22 ವರ್ಷದಲ್ಲಿ ಸರಿಯಾಗಿ ಕನ್ನಡ ಕಲಿಯದ ರಶ್ಮಿಕಾ, 22 ವಾರದಲ್ಲಿ ತೆಲುಗು ಕಲಿತಿದ್ದು ಹೇಗೆ..?

news18
Updated:August 1, 2018, 2:04 PM IST
22 ವರ್ಷದಲ್ಲಿ ಸರಿಯಾಗಿ ಕನ್ನಡ ಕಲಿಯದ ರಶ್ಮಿಕಾ, 22 ವಾರದಲ್ಲಿ ತೆಲುಗು ಕಲಿತಿದ್ದು ಹೇಗೆ..?
news18
Updated: August 1, 2018, 2:04 PM IST
ನ್ಯೂಸ್​ 18 ಕನ್ನಡ

ರಶ್ಮಿಕಾ ಮಂದಣ್ಣ, ಕನ್ನಡದ ಹುಡುಗಿ, ಕೊಡಗಿನ ಬೆಡಗಿ ಅಂತೆಲ್ಲ ಹೊಗಳಿದ್ದೇ ಹೊಗಳಿದ್ದು. ನಾವು ಇವತ್ತೂ ಮಾಡುತ್ತಿರೋದು ಅದನ್ನೇ. ಯಾಕೆಂದರೆ ರಶ್ಮಿಕಾ ಕನ್ನಡದವರು ಅನ್ನೋ ಅಭಿಮಾನ ನಮಗಿದೆ. ಆದರೆ ಕನ್ನಡತಿ ಅನ್ನೋ ಸ್ವಾಭಿಮಾನ ಅವರಿಗೇ ಇಲ್ಲದಿದ್ದರೆ ಹೇಗೆ..? ಏನಾಯ್ತು..?

ಇಷ್ಟಕ್ಕೂ ಅವರಿಗೇ ಕನ್ನಡದ ಬಗ್ಗೆ ಕಾಳಜಿ, ಅಭಿಮಾನ, ಕನ್ನಡತಿ ಅನ್ನೋ ಸ್ವಾಭಿಮಾನ ಯಾವುದೂ ಇಲ್ಲ ಅಂತ ಹೇಳುತ್ತಿರೋದು ನಾವಲ್ಲ. ಯೂಟ್ಯೂಬ್‍ನಲ್ಲಿ ರಶ್ಮಿಕಾ ತೆಲುಗು ಸ್ಪೀಚ್ ನೋಡುತ್ತಿರೋ ಜಾಲತಾಣವನ್ನು ಜಾಲಾಡೋ ಕನ್ನಡಿಗರು. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ನಡೆದ ರಶ್ಮಿಕಾಅವರ  ಮುಂದಿನ ತೆಲುಗು ಚಿತ್ರ 'ಗೀತ ಗೋವಿಂದಂ' ಆಡಿಯೋ ರಿಲೀ ಕಾರ್ಯಕ್ರಮ.


ನೀವೇ ನೋಡಿದಿರಲ್ಲ ರಶ್ಮಿಕಾ ಕೇಳಿ ಕೇಳಿ ಎಷ್ಟು ಚೆನ್ನಾಗಿ ತೆಲುಗು ಮಾತಾಡುತ್ತಿದ್ದಾರೆ ಅಂತ. ಕನ್ನಡ ಮಾತಾಡಿ ಅಂದರೆ 90 ಪರ್ಸೆಂಟ್ ಇಂಗ್ಲಿಷ್ ಪದಗಳು, 10 ಪರ್ಸೆಂಟ್ ಕನ್ನಡ ಪದ ಬಳಸಿ ಮಾತಾಡೋ ನೀವು ನಿಜವಾದ ಕನ್ನಡತೀನಾ..? 22 ವರ್ಷ ಕನ್ನಡ ನಾಡಲ್ಲಿದ್ದು ಕನ್ನಡ ಸರಿಯಾಗಿ ಮಾತಾಡೋಕೆ ಬರದವರು, 22 ವಾರದಲ್ಲೇ ತೆಲುಗು ಕಲಿಯೋಕೆ ಹೇಗೆ ಸಾಧ್ಯವಾಯಿತು ಅಂತ ಪ್ರಶ್ನಿಸಿದ್ದಾರೆ.

ಮತ್ತೆ ಕೆಲವರು.. ಕನ್ನಡ ಮಾತಾಡಿ ಮೊದಲು, ಕನ್ನಡ ಸರಿಯಾಗಿ ಬರಲ್ಲ ಅಂತ ಹೇಳ್ತೀರಾ..? ಆದರೆ ತೆಲುಗನ್ನು ಎಷ್ಟು ಬೇಗ ಕಲಿತು ಮಾತಾಡುತ್ತಿದ್ದೀರಾ?ನಿಮಗೆಲ್ಲ ಕನ್ನಡ ಅಂದರೆ ಅಷ್ಟೊಂದು ತಾತ್ಸಾರ. ಅದೇ ಬೇರೆ ಭಾಷೆಯನ್ನಾದರೆ ಎಷ್ಟು ಪ್ರೀತಿ ಮಾಡಿ ಕಲೀತೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದು ರಶ್ಮಿಕಾಗೆ ಗೊತ್ತಿಲ್ಲದಿರೋ ವಿಷಯವೇನಲ್ಲ. ಆದರೆ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶ ಗಿಟ್ಟಿಸಿಕೊಳ್ಳುತ್ತಿರೋ ಚೆಲುವೆಗೆ ತೆಲುಗು ಕಲಿತು ಮಾತಾಡಲೇಬೇಕಾದ ಅನಿವಾರ್ಯತೆಯಿದೆ.

ಹಾಗೆ ನೋಡಿದರೆ ಕಿಚ್ಚ ಸುದೀಪ್‍ರಂತಹ ಸ್ಟಾರ್​ ನಟರು ತಮಿಳು ಸಿನಿಮಾಗಳ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದರು. ತೆಲುಗು ವೇದಿಕೆಗಳಲ್ಲೂ ಅಷ್ಟೇ ಸುದೀಪ್ ತೆಲುಗು ಭಾಷೆಗಿಂತ ಹೆಚ್ಚು ಇಂಗ್ಲಿಷನ್ನೇ ಬಳಸಿದ್ದರು. ಆದರೆ ನಮ್ಮ ನಟಿಯರಿಗೆ ಮಾತ್ರ ಅದೆಲ್ಲಿಂದಲೋ ಅತಿರೇಖದ ಅಭಿಮಾನ ಉಕ್ಕಿ ಬಂದುಬಿಡುತ್ತೆ.
Loading...

ಕನ್ನಡವನ್ನು ಕಷ್ಟಪಟ್ಟು ಮಾತನಾಡೋ ಎಷ್ಟೋ ನಟಿಯರು ಪರಭಾಷೆಗೆ ಹೋದ ಕೂಡಲೇ ಕೆನೆಯೋ ಕುದುರೆಗಳು ಹಾಗೂ ಜಿಗಿಯೋ ಜಿಂಕೆಗಳಾಗಿಬಿಡ್ತಾರೆ. ಅದೇನು ಪರಭಾಷೆಯ ಅಭಿಮಾನ, ಅದೇನು ಸಹಿಷ್ಣುತೆ. ಕಟ್ಟಪ್ಪ ಸತ್ಯರಾಜ್ ಕೂಡ ಮೆಚ್ಚಬೇಕು. ಹಾಗಿರುತ್ತೆ ಕನ್ನಡತಿಯರ ಕಲರವ.

ಪರಭಾಷೆಯವರು ಕನ್ನಡಕ್ಕೆ ಬಂದು ಎಲ್ಲರಿಗೂ ನಮಸ್ಕಾರ ಅನ್ನೋ ಎರಡು ಕನ್ನಡ ಪದವಾಡಿದರೆ ಅರಮನೆ ಗೆದ್ದು ಕಿರೀಟ ತೊಟ್ಟಂತೆ ಸಂಭ್ರಮಿಸುತ್ತಾರೆ ಕನ್ನಡಿಗರು. ಅಂತಹ ನಮಗ, ನಮ್ಮವರೇ ಕನ್ನಡ ಮಾತಾಡದಿದ್ದರೆ ಮಾತ್ರ ಅರಣ್ಯರೋಧನದಂತೆ ಅರಚಿ ಸುಮ್ಮನಾಗುತ್ತೀವೆ ಅಷ್ಟೇ. ಇಲ್ಲದಿದ್ದರೆ ಈ ತರಹ ಕಮೆಂಟ್ ಹಾಕಿ ಕನ್ನಡ ಮಾತಾಡಿ, ಕನ್ನಡ ಮಾತಾಡಿ ಅಂತ ಗೋಗರಿತೀವಿ. ಏನಂತೀರಾ..?

 

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ