Rashmika Mandanna: ಹೌದು, ಇದೊಂಥರಾ ಕನ್ನಡ ಸಿನಿ ಪ್ರಿಯರಿಗೆ ಖುಷಿ ವಿಚಾರ ಅಂದ್ರೂ ತಪ್ಪಾಗಲ್ಲ. ಕಿರಿಕ್ ಪಾರ್ಟಿ ಮೂಲಕ ಸಾನ್ವಿಯಾಗಿ ಮನೆಮಾತಾಗಿರೋ ರಶ್ಮಿಕಾ ಮಂದಣ್ಣ ಈಗ ಬರೀ ಕನ್ನಡ ನಟಿಯಾಗಿ ಉಳಿದಿಲ್ಲ. ಟಾಲಿವುಡ್, ಕಾಲಿವುಡ್ ಎಲ್ಲಾ ಮುಗಿಸಿ ಬಾಲಿವುಡ್ಗೆ ಹಾರಿರುವ ಬೆಡಗಿ ಈಕೆ. ರಶ್ಮಿಕಾ ಈಗ ಏನು ಮಾಡಿದ್ರೂ ಸುದ್ದಿನೇ, ಜನರನ್ನು ಕೊಡಗಿನ ಈ ಚೆಲುವೆ ಆ ಪರಿ ಮೋಡಿ ಮಾಡಿಬಿಟ್ಟಿದ್ದಾಳೆ. ಹೊಸಾ ವಿಚಾರ ಏನಂದ್ರೆ ಸಮಂತಾ ಅಕ್ಕಿನೇನಿ ISamantha Akkineni), ವಿಜಯ್ ದೇವರಕೊಂಡ (Vijay Devarakonda), ಕಿಯಾರಾ ಅಡ್ವಾಣಿ (Kiara Advani)ಯಂಥಾ ಘಟಾನುಘಟಿಗಳನ್ನು ರಶ್ಮಿಕಾ ಮಂದಣ್ಣ ಹಿಂದಿಕ್ಕಿಬಿಟ್ಟಿದ್ದಾರೆ. ಅವರೆಲ್ಲರಿಗಿಂತ ಇವರು ಮುಂದಿದ್ದಾರೆ, ಅದು ಅಭಿಮಾನಿಗಳ ವಿಚಾರದಲ್ಲಿ. ರಶ್ಮಿಕಾ ಮಂದಣ್ಣಗೆ ಇನ್ಸ್ಟಾಗ್ರಾಂ ಫಾಲೊವರ್ಸ್ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿಗಿಂತಾ ಜಾಸ್ತಿ ಇದೆ ಅಂದ್ರೆ ಸಾಧಾರಣ ವಿಚಾರ ಅಲ್ಲ ಬಿಡಿ.
ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ಮೂಲಕ ತೆಲುಗು ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಾಗಿದೆ. ಸದ್ಯ ಇನ್ಸ್ಟಾಗ್ರಾಂನಲ್ಲಿ 17.5 ಮಿಲಿಯನ್ ಜನ ಆಕೆಯನ್ನು ಫಾಲೋ ಮಾಡ್ತಿದ್ದಾರೆ. ಇನ್ನು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರೋ ಕಿಯಾರಾ ಅಡ್ವಾಣಿಗೆ ಇರೋದು 17.7 ಮಿಲಿಯನ್ ಫಾಲೋವರ್ಸ್. ಆದ್ರೆ ಇವ್ರನ್ನೆಲ್ಲಾ ಮೀರಿಸಿದ್ದಾರೆ ರಶ್ಮಿಕಾ ಮಂದಣ್ಣ. ಇನ್ಸ್ಟಾದಲ್ಲಿ ಆಕೆಗೆ ಇರೋದು ಬರೋಬ್ಬರಿ 19 ಮಿಲಿಯನ್ ಫಾಲೋವರ್ಸ್. ನನ್ನದು ಈಗ 19 ಮಿಲಿಯನ್ ಕುಟುಂಬ ಎಂದು ಖುಷಿಯಿಂದಲೇ ಈ ವಿಚಾರವನ್ನು ಖುದ್ದು ರಶ್ಮಿಕಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Sumalatha Ambareesh: ‘ಅಂಬರೀಶ್ ತೋರಿಸಿದ ದಾರಿಯಲ್ಲೇ ಸಾಗ್ತಿದ್ದೇನೆ’, ಸಿಕ್ಕವರಿಗೆಲ್ಲಾ ಉತ್ತರ ಕೊಟ್ರೆ ನನ್ನ ಗೌರವಕ್ಕೇ ಧಕ್ಕೆ !
ಬೆಂಗಳೂರಿನಲ್ಲಿದ್ದ ಈ ಕೊಡಗಿನ ಕುವರಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ನಂತರ ಹೈದರಾಬಾದ್ಗೆ ಶಿಫ್ಟ್ ಆದ್ರು. ತೆಲುಗಿನ ಘಟಾನುಘಟಿ ನಾಯಕರ ಜೊತೆಗೆಲ್ಲಾ ರಶ್ಮಿಕಾ ನಟಿಸಿದ್ದಾರೆ. ಮಹೇಶ್ ಬಾಬು, ವಿಜಯ್ ದೇವರಕೊಂಡ ಅಲ್ಲದೆ ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ‘ಪುಷ್ಪಾ’ ಚಿತ್ರ ಕೊನೆಯ ಹಂತದಲ್ಲಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಇದಲ್ಲದೇ ಅಮಿತಾಭ್ ಬಚ್ಚನ್ ಜೊತೆಗಿನ ಗುಡ್ ಬೈ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಜೊತೆಗಿನ ಮಿಶನ್ ಮಜ್ನು ಕೂಡಾ ರಶ್ಮಿಕಾ ಬಳಿ ಇದ್ದು ಈ ಎರಡು ಚಿತ್ರಗಳ ಶೂಟಿಂಗ್ಗಾಗಿ ಆಕೆ ಮುಂಬೈಗೇ ಶಿಫ್ಟ್ ಆಗಿಬಿಟ್ಟಿದ್ದಾರೆ.
ಬಾಲಿವುಡ್ನಲ್ಲಿ ರಶ್ಮಿಕಾಗೆ ಅವಕಾಶಗಳು ಹೆಚ್ಚಾಗುತ್ತಿವೆಯಂತೆ. ಹಾಗಾಗಿ ಅಲ್ಲೇ ಒಂದು ಫ್ಲಾಟ್ ತೆಗೆದುಕೊಂಡು ಮುಂಬೈಗೆ ಶಿಫ್ಟ್ ಆಗ್ಬಿಟ್ಟಿದ್ದಾರೆ ಕೊಡಗಿನ ಕುವರಿ. ಕನ್ನಡ, ತೆಲುಗು ಮಾತ್ರವಲ್ಲದೆ ಈಗ ಬಾಲಿವುಡ್ ಫ್ಯಾನ್ಸ್ ಕೂಡಾ ಇರೋದು ರಶ್ಮಿಕಾಗೆ ಪ್ಲಸ್ ಪಾಯಿಂಟ್. ಆದ್ದರಿಂದ ಈಕೆಯ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಸದ್ಯ ನಿಖರವಾಗಿ 19.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ರಶ್ಮಿಕಾ ಮಂದಣ್ಣ. ಆದ್ರೆ ಘಟಾನುಘಟಿಯರಿಗಿಂತ ಈಕೆ ಒಂದು ಹೆಜ್ಜೆ ಮುಂದಿರುವುದು ಅಭಿಮಾನಿಗಳಿಗಂತೂ ಸಖತ್ ಖುಷಿ ತಂದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ