Rashmika Mandanna: ಹಾಟ್​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ: ಇದರ ಹಿಂದಿದೆ ಒಂದು ಕಾರಣ..!

ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಂ ಖಾತೆಲ್ಲಿ ಹಂಚಿಕೊಂಡಿರುವ ಈ ಒಂದು ಫೋಟೋದಿಂದಾಗಿ ಚರ್ಚೆಯಲ್ಲಿದ್ದಾರೆ. ಅರಿಶಿನ ಬಣ್ಣದ ಟ್ಯೂಬ್​ ಟಾಪ್​ನಲ್ಲಿ ಪೋಸ್​ ಕೊಟ್ಟಿರುವ ರಶ್ಮಿಕಾ ಅವರ ಈ ಫೋಟೋಗೆ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಲೈಕ್ಸ್​ ಹಾಗೂ ಸಾವಿರಾರು ಕಮೆಂಟ್​ಗಳು ಸಿಕ್ಕಿವೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚುತ್ತಿರುವ ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರೀಟ್​ ಕೊಡುತ್ತಿರುತ್ತಾರೆ. ರಶ್ಮಿಕಾ ಬಾಲಿವುಡ್​ಗೆ ಹಾಡಿದ ಮೇಲಂತೂ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಮೊದಲ ಬಾಲಿವುಡ್ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದೂ ಅಂತಾ ಇಂತಾ ಸ್ಟಾರ್ ಜೊತೆಗಲ್ಲ. ಬದಲಾಗಿ ಭಾರತದ ಅತಿದೊಡ್ಡ ಸೂಪರ್​ ಸ್ಆರ್​ ಬಿಗ್‍-ಬಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ತಮ್ಮ ಎರಡನೇ ಹಿಂದಿ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈಗ ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಹಾಟ್​ ಆಗಿರುವ ಫೊಟೋವೊಂದನ್ನು ಶೇರ್​ ಮಾಡಿದ್ದಾರೆ. 

ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಂ ಖಾತೆಲ್ಲಿ ಹಂಚಿಕೊಂಡಿರುವ ಈ ಒಂದು ಫೋಟೋದಿಂದಾಗಿ ಚರ್ಚೆಯಲ್ಲಿದ್ದಾರೆ. ಅರಿಶಿನ ಬಣ್ಣದ ಟ್ಯೂಬ್​ ಟಾಪ್​ನಲ್ಲಿ ಪೋಸ್​ ಕೊಟ್ಟಿರುವ ರಶ್ಮಿಕಾ ಅವರ ಈ ಫೋಟೋಗೆ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಲೈಕ್ಸ್​ ಹಾಗೂ ಸಾವಿರಾರು ಕಮೆಂಟ್​ಗಳು ಸಿಕ್ಕಿವೆ.






ಇನ್ನು ರಶ್ಮಿಕಾ ಈ ಹಾಟ್​ ಫೋಟೋವನ್ನು ಕೇವಲ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲು ಒಂದು ಕಾರಣವಿದೆ. ಹೌದು, ರಶ್ಮಿಕಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈಗ 20 ಮಿಲಿಯನ್ ಹಿಂಬಾಲಕರಿದ್ದಾರೆ. ಹೌದು, ಈಗ ರಶ್ಮಿಕಾ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 2 ಕೋಟಿ ಫಾಲೋವರ್ಸ್​ ಆಗಿದ್ದಾರೆ. ಈ ಖುಷಿಯನ್ನು ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ರಶ್ಮಿಕಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ದಕ್ಷಿಣ ಭಾರತದ ತಾರೆಯಲ್ಲಿ ರಶ್ಮಿಕಾ ಮುಂದಿದ್ದಾರೆ. 2 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಕಿರಿಕ್ ಬೆಡಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ತಾರೆಯರ ಪಟ್ಟಿಯಲ್ಲಿ ಮೊದಲ ಸ್ಥಾನಲ್ಲಿದ್ದಾರೆ. 19. 3 ಮಿಲಿಯನ್​ ಹಿಂಬಾಲಕರನ್ನು ಹೊಂದುವ ಮೂಲಕ ಕಾಜಲ್ ಅಗರ್ವಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಸಮಂತಾ ಅವರು 1.75 ಕೋಟಿ, ಕಿಯಾರಾ ಅಡ್ವಾಣಿ 1.77 ಕೋಟಿ ಹಾಗೂ ವಿಜಯ್ ದೇವರಕೊಂಡ 12. 5 ಕೋಟಿ ಫಾಲೋವರ್ಸ್​ ಅನ್ನು ಹೊಂದಿದ್ದಾರೆ.

ಇದನ್ನೂ ಓದಿ: Kareena Kapoor-Jehangir Khan: ಎರಡನೇ ಮಗನಿಗೆ ಜಹಾಂಗೀರ್​ ಖಾನ್​ ಎಂದು ಹೆಸರಿಟ್ಟ ಕರೀನಾ ಕಪೂರ್​-ಸೈಫ್​ ಸಲಿ ಖಾನ್​

ಹೌದು, ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್‍ಗಳಲ್ಲಿ ಮಿಂಚಿದ ಬಳಿಕ ಸದ್ಯ ಬಾಲಿವುಡ್‍ನತ್ತ ಮುಖ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನೂ ಅನೌನ್ಸ್ ಆಗಿತ್ತು. ಶಾಂತನು ಬಗ್ಚೀ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸ್ಪೈ ಥ್ರಿಲ್ಲರ್​ನಲ್ಲಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ. ಅದರ ಬೆನ್ನಲ್ಲೇ ರಶ್ಮಿಕಾ ಗುಡ್‍ಬೈ ಚಿತ್ರದಲ್ಲಿನಟಿಸುತ್ತಿದ್ದಾರೆ.

ಗುಡ್‍ಬೈ, ಕೌಟುಂಬಿಕ ಮೌಲ್ಯಗಳ ಸುತ್ತುವ ಕಥಾವಸ್ತುವಾಗಿದ್ದು, ಭಾವನೆಗಳಿಗೆ ಹಾಗೂ ಮನರಂಜನೆಗೆ ಎರಡಕ್ಕೂ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಹೀಗಾಗಿತ್ತಲ್ವಾ ಎಂದುಕೊಳ್ಳುವಷ್ಟು ನೈಜತೆಯಿಂದ ಗುಡ್‍ಬೈ ಕಥೆ ಕೂಡಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತಾದರೆ ಗುಡ್‍ಬೈ ಮುಂದಿನ ವರ್ಷ ರಿಲೀಸ್ ಆಗಲಿದೆ.

ಇದನ್ನೂ ಓದಿ: BBK 8 Manju Pavagada: ಬಿಗ್​ ಬಾಸ್​ ಫಿನಾಲೆ ವೇದಿಕೆ ಮೇಲೆ ಅಪ್ಪ-ಅಮ್ಮನ ಹೆಸರು ಹೇಳದ ಬಗ್ಗೆ ಮಂಜು ಹೇಳಿದ್ದು ಹೀಗೆ..!

ಈಗಾಗಲೇ ಕನ್ನಡದ ಪೊಗರು ಚಿತ್ರದಲ್ಲಿ ಈ ವರ್ಷ ಸಕ್ಸಸ್ ಕಂಡಿರುವ ರಶ್ಮಿಕಾ ಕೂಡ ತಮಿಳಿನ ಸುಲ್ತಾನ್ ಚಿತ್ರದಲ್ಲಿ ಕಾರ್ತಿಕ್​ಗೆ ಜೊತೆಯಾಗಿದ್ದಾರೆ. ಇನ್ನು, ತೆಲುಗಿನ ಪುಷ್ಪಾ ಚಿತ್ರಗದಲ್ಲಿ ಅಲ್ಲು ಅರ್ಜುನ್ ಜತೆ ನಟಿಸುತ್ತಿದ್ದು, ಈ ಸಿನಿಮಾದ ಮೊದಲ ಹಾಡು ಇದೇ ತಿಂಗಳು 13ರಂದು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
Published by:Anitha E
First published: