Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ: ಪೂಜಾ ಹೆಗ್ಡೆಗೆ ನಕ್ಷತ್ರ ತೋರಿಸುತ್ತಿದ್ದಾರಾ ಲಿಲ್ಲಿ..?

Rashmika Mandanna: ನಟಿ ರಶ್ಮಿಕಾ ಸದ್ಯ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಕೈ ತುಂಬ ಸಿನಿಮಾಗಳು ಜತೆಗೆ ಫೋಟೋಶೂಟ್​... ಸಿನಿ ಜೀವನದ ಉತ್ತುಂಗದಲ್ಲಿರುವ ರಶ್ಮಿಕಾ ತೆಲುಗಿನಲ್ಲಿ ಬೇರೆ ನಟಿಯರಿಗೆ ಕಠಿಣ ಸ್ಪರ್ಧಾಳುವಾಗಿದ್ದಾರೆ. ಅದರಲ್ಲೂ ನಟಿ ಪೂಜಾ ಹೆಗ್ಡೆಗೆ ಸಿಕ್ಕಾಪಟ್ಟೆ ಸ್ಪರ್ಧೆ ಕೊಡುತ್ತಿದ್ದಾರಂತೆ.

Anitha E | news18
Updated:August 2, 2019, 2:54 PM IST
Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ: ಪೂಜಾ ಹೆಗ್ಡೆಗೆ ನಕ್ಷತ್ರ ತೋರಿಸುತ್ತಿದ್ದಾರಾ ಲಿಲ್ಲಿ..?
ಸಿಕ್ಕಾಪಟ್ಟೆ ಹಾಟ್​ ಆದ ರಶ್ಮಿಕಾ ಮಂದಣ್ಣ
  • News18
  • Last Updated: August 2, 2019, 2:54 PM IST
  • Share this:
ಸ್ಯಾಂಡಲ್​ವುಡ್​ನ 'ಕಿರಿಕ್​ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೊಡಗಿನ ಬ್ಯೂಟಿ ರಶ್ಮಿಕಾ ಈಗ ಟಾಲಿವುಡ್​ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಜತೆಗೆ ತಮಿಳಿನಲ್ಲೂ ಅವರು ಖಾತೆ ತೆರೆದಿದ್ದು, ನಟ ಕಾರ್ತಿ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ನಟಿ ರಶ್ಮಿಕಾ ಸದ್ಯ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಕೈ ತುಂಬ ಸಿನಿಮಾಗಳು ಜತೆಗೆ ಫೋಟೋಶೂಟ್​... ಸಿನಿ ಜೀವನದ ಉತ್ತುಂಗದಲ್ಲಿರುವ ರಶ್ಮಿಕಾ ತೆಲುಗಿನಲ್ಲಿ ಬೇರೆ ನಟಿಯರಿಗೆ ಕಠಿಣ ಸ್ಪರ್ಧಾಳುವಾಗಿದ್ದಾರೆ. ಅದರಲ್ಲೂ ನಟಿ ಪೂಜಾ ಹೆಗ್ಡೆಗೆ ಸಿಕ್ಕಾಪಟ್ಟೆ ಸ್ಪರ್ಧೆ ಕೊಡುತ್ತಿದ್ದಾರಂತೆ.

Rashmika mandanna vijay devarakonda
ವಿಜಯ್​ ದೇವರಕೊಂಡ-ರಶ್ಮಿಕಾ


ಕರಾವಳಿ ಬೆಡಗಿ ಪೂಜಾ ಸಹ ತೆಲುಗಿನಲ್ಲಿ ಸ್ಟಾರ್​ ನಟರೊಂದಿಗೆ ಕೆಲಸ ಮಾಡುತ್ತಿದ್ದು, ಬ್ಯುಸಿಯಾಗಿದ್ದಾರೆ. ಪ್ರಭಾಸ್​ ಹಾಗೂ ಅಲ್ಲ ಅರ್ಜುನ್​ ಜತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಪೂಜಾಗೆ ರಶ್ಮಿಕಾ ನುಂಗಲಾರದ ತುತ್ತಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rashmika Mandanna: ದೇವರಕೊಂಡ ಜತೆ ನಟಿಸಬೇಡ ಎಂದಿದ್ದ ರಶ್ಮಿಕಾರ ಅಮ್ಮ ಡಿಯರ್ ಕಾಮ್ರೆಡ್​ ನೋಡಿ ಏನಂದ್ರು ಗೊತ್ತಾ..?

ಕಾರಣ ಇಷ್ಟೆ ರಶ್ಮಿಕಾ 'ಕಿರಿಕ್​ ಪಾರ್ಟ' ಹಾಗೂ 'ಚಲೋ' ಸಿನಿಮಾಗಳಲ್ಲಿ ಅಭಿನಯಿಸುವಾಗ ಹಸಿಬಿಸಿ ದೃಶ್ಯಗಳಿಗೆ ಓಕೆ ಹೇಳಿರಲಿಲ್ಲ. 'ಗೀತ ಗೋವಿಂದಂ'ನಲ್ಲಿ ಮೊದಲ ಬಾರಿಗೆ ವಿಜಯ್​ ದೇವರಕೊಂಡ ಜತೆ ಲಿಪ್​ಲಾಕ್​ ದೃಶ್ಯದಲ್ಲಿ ಅಭಿನಯಿಸುವ ಮೂಲಕ ವಿವಾದಕ್ಕೀಡಾಗಿದ್ದರು.

ಇದನ್ನೂ ಓದಿ: Pawan Kalyan: ಪವನ್​ ಕಲ್ಯಾಣ್​ ಜತೆ ಸಂಬಂಧ ಇದೆ ಎಂದು ಟ್ವೀಟ್​ ಮಾಡಿದ್ದ ನಟಿಯ ಪೋಟೋ ವೈರಲ್​..!ಇದಾದ ನಂತರ ಮತ್ತೆ 'ಡಿಯರ್​ ಕಾಮ್ರೆಡ್'ನಲ್ಲಿ ರಶ್ಮಿಕಾ ವಿಜಯ್​ ದೇವರಕೊಂಡ ಜತೆ ರೋಮ್ಯಾಂಟಿಕ್​ ದೃಶ್ಯಗಳಿಗೆ ಓಕೆ ಎಂದರು. ಇದರಿಂದಾಗಿ ಈಗ ನಿರ್ದೇಶಕ ಹಾಗೂ ನಿರ್ಮಾಕರು ತಮ್ಮ ಸಿನಿಮಾಗಳಿಗೆ ಗ್ಲಾಮರಸ್​ ಪಾತ್ರಗಳಿಗೆ ಪೂಜಾಗಿಂತ ರಶ್ಮಿಕಾ ಉತ್ತಮ ಆಯ್ಕೆ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.

Rashmika Mandanna
ರಶ್ಮಿಕಾ ಮಂದಣ್ಣ


ಇದಕ್ಕೆಲ್ಲ ಕಾರಣ ರಶ್ಮಿಕಾ ಮೈ ಚಳಿ ಬಿಟ್ಟು ಅಭಿನಯಿಸೋಕೆ ಮುಂದಾಗಿರುವುದು ಎನ್ನುತ್ತಿದ್ದಾರೆ ಟಾಲಿವುಡ್​ ಮಂದಿ. ಅಲ್ಲದೆ ಇತ್ತೀಚೆಗೆ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್​ ಹಾಗೂ ಹಾಟ್​ ಫೋಟೋಶೂಟ್​ಗೂ ಪೋಸ್​ ಕೊಟ್ಟಿದ್ದು ಸಾಕಷ್ಟು ಟಿಕೆಗೆ ಗುರಿಯಾಗಿತ್ತು. ಪೂಜಾ ಹೆಗ್ಡೆ ಅಭಿನಯದಲ್ಲಿ ಕೊಂಡ ಹಿಂದಿರುವುದೂ ರಶ್ಮಿಕಾಗೆ ಪ್ಲಸ್​ ಪಾಯಿಂಟ್​ ಆಗಿದೆ.

HBD Tapsi: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ತಾಪ್ಸಿ ಪನ್ನು ಹಾಟ್​ ಚಿತ್ರಗಳು..!


 
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading