Viral Video: ಮಾಡರ್ನ್ ಲುಕ್‍ನಲ್ಲಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ನಟಿ ರಶ್ಮಿಕಾ ಮಂದಣ್ಣ

Viral Video: ಈಗಾಗಲೇ ಈ ಸಿನಿಮಾದ ಟ್ರೇಲರ್, ಹಾಡುಗಳು ಜನರ ಮೆಚ್ಚಗೆ ಗಳಿಸಿದೆ. ಅದರಲ್ಲೂ ಪುಷ್ಟಪ ಸಿನಿಮಾದ ಸಾಮಿ ಹಾಡು ಕೂಡ ಫುಲ್ ಟ್ರೆಂಡ್ ಆಗಿದೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಸ್ಯಾಂಡಲ್‍ವುಡ್‍ನಿಂದ ನಟನಾ ವೃತ್ತಿ ಆರಂಭಿಸಿ ಕಾಲಿವುಡ್, ಟಾಲಿವುಡ್, ( Sandalwood to Kollywood) ಬಾಲಿವುಡ್‍ವರೆಗೂ ಹೆಜ್ಜೆ ಇಟ್ಟಿರುವ ನಟಿ ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಎವರ್‍ ಗ್ರೀನ್ (Evergreen) ಸ್ಮೈಲ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸರಳ, ಬಬ್ಲಿ ವ್ಯಕ್ತಿತ್ವದಿಂದಲೇ ( Bubbly personality) ಮನಸೆಳೆದಿರುವ ಇವರು ಈಗಾಗಲೇ ನ್ಯಾಷನಲ್ ಕ್ರಶ್ (National Crush) ಎಂದೆನಿಸಿಕೊಂಡಿದ್ದು, ಪ್ಯಾನ್ ಇಂಡಿಯಾ (Pan India ) ನಟಿಯಾಗಿ ಬೆಳೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಜನರ ಮೆಚ್ಚಗೆ
ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೇಲರ್, ಹಾಡುಗಳು ಜನರ ಮೆಚ್ಚಗೆ ಗಳಿಸಿದೆ. ಅದರಲ್ಲೂ ಪುಷ್ಟಪ ಸಿನಿಮಾದ ಸಾಮಿ ಹಾಡು ಕೂಡ ಫುಲ್ ಟ್ರೆಂಡ್ ಆಗಿದೆ.

ಇದನ್ನೂ ಓದಿ: RRR ಸಿನಿಮಾಗೆ ಕನ್ನಡದಲ್ಲೇ ಡಬ್​ ಮಾಡಿದ ಜೂ.NTR: ರಶ್ಮಿಕಾ ಮಂದಣ್ಣಗೆ ಮಾತ್ರ ಕನ್ನಡ ಕಷ್ಟನಾ?

ವಿಡಿಯೋ ನೋಡಿ:

ಮಾಡರ್ನ್ ಲುಕ್‍ನಲ್ಲಿ ಸಾಮಿ ಸಾಮಿ
ಇದರಲ್ಲಿ ಲಂಗ ದಾವಣಿ ಉಟ್ಟು, ದಾವಣಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಕೊಂಚ ಹಸಿಬಿಸಿಯಾಗಿಯೇ ಸಾಮಿ ಸಾಮಿ ಹಾಡಿಗೆ ಹೆಜ್ಜೆಹಾಕಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಇದೀಗ ಅವರೇ ಈ ಹಾಡಿಗೆ ಶಾರ್ಟ್ ಕಪ್ಪು ಟೀಶರ್ಟ್ ತೊಟ್ಟು ಮಾಡರ್ನ್ ಲುಕ್‍ನಲ್ಲಿ ಸಾಮಿ ಸಾಮಿ ಹಾಡಿಗೆ ಕುಣಿದಿದ್ದಾರೆ. ಇದು ರಶ್ಮಿಕಾ ಮಂದಣ್ಣ ಫ್ಯಾನ್ಸ್ ಆರ್ಮಿ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೆಯಾಗಿದೆ.

ಸಿಗ್ನೇಚರ್ ಸ್ಟೆಪ್
ಅಲ್ಲು ಅರ್ಜುನ್ ಕೂಡ ಕಾಣಿಸಿಕೊಂಡಿರುವ ಹಾಡಿನ ಸಿಗ್ನೇಚರ್ ಸ್ಟೆಪ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ ಹೀಗೆ ಬರೆದಿದ್ದಾರೆ, "ನಿಮ್ಮಲ್ಲಿ ಅನೇಕರು ಈ ರೀಲ್ ಮಾಡುವುದನ್ನು ನಾನು ನೋಡಿದ್ದೇನೆ ಮತ್ತು ನಾನು ನಿಮ್ಮ ಪಾರ್ಟಿಗೆ ಸೇರಲು ಬಯಸುತ್ತೇನೆ.. ಹಾಗಾಗಿ ನಾನು ಕೂಡ ಒಂದನ್ನು ಮಾಡಿದ್ದೇನೆ. ನಿಮ್ಮಲ್ಲಿ ಇನ್ನೂ ಅನೇಕರು ನಮ್ಮ ಪಕ್ಷಕ್ಕೆ ಸೇರಿಕೊಳ್ಳುತ್ತೀರಾ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಲಕ್ಷ್ಮಿ ಗಾಯನ
ಸಾಮಿ ಸಾಮಿಯನ್ನು ರಾಜಲಕ್ಷ್ಮಿ ಸೆಂಥಿಗಣೇಶ್ ಹಾಡಿದ್ದಾರೆ ಮತ್ತು ವಿವೇಕ ಅವರ ಸಾಹಿತ್ಯ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಕೆಲವು ದಿನಗಳ ಹಿಂದೆ ಗಾಯಕಿ ರಾಜಲಕ್ಷ್ಮಿ ಸೆಂಥಿಗಣೇಶ್ ಹಾಡುವಾಗ ತೋರಿದ ಮುಖಭಾವ ಕೂಡ ವೈರಲ್ ಆಗಿತ್ತು.ಈ ಸಿನಿಮಾವು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಚಲಂ ಬೆಟ್ಟಗಳಲ್ಲಿ ನಡೆಯುತ್ತಿರುವ ಕೆಂಪು ಮರಳು ಕಳ್ಳಸಾಗಣೆಯ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ಅವರು ಅಲ್ಲು ಅರ್ಜುನ್ ವರ ಪ್ರಿಯತಮೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

5 ಭಾಷೆಯಲ್ಲಿ ಬಿಡುಗಡೆ
ಸುಕುಮಾರ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರವನ್ನು ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ.ಟ್ರೇಲರ್‌ನಲ್ಲಿ ಪುಷ್ಪ ಅಂದ್ರೆ ಹೂ ಅಲ್ಲ, ಬೆಂಕಿ ಎಂದು ಹೇಳುವ ಅಲ್ಲು ಅರ್ಜುನ್ ಅವರ ಖಡಕ್ ಡೈಲಾಗ್ ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Rashmika Mandanna : ಅಲ್ಲು ಅರ್ಜುನ್​ಗೆ ಪ್ರೀತಿಯಿಂದ ಸ್ಪೆಷಲ್​​ ಗಿಫ್ಟ್​ ಕೊಟ್ಟ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು 17 ಡಿಸೆಂಬರ್ 2021 ರಂದು ತೆಲುಗಿನಲ್ಲಿ ಅಂತೆಯೇ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಬಿಡುಗಡೆಯಾಗಲಿದೆ.
Published by:vanithasanjevani vanithasanjevani
First published: