Rashmika Mandanna: ಕೆಟ್ಟದಾಗಿ ಟ್ರಾಲ್​ ಮಾಡಿದವರಿಗೆ ಬಿಸಿ ಮುಟ್ಟಿಸಿದ ರಶ್ಮಿಕಾ..!

Rashmika Mandanna: ರಶ್ಮಿಕಾ ಟ್ರಾಲ್​ನಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ..? ಅವರ ಸಿನಿಮಾದಲ್ಲಿನ ಚುಂಬನದ ದೃಶ್ಯಗಳಿರಬಹುದು.... ಕನ್ನಡ ಮಾತನಾಡುವ ವಿಷಯವಿರಬಹುದು. ಹೀಗೆ ಆಗಾಗ ಟ್ರಾಲ್​ಗಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಆದರೂ ಇವಕ್ಕೆಲ್ಲ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದತ್ತ ಗಮನಹರಿಸಿಕೊಂಡು ಹೋಗುತ್ತಿದ್ದ ರಶ್ಮಿಕಾ ಈಗ ಟ್ರಾಲ್​ ಮಾಡುವವರ ವಿರುದ್ಧ ಗುಡುಗಿದ್ದಾರೆ.  

Anitha E | news18-kannada
Updated:November 7, 2019, 2:44 PM IST
Rashmika Mandanna: ಕೆಟ್ಟದಾಗಿ ಟ್ರಾಲ್​ ಮಾಡಿದವರಿಗೆ ಬಿಸಿ ಮುಟ್ಟಿಸಿದ ರಶ್ಮಿಕಾ..!
ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿ ರಂಗದ ಮೋಸ್ಟ್​ ಹ್ಯಾಪನಿಂಗ್​ ಸ್ಟಾರ್​. ಸಾಮಾಜಿಕ ಜಾಲತಾಣದಲ್ಲಂತೂ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿರುತ್ತಾರೆ. ಈ ನಟಿ ಕುಂತರೂ ಸುದ್ದಿ, ನಿಂತರೂ ಸುದ್ದಿಯಾಗ್ತಾರೆ.

ಹೀಗಿರುವಾಗ ರಶ್ಮಿಕಾ ಟ್ರಾಲ್​ನಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ..? ಅವರ ಸಿನಿಮಾದಲ್ಲಿನ ಚುಂಬನದ ದೃಶ್ಯಗಳಿರಬಹುದು.... ಕನ್ನಡ ಮಾತನಾಡುವ ವಿಷಯವಿರಬಹುದು. ಹೀಗೆ ಆಗಾಗ ಟ್ರಾಲ್​ಗಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಆದರೂ ಇವಕ್ಕೆಲ್ಲ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದತ್ತ ಗಮನಹರಿಸಿಕೊಂಡು ಹೋಗುತ್ತಿದ್ದ ರಶ್ಮಿಕಾ ಈಗ ಟ್ರಾಲ್​ ಮಾಡುವವರ ವಿರುದ್ಧ ಗುಡುಗಿದ್ದಾರೆ.

Rashmika hits back to trolls
ಟ್ರಾಲ್​ ಮಾಡಿದವರನ್ನು ತರಾಟೆಗೆ ತೆದುಕೊಂಡ ರಶ್ಮಿಕಾ


ಚಿಕ್ಕ ಪುಟ್ಟ ವಿಷಯಗಳಿಗೂ ರಶ್ಮಿಕಾರನ್ನು ಟ್ರಾಲ್​ ಮಾಡಲಾಗುತ್ತಿದೆ.  ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ರಶ್ಮಿಕಾ ಈಗ ಸಹನೆ ಕಳೆದುಕೊಂಡಿದ್ದಾರೆ. ಅದಕ್ಕೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: Happy Birthday Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್​..!

ಇತ್ತೀಚೆಗಷ್ಟೆ ರಶ್ಮಿಕಾ ತಮ್ಮ ಚಿಕ್ಕಂದಿನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಟ್ರಾಲಿಗರೊಬ್ಬರು ತೀರಾ ಕೆಟ್ಟದಾಗಿ ಬರೆದು ಟ್ರಾಲ್​ ಮಾಡಿದ್ದಾರೆ. ಇದರಿಂದ ಸಿಡಿಮಿಡಿಗೊಂಡಿರುವ ರಶ್ಮಿಕಾ ತಮ್ಮ ಇನ್​ಸ್ಟಾದಲ್ಲಿ ಅವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

'ನಾಯಕಿಯರನ್ನು ಸಾಫ್ಟ್​ ಟಾರ್ಗೆಟ್​ ಮಾಡಲಾಗುತ್ತಿದೆ. ಪಬ್ಲಿಕ್​ ಫಿಗರ್​ ಎಂದ ಮಾತ್ರಕ್ಕೆ ನಿರ್ದಯವಾಗಿ ಟಾರ್ಗೆಟ್​ ಮಾಡಬೇಕೆಂದಿಲ್ಲ. ಟೀಕಿಸುವ ಹಾಗೂ ಕೆಟ್ಟ ಟ್ರಾಲ್​ಗಳನ್ನು ಆದಷ್ಟು ನಿರ್ಲಕ್ಷಿಸುತ್ತೇನೆ. ನನ್ನ ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಮಾತನಾಡುವ ಹಕ್ಕಿದೆ ನಿಮಗೆ. ಆದರೆ ನನ್ನ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಅಲ್ಲ. ನನ್ನನ್ನು ನೋಯಿಸುವಲ್ಲಿ ನೀವು ಯಶಸ್ವಿಯಾಗಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: 'ಅದಕ್ಕೆ ನೀನಿನ್ನೂ ಸಿಂಗಲ್...​' ಹೀಗೆ ರಶ್ಮಿಕಾ ಹೇಳಿದ್ದು ಯಾರಿಗೆ..!

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!


First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading