2018 ಅದೆಷ್ಟು ಬೇಗ ಉರುಳುತ್ತಿದೆ ಎಂದರೆ ನಿನ್ನೆ-ಮೊನ್ನೆಯಷ್ಟೆ ಹೊಸ ವರ್ಷಾಚರಣೆ ಮಾಡಿದಂತಿದೆ. ಪ್ರತಿ ವರ್ಷ ಗೂಗಲ್ನಲ್ಲಿ ಯಾವ ಸೆಲೆಬ್ರಿಟಿಗಾಗಿ ಹುಡುಕಾಟ ನಡೆಯುತ್ತೆ ಎಂದು ಮಾಹಿತಿ ನೀಡಲಾಗುತ್ತೆ. ಅದರಂತೆ ಈ ವರ್ಷದಲ್ಲಿ ಗೂಗಲ್ನಲ್ಲಿ ಯಾವ ಸೆಲೆಬ್ರಿಟಿಗಾಗಿ ಜನರು ಹೆಚ್ಚು ಹುಡುಕಾಡಿದ್ದಾರೆ. ಅದರಲ್ಲೂ ದಕ್ಷಿಣ ಸಿನಿ ರಂಗದಲ್ಲಿ ಅತಿ ಹೆಚ್ಚು ಸರ್ಚ್ ಆದ ನಟರು ಯಾರು, ಯಾವ ನಟ-ನಟಿ ಯಾವ ಸ್ಥಾನದಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ ಓದಿ.
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಈ ಬಾರಿ ಗೂಗಲ್ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಭಾರತದ ನಟರಾಗಿದ್ದಾರೆ. ನಂತರದ ಸ್ಥಾನದಲ್ಲಿ ನಾನಿ, ನಂದಮುರಿ ಬಾಲಕೃಷ್ಣ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದ್ದಾರೆ.
ಇದನ್ನು ಓದಿ : ತಮಿಳಲ್ಲಿ ಮಾತನಾಡಿ ಕಾಲಿವುಡ್ ಪ್ರೇಕ್ಷಕರ ಮನಗೆದ್ದ ರಾಕಿಂಗ್ ಸ್ಟಾರ್: ಪರ ಭಾಷೆಯಲ್ಲಿ ಮಾತನಾಡುವ ಕಲಾವಿದರಿಗೆ ಯಶ್ ಹೇಳಿದ್ದೇನು..?
ಈ ಬಗ್ಗೆ ಅವರ ಅಭಿಮಾನಿಗಳು ಟ್ವಿಟರ್ನಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
This is something cool thank you so much 🙈🙈❤️❤️❤️ https://t.co/7kOnWg6M8y
— Rashmika Mandanna (@iamRashmika) December 13, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ