ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ್ ಫುಲ್ ಬ್ಯುಸಿ ನಟಿಯಾಗಿದ್ದಾರೆ. ಟಾಲಿವುಡ್, (Tollywood) ಕಾಲಿವುಡ್ ಹಾಗೂ ಬಾಲಿವುಡ್ಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ (Back to Back Movie) ನಟಿಸುತ್ತಿದ್ದಾರೆ. ಸದ್ಯ ತಮಿಳಿನ ದಳಪತಿ ವಿಜಯ್ ಜೊತೆಗಿನ ವಾರಿಸು (Varisu Movie) ಸಿನಿಮಾ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೂ ರಶ್ಮಿಕಾ ಭಾಗಿಯಾಗಿದ್ದರು. ರಶ್ಮಿಕಾ ಮಂದಣ್ಣ ಏನ್ ಮಾಡಿದ್ರು ಸುದ್ದಿಯಾಗುತ್ತೆ. ನಟಿ ಕಾರನಲ್ಲಿ ಹೋಗುವಾಗ ಬೈಕ್ನಲ್ಲಿ ಫಾಲೋ ಮಾಡಿಕೊಂಡು ಬಂದ ಅಭಿಮಾನಿಗಳಿಗೆ (Fans) ರಶ್ಮಿಕಾ ಏನ್ ಹೇಳಿದ್ರು ಎನ್ನುವ ವಿಡಿಯೋ (Video) ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಕಾರು ಫಾಲೋ ಮಾಡಿದ ಫ್ಯಾನ್ಸ್
ಡಿಸೆಂಬರ್ 24 ರಂದು 'ವಾರಿಸು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ನಂತರ ರಶ್ಮಿಕಾ ಕಾರಿನಲ್ಲಿ ಹೋಟೆಲ್ಗೆ ತೆರಳಿದ್ದರು. ಈ ವೇಳೆ ಕೆಲ ಅಭಿಮಾನಿಗಳು ರಶ್ಮಿಕಾ ಕಾರನ್ನು ಫಾಲೋ ಮಾಡಿದ್ದಾರೆ. ಫಾಲೋ ಮಾಡ್ತಿರೋ ವಿಡಿಯೋ ಕೂಡ ವೈರಲ್ ಆಗಿದೆ.
ಹೆಲ್ಮೆಟ್ ಹಾಕಿಕೊಳ್ಳಿ ಎಂದು ರಶ್ಮಿಕಾ ಸಲಹೆ
ಫಾಲೋ ಮಾಡುತ್ತಿರುವ ವಿಷಯ ತಿಳಿದ ರಶ್ಮಿಕಾ ಮಂದಣ್ಣ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಬಳಿಕ ಕಾರಿನ ಗ್ಲಾಸ್ ಇಳಿಸಿ ಅಭಿಮಾನಿಗೆ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಓಕೆ ನಾವು ಹೆಲ್ಮೆಟ್ ಧರಿಸುವುದಾಗಿ ಅಭಿಮಾನಿಗಳು ಹೇಳಿದ್ದಾರೆ. ಬಳಿಕ ಮತ್ತೆ ರಶ್ಮಿಕಾ ಈಗಾಗಲೇ ಹೆಲ್ಮೆಟ್ ಹಾಕಿಕೊಳ್ಳಿ ಎಂದು ಹೇಳಿ ಮುಂದಕ್ಕೆ ಹೋಗಿದ್ದಾರೆ. ರಶ್ಮಿಕಾ ಅಭಿಮಾನಿಗಳಿಗೆ ಸಲಹೆ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
I Still Wounder , How one can hate a Human being Like Our @iamRashmika 🥺🤌pic.twitter.com/i0kaeVB3Af
— × Roвιɴ Roвerт × 🕊️ (@PeaceBrwVJ) December 25, 2022
ರಶ್ಮಿಕಾ ಅವರ ಈ ವಿಡಿಯೋ ವೈರಲ್ ಆಗಿದ್ದು, ನಟಿಯ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳಿಗೆ ರಶ್ಮಿಕಾ ನೀಡಿದ ಸಲಹೆಗೆ ಇತರ ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ರಶ್ಮಿಕಾ ಮಂದಣ್ಣ ಜಾಗೃತಿ!
ಇತ್ತೀಚಿಕೆ ಜಾಗೃತಿ ಮೂಡಿಡುವ ವಿಡಿಯೋವನ್ನು ರಶ್ಮಿಕಾ ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಇಲ್ಲಿವರೆಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು. ಅವರಿಗೂ ಅದರ ಹಕ್ಕು ಇದೆ ಅಂತಲೇ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ತಮ್ಮ ಹೆಸರನ್ನ ಉಲ್ಟಾ ಬರೆದಿದ್ದರು.
ಇದನ್ನೂ ಓದಿ: Appu Tatoo: ಅಭಿಮಾನಿಗಳೇ ನನ್ನ ದೇವರು ಎಂದು ಟ್ಯಾಟೂ ಹಾಕಿಸಿಕೊಳ್ತೀನಿ, ಅಪ್ಪು ಹೇಳಿದ ಈ ಮಾತು ನೆರವೇರಲೇ ಇಲ್ಲ!
ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ಬಾಲಿವುಡ್ಗೂ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು, ರಣಬೀರ್ ಕಪೂರ್ ಅಭಿನಯದ ಅನಿಮಲ್ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ನಲ್ಲಿಕಾಣಿಸಿಕೊಳ್ಳಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರೊಂದಿಗೆ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿ ಬಳಗ ಹೊಂದಿದ್ದು, ದಿನದಿಂದ ದಿನಕ್ಕೆ ರಶ್ಮಿಕಾ ಕ್ರೇಜ್ ಕೂಡ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ