Rashmika Mandanna: ಯಾರಿಗೆ ತಮ್ಮ ಸಂಪೂರ್ಣ ಪ್ರೀತಿ ಧಾರೆ ಎರೆಯಬೇಕೆಂದು ಪಾಠ ಮಾಡಿದ ರಶ್ಮಿಕಾ..!

Rashmika Mandanna: ತಮ್ಮ ಇನ್​ಸ್ಟಾಗ್ರಾಂನಲ್ಲಿ ಟ್ರೋಲ್​ ಮಾಡುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದ ರಶ್ಮಿಕಾ ಮಂದಣ್ಣ ಈಗ ಪ್ರೀತಿಯ ಪಾಠ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಯಾರು ಎಷ್ಟೇ ಟ್ರೋಲ್​ ಮಾಡಲಿ, ಟೀಕಿಸಲಿ ಅಭಿಮಾನಿಗಳಿಗಾಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಜೊತೆಗೆ ತಮ್ಮ ಫ್ಯಾನ್ಸ್​ ಜೊತೆ ಸದಾ ಸಂಪರ್ಕದಲ್ಲೂ ಇರುತ್ತಾರೆ. 

ತಮ್ಮ ಇನ್​ಸ್ಟಾಗ್ರಾಂನಲ್ಲಿ ಟ್ರೋಲ್​ ಮಾಡುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದ ರಶ್ಮಿಕಾ ಮಂದಣ್ಣ ಈಗ ಪ್ರೀತಿಯ ಪಾಠ ಮಾಡಿದ್ದಾರೆ. ಅದೇನಪ್ಪಾ ಪ್ರೀತಿಯ ಪಾಠ ಅಂತೀರಾ..? ಹೌದು, ಲಿಲ್ಲಿ ತಮ್ಮೆಲ್ಲ ಪ್ರೀತಿಯನ್ನು ಹಂಚಿಕೊಳ್ಳುವ ಕುರಿತು ಪಾಠ ಮಾಡಿದ್ದಾರೆ.

Rashmika Mandann wishied her comrade vijay devarakonda on his birthday
ರಶ್ಮಿಕಾ ಮಂದಣ್ಣ


ರಶ್ಮಿಕಾ ಮಂದಣ್ಣ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಈ ಹಿಂದೆ ಅವರು ತಮ್ಮ ನಾಯಿ ತಿನ್ನುವ ಪಡೆಗ್ರಿ ಕಾಳೊಂದನ್ನು ಟೇಸ್ಟ್ ಮಾಡಿ ಸುದ್ದಿಯಾಗಿದ್ದರು. ಈಗ ತಮ್ಮ ನೆಚ್ಚಿನ ಸಾಕು ನಾಯಿಗೆ ತಮ್ಮೆಲ್ಲ ಪ್ರೀತಿಯನ್ನು ಧಾರೆ ಎರೆಯಿರಿ ಎಂದು ಮನವಿ ಮಾಡಿದ್ದಾರೆ. 
View this post on Instagram
 

If you have any pets at home, Cherish them with all your heart. ♥️ cz for them you are their whole world.♥️


A post shared by Rashmika Mandanna (@rashmika_mandanna) on


ರಶ್ಮಿಕಾ ಅವರ ಮನೆಯಲ್ಲಿ 3ಕ್ಕೂ ಹೆಚ್ಚು ನಾಯಿಗಳಿವೆ. ಲಾಕ್​ಡೌನ್​ನಲ್ಲಿ ರಶ್ಮಿಕಾ ತಮ್ಮ ಮುದ್ದಾದ ಸಾಕು ನಾಯಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರಂತೆ. ಆಗಾಗ ಮುದ್ದಿನ ಶ್ವಾನಗಳೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
View this post on Instagram
 

When someone asks “How’s quarantine treating you?”


A post shared by Rashmika Mandanna (@rashmika_mandanna) on


ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್​ ಜೊತೆ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದು, ಜೊತೆಗೆ ಕೈ ತುಂಬಾ ಅವಕಾಶಗಳನ್ನು ಇಟ್ಟುಕೊಂಡಿದ್ದಾರೆ. ಲಾಕ್​ಡೌನ್​ನಿಂದಾಗಿ ಅವರು ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

Jr NTR Birthday: ಜೂ. ಎನ್​ಟಿಆರ್​ ಅಭಿಮಾನಿಗಳಿಗೆ ಒಂದು ದಿನ ಮೊದಲೇ ಸಿಕ್ತು ಭರ್ಜರಿ ಸರ್ಪ್ರೈಸ್​..!

First published: