ರಶ್ಮಿಕಾ ಹೆಸರಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್​ಗೆ ಅವಮಾನ ಮಾಡಿದ ಟಾಲಿವುಡ್ ಮಂದಿ!

ರಶ್ಮಿಕಾ ತೆಲುಗಿನಲ್ಲಿ ನಟಿಸಿದ್ದ ‘ಚಲೋ’ ಹಾಗೂ ‘ಗೀತ ಗೋವಿಂದಂ’ ಚಿತ್ರ ತುಂಬಾನೇ ಹಿಟ್​ ಆಗಿತ್ತು. ಈ ಎರಡು ಚಿತ್ರಗಳ ಶೀರ್ಷಿಕೆಯನ್ನು ಇಟ್ಟುಕೊಂಡು ‘ಗೀತಾ ಚಲೋ’ ಎನ್ನುವ ಶೀರ್ಷಿಕೆ ಇಡಲಾಗಿದೆ!

Rajesh Duggumane | news18
Updated:April 15, 2019, 12:54 PM IST
ರಶ್ಮಿಕಾ ಹೆಸರಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್​ಗೆ ಅವಮಾನ ಮಾಡಿದ ಟಾಲಿವುಡ್ ಮಂದಿ!
ಚಮಕ್​ ಪೋಸ್ಟರ್​
Rajesh Duggumane | news18
Updated: April 15, 2019, 12:54 PM IST
‘ಗೋಲ್ಡನ್​ ಸ್ಟಾರ್’​ ಗಣೇಶ್​​ ಕನ್ನಡದಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದವರು. ಆದರೆ, ಈಗ ಅವರಿಗೆ ತೆಲುಗು ಮಂದಿಯಿಂದ ಅವಮಾನವಾಗಿದೆ! ಅದಕ್ಕೆ ಕಾರಣ ‘ಚಮಕ್​’ ಸಿನಿಮಾ. ‘ಚಮಕ್​’ ಚಿತ್ರಕ್ಕೂ ಗಣೇಶ್​ಗೆ ಅವಮಾನವಾಗುವುದಕ್ಕೂ ಕಾರಣವೇನು ಎಂದು ನೀವು ಪ್ರಶ್ನಿಸಬಹುದು. ಅದಕ್ಕೂ ಒಂದು ಲಿಂಕ್​ ಇದೆ.

‘ಚಮಕ್​’ ತೆಲುಗಿನಲ್ಲಿ ‘ಗೀತಾ ಚಲೋ’ ಹೆಸರಿನಲ್ಲಿ ಡಬ್​ ಆಗಿದೆ. ಈ ಸಿನಿಮಾ ಏ.26ರಂದು ತೆರೆಗೆ ಬರುತ್ತಿದೆ. ಅಚ್ಚರಿ ಎಂದರೆ, ಡಬ್​ ಆಗಿರುವ ಈ ಸಿನಿಮಾಗೆ ‘ಗೀತಾ ಚಲೋ’ ಎಂದು ಹೆಸರಿಡಲು ಕಾರಣ ರಶ್ಮಿಕಾ ಮಂದಣ್ಣ ಅಂತೆ!

ರಶ್ಮಿಕಾ ತೆಲುಗಿನಲ್ಲಿ ನಟಿಸಿದ್ದ ‘ಚಲೋ’ ಹಾಗೂ ‘ಗೀತ ಗೋವಿಂದಂ’ ಚಿತ್ರ ತುಂಬಾನೇ ಹಿಟ್​ ಆಗಿತ್ತು. ಈ ಎರಡು ಚಿತ್ರಗಳ ಶೀರ್ಷಿಕೆಯನ್ನು ಇಟ್ಟುಕೊಂಡು ‘ಗೀತಾ ಚಲೋ’ ಎನ್ನುವ ಶೀರ್ಷಿಕೆ ಇಡಲಾಗಿದೆ!

ಇದನ್ನೂ ಓದಿ: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಹೊಸ ಪ್ರೇಮ ಕತೆ: ವಿವಾಹಿತ ನಟನೊಂದಿಗೆ ಲಿಲ್ಲಿ ರೊಮ್ಯಾನ್ಸ್​ತೆಲುಗಿನಲ್ಲಿ ‘ಚಮಕ್​’ ಡಬ್ಬಿಂಗ್​ ಹಕ್ಕನ್ನು ಪಡೆದವರು ಇತ್ತೀಚೆಗೆ ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಈ ವೇಳೆ ಅವರು ಒಮ್ಮೆಯೂ ಗಣೇಶ್​ ಅವರ ಹೆಸರನ್ನು ಎತ್ತಿಲ್ಲ. ಇಡೀ ಚಿತ್ರದಲ್ಲಿ ರಶ್ಮಿಕಾ ಅವರೇ ಹೀರೋ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ! ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಕನ್ನಡಿಗರು ಅಪಸ್ವರ ಎತ್ತಿದ್ದಾರೆ.
Loading...

“ಈ ಚಿತ್ರದಲ್ಲಿ ರಶ್ಮಿಕಾ ಕೇವಲ ನಾಯಕಿ ಅಲ್ಲ. ಅವರೇ ಹೀರೋ. ‘ಚಲೋ’, ‘ಗೀತ ಗೋವಿಂದಂ’ನಂಥ ಹಿಟ್​ ಚಿತ್ರಗಳನ್ನು ನೀಡಿದವರು ರಶ್ಮಿಕಾ. ಅವರನ್ನು ನೋಡಿಯೇ ಚಿತ್ರಮಂದಿರಕ್ಕೆ ಜನ ಬರುತ್ತಾರೆ. ರಶ್ಮಿಕಾ ಲಕ್ಷ್ಮೀ ಇದ್ದಂತೆ. ಅವರ ಜೊತೆ ಸಿನಿಮಾ ಮಾಡಿದರೆ ಸೂಪರ್​ ಹಿಟ್​ ಆಗಿ ಬಿಡುತ್ತದೆ,” ಎಂದು ಸುದ್ದಿಗೋಷ್ಠಿಯಲ್ಲಿ ಡಬ್ಬಿಂಗ್​ ಹಕ್ಕು ಪಡೆದ ತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ಧ್ರುವ ಅಭಿನಯದ ‘ಪೊಗರು’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವತಾರ ಹೇಗಿರಲಿದೆ ಗೊತ್ತಾ?

ಗಣೇಶ್​ ಅಭಿನಯದ ‘ಮುಂಗಾರು ಮಳೆ’ ಚಿತ್ರ ಚಿತ್ರಮಂದಿರದಲ್ಲಿ ಬರೋಬ್ಬರಿ 800 ದಿನ ಓಡಿತ್ತು. ‘ಚಮಕ್​’ ಹಿಟ್​ ಆಗುವಲ್ಲಿ ಅವರ ಪಾತ್ರ ಕೂಡ ದೊಡ್ಡಿದಿದೆ. ಹೀಗಿದ್ದರೂ, ಸುದ್ದಿಗೋಷ್ಠಿಯಲ್ಲಿ ಗಣೇಶ್​ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರಶ್ಮಿಕಾ ಹೆಸರನ್ನು ಹೇಳಿಕೊಂಡು ಚಿತ್ರ ಹಿಟ್​ ಮಾಡುವ ಆಲೋಚನೆಯಲ್ಲಿ ತೆಲುಗು ಮಂದಿ ಇದ್ದಾರೆ. ಈ ಮೂಲಕ ಗಣೇಶ್​​ಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626