ಸಿನಿಮಾ ನಟ-ನಟಿಯರು ಏನೇ ಮಾಡಿದರೂ ಅದು ಬ್ರೇಕಿಂಗ್ ನ್ಯೂಸ್(Breaking News). ಹೌದು, ಸಿನಿಮಾ ರಂಗ ಅಂದರೆ ಹಾಗೇ. ಅಲ್ಲಿ ಸಣ್ಣ ವಿಷಯವೂ ದೊಡ್ಡದಾಗಿ ಕಾಣುತ್ತೆ. ಒಂದು ಚಿಕ್ಕ ವಿಷಯ ಹೊರ ಬಂದರೂ, ಅದಕ್ಕೆ ರೆಕ್ಕೆ ಪುಕ್ಕ ಸೇರಿಕೊಳ್ಳುತ್ತೆ. ಅದಕ್ಕೆ ಸಿನಿಮಾ ನಟ-ನಟಿಯರು ಕೂಡ ಗಾಸಿಪ್(Gossip) ಸಹವಾಸ ಬೇಡ ಅಂತಾರೆ. ಸಿನಿಮಾ ನಟ-ನಟಿಯರ ವೈಯಕ್ತಿಕ ಬದುಕಿ ಬಗ್ಗೆಯೂ ಫ್ಯಾನ್ಸ್ಗಳಿಗೆ ತಿಳಿದಿರುತ್ತೆ. ಈ ಹಿಂದೆ ಸಮಂತಾ(Samantha) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸರ್ ನೇಮ್(Surname) ಅಕ್ಕಿನೇನಿ ಎಂಬುದನ್ನು ತೆಗೆದು ಹಾಕಿದ್ದರು. ಇದಾದ ನಂತರ ಏನಾಯ್ತು ಎಂಬುಂದು ಎಲ್ಲರಿಗೂ ತಿಳಿದಿದೆ. ಸರ್ ನೇಮ್ ತೆಗೆದ ಕೂಡಲೇ ಅವರ ಫ್ಯಾನ್ಸ್(Fans)ಗೆ ತಿಳಿದಿತ್ತು. ನಾಗಚೈತನ್ಯ(Naga Chaitanya) ಹಾಗೂ ಸಮಂತಾ(Samantha) ನಡುವೆ ಏನೋ ಆಗಿದೆ ಅಂತ ಗೊತ್ತಾಗಿತ್ತು. ಇದಾದ ಬಳಿಕ ಇತ್ತೀಚೆಗೆ ಪ್ರಿಯಾಂಕ ಚೋಪ್ರಾ(Priyanka Chopra) ಜೋನಸ್ ಎಂಬ ಸರ್ ನೇಮ್ ತೆಗೆಯುತ್ತಿದ್ದಂತೆ ಇವರಿಬ್ಬರು ಡಿವೋರ್ಸ್ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿ ಸುಳ್ಳು ಎಂಬುಂದು ಗೊತ್ತಾಗಿತ್ತು. ಇದೀಗ ಮತ್ತೊಬ್ಬರ ಸರ್ ನೇಮ್ ಸಖತ್ ವೈರಲ್ ಆಗುತ್ತಿದೆ. ಇಷ್ಟು ದಿನ ಕೇಳಿರದ ಈ ನಟಿಯ ಸರ್ ನೇಮ್ ಕಂಡು ಅವರ ಅಭಿಮಾನಿಗಳು ಶಾಕ್(Shockಗೆ ಒಳಗಾಗಿದ್ದರು. ಅದು ಬೇರೆ ಯಾರು ಅಲ್ಲ ಸೌತ್ ಇಂಡಿಯನ್ ಕ್ರಶ್ ರಶ್ಮಿಕಾ(Rashmika Mandanna) ಮಂದಣ್ಣ..
ರಶ್ಮಿಕಾ ಕೊನೆಯ ಹೆಸರು ಕಂಡು ಫ್ಯಾನ್ಸ್ ಶಾಕ್!
ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಬರೀ ಸಿನಿಮಾದಲ್ಲಿ ಅಷ್ಟೇ ಅಲ್ಲದೇ, ಅವರ ವೈಯಕ್ತಿಕ ಜೀವನದಿಂದಲೂ ಈ ನಟಿ ಭಾರಿ ಸುದ್ದಿಯಾಗಿದ್ದರು. ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇವರ ಪಾಸ್ಪೋರ್ಟ್ನಲ್ಲಿದ್ದ ಸರ್ ನೇಮ್ ಕಂಡು ಫ್ಯಾನ್ಸ್ ಶಾಕ್ ಆಗಿದ್ದರು. ಸದ್ಯ ರಶ್ಮಿಕಾ ಯುಎಸ್ಗೆ ತೆರಳಿದ್ದಾರೆ. ಅದಕ್ಕೂ ಮುನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾಸ್ಪೋರ್ಟ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಪಾಸ್ಪೋರ್ಟ್ನಲ್ಲಿ ರಶ್ಮಿಕಾ ಮಂದಣ್ಣ ಅವರ ಕೊನೆಯ ಹೆಸರು ‘Mundachadira’ ಎಂದು ಉಲ್ಲೇಖವಾಗಿತ್ತು. ಇದು ಅವರ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.
ಇದನ್ನು ಓದಿ : ಕಿರಿಕ್ ಬ್ಯೂಟಿ ಹೆಸರಲ್ಲಿ 'ದಿ ರಶ್ಮಿಕಾ ಮೀಲ್' ಪರಿಚಯಿಸಿದ ಮ್ಯಾಕ್ ಡೊನಾಲ್ಡ್ಸ್
ಅದು ಅವರ ತಂದೆಯ ಹೆಸರಂತೆ..!
ಈ ಫೋಟೋ ಕಂಡ ಅಭಿಮಾನಿಗಳು ಆ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಯಾರಿರಬಹುದು ಎಂಬ ಅವರ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಅದು ರಶ್ಮಿಕಾ ಮಂದಣ್ಣ ಅವರ ಅಪ್ಪನ ಹೆಸರು ಎಂದು ತಿಳಿದುಬಂದಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ತಂದೆಯ ಹೆಸರು ಮದನ್ ಮಂದಣ್ಣ ಮುಂಡಚಾಡಿರ. ಹೀಗಾಗಿ ಇವರ ಕೊನೆಯ ಹೆಸರನ್ನು ರಶ್ಮಿಕಾ ಅವರ ಪಾಸ್ಪೋರ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ತಿಳಿದುಕೊಂಡ ಬಳಿಕ ಫ್ಯಾನ್ಸ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
ಇದನ್ನು ಓದಿ : ಕೋಟಿ ಕೋಟಿ ಒಡತಿ ಕೊಡಗಿನ ಬೆಡಗಿ: ಅಬ್ಬಾ..! ರಶ್ಮಿಕಾ ಮಂದಣ್ಣ ಬಳಿ ಇದೆ ಕಾಸ್ಟ್ಲಿ ಕಾರು, ಅರ'ಮನೆ’!
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಯುಎಸ್ ಟ್ರಿಪ್?
ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿ, ಸೈ ಎನಿಸಿಕೊಂಡಿದ್ದರು. ಬೆಸ್ಟ್ ಜೋಡಿ ಅಂತಾನೂ ಫ್ಯಾನ್ಸ್ ಒಪ್ಪಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ನಡುವೆ ಹಲವಾರು ಗಾಸಿಪ್ಗಳು ಕೂಡ ಕೇಳಿಬಂದಿತ್ತು. ಇದೀಗ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಯುಸ್ಗೆ ತೆರಳಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಯುಎಸ್ಗೆ ತೆರಳಿ ಈ ಜೋಡಿ ಒಟ್ಟಿಗೆ ಟೈಂಪಾಸ್ ಮಾಡುತ್ತಿದ್ದೆ ಅಂತ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ