Congratulations: ಕೊನೆಗೂ `ವಧು’ವಾದ ರಶ್ಮಿಕಾ ಮಂದಣ್ಣ.. ಮೊದಲ ಬಾರಿಗೆ ತನ್ನ `ಹನಿ’ ಬಗ್ಗೆ ಹೇಳಿದ ನಟಿ!

ಲ್ಲಾ ಭಾಷೆಗಳಲ್ಲೂ ರಶ್ಮಿಕಾ ಹವಾ ಇದೆ.ಈಕೆ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಪೋಸ್ಟ್​ ಮಾಡಿದರೆ ಎಲ್ಲರ ಕಣ್ಣು ಆಕೆ ಮೇಲೆ ಇರುತ್ತೆ. ಇದೀಗ ಮೊದಲ ಬಾರಿಗೆ ‘ವಧು’ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ತನ್ನ ‘ಹನಿ’(Honey) ಬಗ್ಗೆ ಹೇಳಿಕೊಂಡಿದ್ದಾರಂತೆ. ಯಾರು ಅಂತೀರಾ..? ಮುಂದೆ ನೋಡಿ...

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಕರುನಾಡ ಕ್ರಶ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ರೇಂಜ್ (Range)​ ಈಗ ಬದಲಾಗಿದೆ. ಕಿರಿಕ್​ ಪಾರ್ಟಿ (Kirik Party) ಸಿನಿಮಾ ಮೂಲಕ ತೆರೆಗೆ ಬಂದ ನಟಿ ರಶ್ಮಿಕಾ, ಈಗ ಭಾರತದ ಟಾಪ್​ ಹೀರೋಯಿನ್ (Top Heroin)​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಹೆಸರಾಂತ ನಟಿಯರಿಗೆ ಸೆಡ್ಡು ಹೊಡೆದು, ತಮ್ಮ ಸ್ಥಾನವನ್ನು ಬಿಗಿ ಪಡಿಸಿಕೊಂಡಿದ್ದಾರೆ. ಕರುನಾಡ ಕ್ರಶ್​ ಆಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್ (National Crush)​. ಈಕೆ ಸಿನಿಮಾ ಮಾಡಲು ನಿರ್ಮಾಪಕರು ತಾ ಮುಂದೆ.. ನಾ ಮುಂದೆ ಎಂದು ಕ್ಯೂನಲ್ಲಿ ಕಾಯುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ಅವರ ಲಕ್ (Luck)​ ಬದಲಾಗಿದೆ. ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ  ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೆಚ್ಚಾಗಿ ಹೀರೋಗಳಿಗೆ ಅಭಿಮಾನಿಗಳು ಹೆಚ್ಚು ಇರುತ್ತಾರೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳ ಬಳಗವೂ ದೊಡ್ಡದಿದೆ. ಈಕೆ ಕನ್ನಡ(Kannada)ದಿಂದ ಪರ ಭಾಷೆಗೆ ತೆರಳಿದ ಕೂಡಲೇ ಇವರ ಅದೃಷ್ಟ ಬದಲಾಯಿತು. ಎಲ್ಲಾ ಭಾಷೆಗಳಲ್ಲೂ ರಶ್ಮಿಕಾ ಹವಾ ಇದೆ. ಈಕೆ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಪೋಸ್ಟ್​ ಮಾಡಿದರೆ ಎಲ್ಲರ ಕಣ್ಣು ಆಕೆ ಮೇಲೆ ಇರುತ್ತೆ. ಇದೀಗ ಮೊದಲ ಬಾರಿಗೆ ‘ವಧು’ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ತನ್ನ ‘ಹನಿ’(Honey) ಬಗ್ಗೆ ಹೇಳಿಕೊಂಡಿದ್ದಾರಂತೆ. ಯಾರು ಅಂತೀರಾ..? ಮುಂದೆ ನೋಡಿ...

ಜೇನುತುಪ್ಪದ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ!

ಹೌದು, ಸದಾ ಒಂದಲ್ಲ ಒಂದು ವಿಡಿಯೋ ಅಥವಾ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡುತ್ತಿರುತ್ತಾರೆ. ಅವರು ಏನೇ ಶೇರ್ ಮಾಡಿದರು ನೆಟ್ಟಿಗರು ಕಣ್ಣು ಆಕೆ ಮೇಲೆ ಇರುತ್ತದೆ. ಇದೀಗ ರಶ್ಮಿಕಾ ಜೇನುತುಪ್ಪದ ಜಾಹೀರಾತಿನಿಲ್ಲಿ ನಟಿಸಿದ್ದಾರೆ. ವಧು ಅವತಾರದಲ್ಲಿ  ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ತಮಗಿಷ್ಟವಾದ ಜೇನುತುಪ್ಪ ಯಾವುದು ಎಂದು ಎಲ್ಲರಿಗೂ ಹೇಳಿದ್ದಾರೆ. ಡಾಬರ್​ ಕಂಪನಿಯ ಜೇನುತುಪ್ಪ ಜಾಹೀರಾತಿನಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಜಾಹೀರಾತಿನ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಧು ಅವತಾರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕಂಡ ಅವರ ಅಭಿಮಾನಿಗಳು ದಿಲ್​ಖುಷ್​ ಆಗಿದ್ದಾರೆ.



ಇದನ್ನು ಓದಿ: ಯಾರೇ ಬರಲಿ.. ಯಾರೇ ಇರಲಿ.. ನಿಮ್ಮ ರೇಂಜಿಗೆ ಯಾರಿಲ್ಲ..ಟಿವಿಗೆ ಹೂವಿನ ಹಾರ ಹಾಕಿ, ಆರತಿ ಎತ್ತಿ `ಯುವರತ್ನ’ನಿಗೆ ಸ್ವಾಗತ!

‘ಪುಷ್ಪ 2 ’ಗೆ 3 ಕೋಟಿ ಕೇಳಿದ್ರಂತೆ ರಶ್ಮಿಕಾ ಮಂದಣ್ಣ!

ಹೌದು,  'ಪುಷ್ಪ' ಮೊದಲ ಭಾಗಕ್ಕೆ ಪಡೆದ ಸಂಭಾವನೆಗಿಂತಲೂ 50% ಹೆಚ್ಚು ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಕೇಳುತ್ತಿದ್ದಾರೆ.'ಪುಷ್ಪ' ಸಿನಿಮಾದ ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಪಡೆದಿದ್ದರಂತೆ, ಆದರೆ ಎರಡನೇ ಭಾಗಕ್ಕೆ 3 ಕೋಟಿ ಸಂಭಾವನೆಗೆ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳಲು 'ಪುಷ್ಪ' ಗೆಲುವು ಮಾತ್ರವೇ ಅಲ್ಲ ಇನ್ನೂ ಬೇರೆ ಬೇರೆ ಅಂಶಗಳ ಬಗ್ಗೆ ಹೇಳಿದ್ದಾರಂತೆ. ಇದನ್ನು ಕೇಳಿ ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಇದನ್ನು ಓದಿ: ಇವ್ರೇ ನೋಡಿ.. ಬಿಗ್​ಬಾಸ್​ ತಮಿಳು ಸೀಸನ್​ 5 ವಿನ್ನರ್​.. ವೀಕ್ಷಕರು ಗೆಸ್ಸ್​ ಮಾಡಿದ್ದು ಕರೆಕ್ಟ್​!

ರಶ್ಮಿಕಾ ನಟಿಸಿದ ಚಿತ್ರಗಳೆಲ್ಲ ಸೂಪರ್​​ ಹಿಟ್!

ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ಹಲವು ಹಿಟ್ ನೀಡಿದ ನಟಿ. ಈಕೆ ನಟಿಸಿದ ಎಲ್ಲ ಸಿನಿಮಾಗಳೂ ಸೂಪರ್​ ಹಿಟ್ ಆಗಿದೆ ಎನ್ನಬಹುದು. ತೆಲುಗಿನ 'ಗೀತ ಗೋವಿಂದಂ', 'ಸರಿಲೇಲು ನೀಕೆವ್ವರು', 'ಭೀಷ್ಮ', ತಮಿಳಿನ 'ಸುಲ್ತಾನ್' ಸಾಧಾರಣ ಹಿಟ್ ಆದ 'ಡಿಯರ್ ಕಾಮ್ರೆಡ್' ಇದೀಗ 'ಪುಷ್ಪ' ರಶ್ಮಿಕಾ ನಟನೆಯ ಈ ತೆಲುಗು ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ಕನ್ನಡದಲ್ಲಿ ಐದು ಸಿನಿಮಾಗಳಲ್ಲಿ ನಟಿಸಿದ್ದು ಅವುಗಳು ಸಹ ಹಿಟ್ ಆಗಿವೆ. ಒಬ್ಬ ನಟಿಯಾಗಿ ಏನು ಮಾಡಬೇಕು ಅದನ್ನು ರಶ್ಮಿಕಾ ಮಂದಣ್ಣ ಮಾಡಿದ್ದಾರೆ.
Published by:Vasudeva M
First published: