ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ ಬೇಡಿಕೆಯಾಲ್ಲಿದ್ದಾರೆ ಈ ಸ್ಟಾರ್ ನಟಿ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈ ಹಿಂದೆ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದರೂ, ಆದರೆ, ಇದೀಗ ಕೊಡಗಿನ ಬೆಡಗಿ ಈ ಪಟ್ಟವನ್ನು ಪಡೆದಿದ್ದಾರೆ. ಗೂಗಲ್ನಲ್ಲಿ 2020ರ ನ್ಯಾಷನಲ್ ಕ್ರಶ್ ಎಂದು ಹುಡುಕಿದರೆ, ರಶ್ಮಿಕಾ ಮಂದಣ್ಣ ಹೆಸರು ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ರಶ್ಮಿಕಾ ಹವಾ ದೇಶದೆಲ್ಲೆಡೆ ಮೂಡಿದೆ. ಕಿರಿಕ್ ಪಾರ್ಟಿ ಮೂಲಕ ಕನ್ನಡದಲ್ಲಿ ಮಿಂಚಿದ್ದ ನಟಿ ತೆಲುಗಿನಲ್ಲಿ ಸ್ಟಾರ್ ಪಟ್ಟ ಪಡೆದರು. ತೆಲುಗಿನಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಬೇಡಿಕೆಯ ನಟಿಯಾಗಿದ್ದಾರೆ. ತಮಿಳಿನಲ್ಲಿಯೂ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದೆ ಹಿಂದಿಯಲ್ಲಿ ಕರಣ್ ಜೋಹರ್ ಆಫರ್ ಅನ್ನು ತಿರಸ್ಕರಿಸಿದರೂ ಉತ್ತರ ಭಾರತದ ಅಭಿಮಾನಿಗಳನ್ನು ಸೆಳೆದು ಈಗ ನ್ಯಾಷನಲ್ ಕ್ರಶ್ ಹಾಕಿ ಹುಡುಗರ ಹಾರ್ಟ್ಬೀಟ್ ಹೆಚ್ಚಿಸಿದ್ದಾರೆ.
ಹೇಗಾದ್ರೂ ನ್ಯಾಷನಲ್ ಕ್ರಶ್
ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿಯೂ ಹಿಟ್ ಸಿನಿಮಾ ನೀಡಿರುವ ರಶ್ಮಿಕಾ ರಾತ್ರೋ ರಾತ್ರಿ ಹೇಗೆ ನ್ಯಾಷನಲ್ ಕ್ರಶ್ ಆಗಿದ್ದಾರೆ. ಇದಕ್ಕೆ ಕಾರಣ ಇವರ ಸಿನಿಮಾ ಹಿಂದಿಗೆ ಡಬ್ ಆಗಿರುವುದು. ತೆಲುಗಿನ ಗೀತಾ ಗೋವಿಂದಂ, ಭೀಷ್ಮಾ, ಚಲೋ, ಸರಿಲೇರು ನಿಕ್ವೆರು ಸಿನಿಮಾ ಹಿಂದಿಗೆ ಡಬ್ ಆಗಿದ್ದು, ಉತ್ತರ ಭಾರತದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸಹಾಯಕವಾಗಿದೆ.
ಟ್ರೋಲಿಗರಿಗೆ ತಿರುಗೇಟು ನೀಡುವ ದಿಟ್ಟೆ
ರಶ್ಮಿಕಾ ಬೇಡಿಕೆ ನಟಿ ಜೊತೆ ಹೆಚ್ಚು ಟ್ರೋಲಿಗೆ ಗುರಿಯಾಗುತ್ತಿದ್ದಾರೆ. ಸದಾ ರಶ್ಮಿಕಾರನ್ನು ಟ್ರೋಲ್ ಮಾಡುವ ಮೂಲಕ ಅವರ ಬೇಡಿಕೆ ಕುಗ್ಗಿಸುವ ವಿಫಲ ಯತ್ನವನ್ನು ಕೆಲವರು ಮಾಡುವುದಿದೆ. ಈ ಟ್ರೋಲಿಗರಿಗೆ ಆಗೊಮ್ಮೆ, ಈಗೊಮ್ಮೆ ರಶ್ಮಿಕಾ ಚಡಿ ಬಿಡಿಸಿದ್ದು ಇದೆ. ಆದರೆ, ಅವರ ಪ್ರಖ್ಯಾತಿ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಈ ಹೊಸ ಕೀರ್ತಿ ಸಿಗುವಂತೆ ಮಾಡಿದೆ.
ಹಿಂದಿ ಆಫರ್ ರಿಜೆಕ್ಟ್ ಮಾಡಿದ್ದ ಚೆಲುವೆ
ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಅತಿದೊಡ್ಡ ಬೇಡಿಕೆ ಪಡೆದುಕೊಂಡಿರುವ ನಟಿಗೆ ಈ ಹಿಂದೆ ಹಿಂದಿ ಆಫರ್ ಸಹ ಒಲಿದು ಬಂದಿತು. ತೆಲುಗಿನ ಜರ್ಸಿ ರಿಮೇಕ್ಗಾಗಿ ರಶ್ಮಿಕಾ ಹಿಂದಿಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ಆದರೆ, ಈ ಆಫರ್ ಅನ್ನು ರಶ್ಮಿಕಾ ಸರಾಸಗಟಾಗಿ ತಳ್ಳಿಹಾಕಿದ್ದರು. ಆದರೆ, ಹಿಂದಿಯಲ್ಲಿ ಅವರ ಸಿನಿಮಾ ಡಬ್ ಆಗುವ ಮೂಲಕ ಈಗ ಅಲ್ಲಿಯೂ ದೊಡ್ಡ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ