ ರಸ್ತೆಗಳು ಇನ್ನೂ ಕೂಡ ಸರಿಯಾಗದ ಕಾರಣ ಹೋಗಲು ಸಾಧ್ಯವಾಗಿಲ್ಲ. ಹಾಗೆಯೇ ಗ್ರಾಮದ ಜನರು ನಿರಾಶ್ರಿತ ಕೇಂದ್ರದಲ್ಲಿರುವುದು ತಿಳಿಯಿತು. ಹಾಗಾಗಿ ಎಲ್ಲರನ್ನು ಇಲ್ಲಿಗೆ ಕರೆಸಿಕೊಂಡು ಧೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ರಶ್ಮಿಕಾ ತಿಳಿಸಿದ್ದಾರೆ.

ಸಂತ್ರಸ್ತರೊಂದಿಗೆ ಸಮಯ ಕಳೆದ ರಶ್ಮಿಕಾ ಎಲ್ಲರ ನೋವನ್ನು ಮರೆಸುವ ಪ್ರಯತ್ನ ಮಾಡಿದರು. ನಿರಾಶ್ರಿತರಲ್ಲಿ ಹೊಸ ಹುಮ್ಮಸ್ಸು ಮೂಡಿಸಲು ಕೆಲವರನ್ನು ಸ್ಟೇಜ್​ಗೆ ಕರೆಸಿ ಹಾಡೇಳಿಸಿ ಮನರಂಜಿಸಲು ಪ್ರಯತ್ನಿಸಿದರು. ಈ ವೇಳೆ ಕಾವೇರಿ ನದಿಗೆ ಸಂಬಂಧಿಸಿದ ಹಾಡನ್ನು ಹಾಡಿದ ಮಹಿಳೆ ಇದ್ದಕ್ಕಿದ್ದ ಹಾಗೇ ಹಾಡು ನಿಲ್ಲಿಸಿ ಕಣ್ಣೀರು ಹಾಕಿದರು. ಈ ವೇಳೆ ಕಾವೇರಿ ನದಿಯಿಂದ ನನ್ನ ಮನೆ ಮತ್ತು ಜೀವನವೇ ಹೋಯಿತು ಎಂದು ರಶ್ಮಿಕಾ ಬಳಿ ನೋವನ್ನು ತೋಡಿಕೊಂಡ ಘಟನೆ ನಡೆಯಿತು.

ಕಲ್ಯಾಣ ಮಂಟಪದಲ್ಲಿ ಸೇರಿದ್ದ ಎಲ್ಲ ಸಂತ್ರಸ್ತರನ್ನು ಸಾಮಾಧಾನ ಪಡಿಸಿದ ಕಿರಿಕ್ ಚೆಲುವೆ ಯಾರೂ ದುಃಖದಲ್ಲಿರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ನನ್ನಿಂದ ಏನು ಸಹಾಯ ಮಾಡಲು ಸಾಧ್ಯವೊ ಅದನ್ನು ನಾನು ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ರಶ್ಮಿಕಾ ಮಂದಣ್ಣ ಕುಟುಂಬದವರಿಂದ ಸುಮಾರು 40 ಕ್ಕೂ ಹೆಚ್ಚಿನ ನಿರಾಶ್ರಿತ ಕುಟುಂಬಕ್ಕೆ ಪರಿಹಾರವನ್ನು ನೀಡಲಾಯಿತು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...