Rashmika Mandanna: ಕ್ಯಾಮೆರಾ ಮುಂದೆ ಪೋಸ್​ ಕೊಡಲು ಕಷ್ಟಪಡುತ್ತಿರುವ ರಶ್ಮಿಕಾ ಮಂದಣ್ಣ..!

Rashmika Mandanna: ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯರಾಗಿರುವ ರಶ್ಮಿಕಾ, ಪ್ರತ್ಯೇಕ ಪೋಸ್ಟ್​ಗಳ ಮೂಲಕ ಫ್ಯಾನ್ಸ್​ಗಳನ್ನು ಬ್ಯುಸಿಯಾಗಿಡುತ್ತಿದ್ದಾರೆ. ಈಗಲೂ ಸಹ ಇನ್​ಸ್ಟಾಗ್ರಾಂನಲ್ಲಿ ತಮ್ಮ ಕಷ್ಟವೊಂದನ್ನು ಬಹಳ ತಮಾಷೆಯಾಗಿ ಹಂಚಿಕೊಂಡಿದ್ದಾರೆ. 

Anitha E | news18-kannada
Updated:July 2, 2020, 4:30 PM IST
Rashmika Mandanna: ಕ್ಯಾಮೆರಾ ಮುಂದೆ ಪೋಸ್​ ಕೊಡಲು ಕಷ್ಟಪಡುತ್ತಿರುವ ರಶ್ಮಿಕಾ ಮಂದಣ್ಣ..!
ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಅಪ್ಡೇಟ್​ ಕೊಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಲಾಕ್​ಡೌನ್​ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಾ... ಕತೆ ಹೇಳುತ್ತಾ ಸಖತ್​ ಮನರಂಜನೆ ಸಹ ನೀಡುತ್ತಿದ್ದಾರೆ. 

ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯರಾಗಿರುವ ರಶ್ಮಿಕಾ, ಪ್ರತ್ಯೇಕ ಪೋಸ್ಟ್​ಗಳ ಮೂಲಕ ಫ್ಯಾನ್ಸ್​ಗಳನ್ನು ಬ್ಯುಸಿಯಾಗಿಡುತ್ತಿದ್ದಾರೆ. ಈಗಲೂ ಸಹ ಇನ್​ಸ್ಟಾಗ್ರಾಂನಲ್ಲಿ ತಮ್ಮ ಕಷ್ಟವೊಂದನ್ನು ಬಹಳ ತಮಾಷೆಯಾಗಿ ಹಂಚಿಕೊಂಡಿದ್ದಾರೆ.

After fans request Rashmika Mandanna came back to social Media
ರಶ್ಮಿಕಾ ಮಂದಣ್ಣ


ರಶ್ಮಿಕಾಗೆ ಕ್ಯಾಮೆರಾ ಮುಂದೆ ಈಗೀಗ ಪೋಸ್ ಕೊಡಲು ಕಷ್ಟವಾಗುತ್ತಿದೆಯಂತೆ. ಅದಕ್ಕೆ ಅವರು ಛಾಯಾಗ್ರಾಹಕನ ಸಹಾಯ ಕೋರಿದ್ದಾರೆ.

 

Rashmika Mandanna is running out of poses for camera
ರಶ್ಮಿಕಾ ಇನ್​ಸ್ಟಾಗ್ರಾಂ ಪೋಸ್ಟ್​


ರಶ್ಮಿಕಾಗೆ ಕ್ಯಾಮೆರಾ ಮುಂದೆ ಪೋಸ್​ ಕೊಡಲು ಈಗ ಐಡಿಯಾ ಇಲ್ಲದಂತಾಗಿದೆಯಂತೆ.  ಹಳೇ ಪೋಸ್​ಗಳನ್ನೇ ಕೊಟ್ಟು ಜನರಿಗೆ ಬೋರ್​ ಮಾಡಲು ಇಷ್ಟವಿಲ್ಲ. ಅದಕ್ಕೆ ರೆಫರೆನ್ಸ್​ ಕೊಡುವಂತೆ ಛಾಯಾಗ್ರಾಹಕನ​ ಬಳಿ ಕೇಳುತ್ತಾರೆ. ಈಗ ಅದಕ್ಕೆಲ್ಲ ಸಮಯವಿಲ್ಲ ಎನ್ನುವ ಛಾಯಾಗ್ರಾಕ, 5 ನಿಮಿಷವಿದೆ ಎಂದು ಶೂಟಿಂಗ್​ ಆರಂಭಿಸುತ್ತಾರಂತೆ. ಅದಕ್ಕೆ ರಶ್ಮಿಕಾ ತಮ್ಮ ಹಳೇ ಸ್ಟೈಲ್​ನಲ್ಲೇ ಪೋಸ್​ ಕೊಟ್ಟಿದ್ದಾರೆ.
Look what you made me to do as I have already fallen in love
ರಶ್ಮಿಕಾ


ತಮ್ಮ ಹಳೇ ಸ್ಟೈಲ್​ನಲ್ಲಿ ಪೋಸ್​ ಕೊಟ್ಟಿರುವುದಕ್ಕೆ ಕ್ಯೂಟ್​ ಆಗಿ ಸ್ಪಷ್ಟನೆ ನೀಡಿದ್ದಾರೆ ಲಿಲ್ಲಿ. ಅವರು ಈ ರೀತಿ ತಮ್ಮ ಪ್ರತಿ ಫೋಟೋಗೂ ಒಂದೊಂದು ಕತೆ ಹೇಳುತ್ತಾ ವಿವರಣೆ ಕೊಡಲು ಇತ್ತೀಚೆಗೆ ಅಭ್ಯಾಸ ಮಾಡಿಕೊಂಡಿದ್ದಾರೆ.

 

ಹೊಸ ಲುಕ್​ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್​ವುಡ್​ ನಟಿ..! 

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ

 
First published: July 2, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading