ತೆಲುಗಿನ ‘ಗೀತಾ ಗೋವಿಂದಂ’ (Geeta Govindam) ಮತ್ತು ‘ಡಿಯರ್ ಕಾಮ್ರೇಡ್’ (Dear Comrade) ನಂತಹ ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನ ಗೆದ್ದಂತಹ ಜೋಡಿ ಎಂದರೆ ಅದು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devankonda) ಅವರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರಿಬ್ಬರ ಪರದೆಯ ಮೇಲಿನ ಒಂದು ಕೆಮಿಸ್ಟ್ರಿ ಯಾರು ತಾನೇ ಮರೆಯಲು ಸಾಧ್ಯ ಹೇಳಿ..? ಇವರಿಬ್ಬರ ಸ್ನೇಹ, ಸಾಂದರ್ಭಿಕ ಭೇಟಿಗಳು ಅಭಿಮಾನಿಗಳಲ್ಲಿ ಅನೇಕ ಸಂದೇಹಗಳನ್ನು ಹುಟ್ಟಿ ಹಾಕಿದ್ದರೂ ಸಹ ಇವರಿಬ್ಬರು 'ಕೇವಲ ಸ್ನೇಹಿತರು' ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇವರಿಬ್ಬರು ಸ್ಟಾರ್ ನಟರು ಅನೇಕ ಬಾರಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಇವರಿಬ್ಬರು ಒಟ್ಟಿಗೆ ಒಂದೇ ಕಡೆ ಇದ್ದು ಹೊಸ ವರ್ಷವನ್ನು(New Year) ಆಚರಿಸಿದ್ದಾರೆ ಎಂದರೆ ಅಭಿಮಾನಿಗಳಿಗೆ ಇದನ್ನು ಕೇಳಿ ತುಂಬಾ ಆಶ್ಚರ್ಯವಾಗುವುದಿಲ್ಲ.
ಫೋಟೋಗಳು ಇವೆ ನೋಡಿ
ಟಾಲಿವುಡ್ನ ಅತ್ಯಂತ ಜನಪ್ರಿಯ ವದಂತಿಯ ಜೋಡಿಯಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಹೊಸ ವರ್ಷ ಆಚರಿಸಿದ್ದು ಒಂದೇ ಸ್ಥಳದಲ್ಲಿ ಎಂದು ಖಚಿತವಾಗಿ ಹೇಳಬಹುದು. ಹೇಗೆ ಅಂತೀರಾ? ಸುದ್ದಿ ಮಾಧ್ಯಮವೊಂದು ಪ್ರತ್ಯೇಕವಾಗಿ ವರದಿ ಮಾಡಿದಂತೆ, ಗೋವಾದಲ್ಲಿ ನಡೆದ ಆಚರಣೆಗಳಲ್ಲಿ ಇವರಿಬ್ಬರು ಫೋನ್ ಮಾಡಿದರು ಮತ್ತು ಇದನ್ನು ಸಾಬೀತುಪಡಿಸಲು ಕೆಲವು ಫೋಟೋಗಳು ಇವೆ ನೋಡಿ ಇಲ್ಲಿ.
ಸೋಷಿಯಲ್ ಮೀಡಿಯಾದಲ್ಲಿ ಶೇರ್
ಜನವರಿ 1 ರಂದು, ನಟಿ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಲು ಒಂದು ಸ್ಥಳದಲ್ಲಿ ನಿಂತು ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಈ ಫೋಟೋದ ಹಿನ್ನೆಲೆಯಲ್ಲಿ ಒಂದು ಸ್ವಿಮ್ಮಿಂಗ್ ಪೂಲ್ ಮತ್ತು ಗಿಡಗಳಿರುವುದನ್ನು ನಾವು ಫೋಟೋವೊಂದರಲ್ಲಿ ನೋಡಬಹುದಾಗಿದೆ.
ಒಟ್ಟಿಗೆ ಹೊಸ ವರ್ಷ ಆಚರಣೆ
ಅದೇ ರೀತಿಯ ಹಿನ್ನಲೆಯಿರುವ ಇನ್ನೊಂದು ಫೋಟೋವನ್ನು ವಿಜಯ್ ಸಹೋದರ ಆನಂದ್ ದೇವರಕೊಂಡ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳಲ್ಲಿರುವ ಹಿನ್ನೆಲೆಯ ನೋಟವನ್ನು ನೋಡಿಕೊಂಡು ವಿಜಯ್ ಕುಟುಂಬ ಮತ್ತು ಅವರೊಟ್ಟಿಗೆ ರಶ್ಮಿಕಾ ಮಂದಣ್ಣ ಎಲ್ಲರೂ ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ. ಅಭಿಮಾನಿಗಳು ರಶ್ಮಿಕಾ ಮತ್ತು ಆನಂದ್ ಅವರ ಒಂದೇ ಸ್ಥಳವನ್ನು ಗುರುತಿಸುವಲ್ಲಿ ತಡ ಮಾಡದೆ ವಿವಿಧ ಮೀಮ್ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದರು.
3ನೇ ಚಿತ್ರದಲ್ಲಿ ನಟನೆ ನೋಡಬೇಕು
ಅಭಿಮಾನಿಗಳು ಇವರಿಬ್ಬರು ಸ್ಟಾರ್ ನಟರನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಅದರ ಬಗ್ಗೆ ಕೇಳಿದ ನಂತರ, ರಶ್ಮಿಕಾ ಮನೋರಂಜನೆ ಮಾಧ್ಯಮಕ್ಕೆ "ನಮ್ಮ ಮೂರನೇ ಚಿತ್ರದ ಬಗ್ಗೆ ನೀವು ಅವರನ್ನು ಕೇಳಬೇಕಾಗುತ್ತದೆ. ಅವರು ‘ಲಿಗರ್’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ನಾನು ಆ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಮುಂದೆ ಏನಾಗುತ್ತದೆ ಎಂದು ನೋಡಲು ನನಗೆ ಕುತೂಹಲವಿದೆ. ನನ್ನ ಟೈಮ್ ಲೈನ್ ಮತ್ತು ಅವರ ಟೈಮ್ ಲೈನ್ ಹೊಂದಿಕೆಯಾದರೆ ನಾವು ಆ ಚಲನಚಿತ್ರವನ್ನು ಒಟ್ಟಿಗೆ ಮಾಡುತ್ತೇವೆ" ಎಂದು ಹೇಳಿದ್ದಾರೆ.
ನಟ ವಿಜಯ್ ದೇವರಕೊಂಡ ಪ್ರಸ್ತುತ ಪುರಿ ಜಗನ್ನಾಧ್ ನಿರ್ದೇಶನದ ತಮ್ಮ ಪ್ಯಾನ್ ಇಂಡಿಯನ್ ಚಿತ್ರ ‘ಲಿಗರ್’ ನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಚೊಚ್ಚಲ ಚಿತ್ರ ‘ಮಿಷನ್ ಮಜ್ನು’ ಮತ್ತು ಬಾಲಿವುಡ್ನ ದೊಡ್ಡ ನಟರಾದ ಅಮಿತಾಭ್ ಬಚ್ಚನ್ ಅವರೊಂದಿಗೆ ‘ಗುಡ್ ಬೈ’ ಸೇರಿದಂತೆ ನಟಿ ರಶ್ಮಿಕಾ ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ