ಸಾಲು ಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ತಡಬಡಾಯಿಸಿದ ರಶ್ಮಿಕಾ: ನಟಿಗೆ ಮುಖ ಹೊಡೆದಂತೆ ಉತ್ತರ ಕೊಟ್ಟ ತಮಿಳು ನಟ

Rashmika Mandanna: ಈ ವೇಳೆ ತಿಮ್ಮಕ್ಕ ಕನ್ನಡದಲ್ಲೇ ಮಾತು ಆರಂಭಿಸಿದ್ದರು. ಆದರೆ ಅಲ್ಲಿ ನೆರೆದಿದ್ದವರಿಗೆ ವೃಕ್ಷಮಾತೆ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಿರಲಿಲ್ಲ. ಹೀಗಾಗಿ ನಿರೂಪಕಿ ಈ ಕಾರ್ಯಕ್ರಮದಲ್ಲಿ ಕನ್ನಡ ಗೊತ್ತಿರುವವರು ಯಾರಾದರು ಇದ್ದಾರೆಯೇ ಎಂದು ಕೇಳಿದರು. ಅಷ್ಟರಲ್ಲಾಗಲೇ ರಶ್ಮಿಕಾ ಮಂದಣ್ಣ ಸಹ ಕಣ್ಣಿಗೆ ಬಿದ್ದರು.

news18-kannada
Updated:October 27, 2019, 11:16 AM IST
ಸಾಲು ಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ತಡಬಡಾಯಿಸಿದ ರಶ್ಮಿಕಾ: ನಟಿಗೆ ಮುಖ ಹೊಡೆದಂತೆ ಉತ್ತರ ಕೊಟ್ಟ ತಮಿಳು ನಟ
ರಶ್ಮಿಕಾ ಮಂದಣ್ಣ
  • Share this:
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮಂಡ್ಯದಿಂದ ಹಿಡಿದು ಇಂಡಿಯಾದವರೆಗೂ ಕರುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದವರಲ್ಲಿ ಇವರೂ ಕೂಡ ಒಬ್ಬರು. ಆದರೆ ಇದೇ ಮಣ್ಣಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣನವರಿಗೆ ತಿಮ್ಮಕ್ಕನ ಬಗ್ಗೆ ತಿಳಿದಿಲ್ಲವೇ?

ಏಕೆಂದರೆ ಇತ್ತೀಚೆಗೆ ತಮಿಳುನಾಡಿನಲ್ಲಿ ತಿಮ್ಮಕ್ಕ ಅವರನ್ನು ಕಾರ್ಯಕ್ರಮವೊಂದಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಸಿನಿತಾರೆಯರು, ರಾಜಕಾರಣಿಗಳು, ನಿರ್ಮಾಪಕರು ಸೇರಿದಂತೆ ಖ್ಯಾತನಾಮರು ಭಾಗವಹಿಸಿದ್ದ ಈ ಕಾರ್ಯಕ್ರಮದ ವೇದಿಕೆಗೆ ಸಾಲು ಮರದ ತಿಮ್ಮಕ್ಕರನ್ನು ಕರೆಯಲಾಗಿತ್ತು.

ಸಾಲು ಮರದ ತಿಮ್ಮಕ್ಕ


ಈ ವೇಳೆ ತಿಮ್ಮಕ್ಕ ಕನ್ನಡದಲ್ಲೇ ಮಾತು ಆರಂಭಿಸಿದ್ದರು. ಆದರೆ ಅಲ್ಲಿ ನೆರೆದಿದ್ದವರಿಗೆ ವೃಕ್ಷಮಾತೆ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಿರಲಿಲ್ಲ. ಹೀಗಾಗಿ ನಿರೂಪಕಿ ಈ ಕಾರ್ಯಕ್ರಮದಲ್ಲಿ ಕನ್ನಡ ಗೊತ್ತಿರುವವರು ಯಾರಾದರು ಇದ್ದಾರೆಯೇ ಎಂದು ಕೇಳಿದರು. ಅಷ್ಟರಲ್ಲಾಗಲೇ ರಶ್ಮಿಕಾ ಮಂದಣ್ಣ ಸಹ ಕಣ್ಣಿಗೆ ಬಿದ್ದರು. ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ದಯವಿಟ್ಟು ವೇದಿಕೆಗೆ ಬಂದು ತಿಮ್ಮಕ್ಕನವರ ಮಾತುಗಳು ಅನುವಾದ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.

ಅದರಂತೆ ವೇದಿಕೆ ಏರಿದ ರಶ್ಮಿಕಾ ತಿಮ್ಮಕ್ಕನವರ ಮಾತುಗಳನ್ನು ಒಂದೆರೆಡು ಮಾತುಗಳಲ್ಲೇ ಹೇಳಿ ಮುಗಿಸಿಬಿಟ್ಟರು. ಅಲ್ಲದೆ ವೃಕ್ಷಮಾತೆ ಯಾರೆಂಬುದನ್ನು ಜನರ ಮುಂದಿಡಲು ತಡಬಡಿಸಿದರು. ಇದನ್ನು ಗಮನಿಸಿದ ತಮಿಳು ನಟ ವಿವೇಕ್ ಏಕಾಏಕಿ ಮಾತು ಆರಂಭಿಸಿದ್ದಾರೆ. ಸಾಲು ಮರದ ತಿಮ್ಮಕ್ಕ ಯಾರೆಂಬುದನ್ನು ತಮಿಳಿನಲ್ಲೇ ನೆರೆದಿದ್ದವರ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಲಿಪ್​ಲಾಕ್: ಕನ್ನಡ ಚಿತ್ರನಟಿಯ ಫೋಟೋ ವೈರಲ್

ಸಾಲು ಮರದ ತಿಮ್ಮಕ್ಕನವರಿಗೆ ಮಕ್ಕಳಿರುವುದಿಲ್ಲ. ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಪತಿಯೊಂದಿಗೆ ರಸ್ತೆ ಬದಿಗಳಲ್ಲಿ ಸಸಿ ನೆಡುತ್ತಾರೆ. ಹೀಗೆ ಕಿಲೋ ಮೀಟರ್ ಗಟ್ಟಲೇ ಮರಳನ್ನು ಬೆಳೆಸುತ್ತಾರೆ. ಇದುವರೆಗೂ ಇವರು 385 ಆಲದ ಮರಗಳನ್ನು ಬೆಳೆಸಿದ್ದಾರೆ. ಸಾಲು ಮರದ ತಿಮ್ಮಕ್ಕನವರ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ.ಇದನ್ನೂ ಓದಿ: Tanya Hope: ಹೊಸ ಅವತಾರದಲ್ಲಿ ಯಜಮಾನನ ಬಸಣ್ಣಿ..!

ಬಿಬಿಸಿ ಪ್ರಕಟಿಸಿದ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಸಾಲು ಮರದ ತಿಮ್ಮಕ್ಕ ಕೂಡ ಒಬ್ಬರು. ಅನೇಕ ಯುವಕರಿಗೆ ಇವರೇ ಸ್ಪೂರ್ತಿಯಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಸಾಲು ಮರದ ತಿಮ್ಮಕ್ಕ ಫೇಮಸ್​. ಅಮೆರಿಕದಲ್ಲಿ ಒಂದು ಫೌಂಡೇಷನ್​ಗೆ ತಿಮ್ಮಕ್ಕನವರ ಹೆಸರು ಇಡಲಾಗಿದೆ. ಇವರು ನಮ್ಮ ದೇಶದ ಹೆಮ್ಮೆ ಎಂದರು. ನಟ ವಿವೇಕ್ ಹೇಳುತ್ತಿದ್ದ ಪ್ರತಿಯೊಂದು ಮಾತಿಗೂ ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಯುವಕರಿಂದ ಹರ್ಷೋದ್ಘಾರ ಮೊಳಗಿತು.

ಇದೆಲ್ಲವನ್ನು ನೋಡುತ್ತಾ ರಶ್ಮಿಕಾ ಮಂದಣ್ಣ ನಿಂತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ತಮಿಳು ನಟನಿಗೆ ತಿಳಿದಿರುವಷ್ಟು ವಿಷಯ ನಿಜವಾಗಲೂ ನಮ್ಮ ರಾಜ್ಯದ ಮಹಾಸಾಧಕಿಯ ಬಗ್ಗೆ ರಶ್ಮಿಕಾ ಅವರಿಗೆ ತಿಳಿದಿಲ್ಲವೇ? ಅಥವಾ ಅಸಡ್ಡೆಯೇ? ಎಂಬ ಪ್ರಶ್ನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೊಡಗಿನ ಬೆಡಗಿಯ ಮುಂದಿಡಲಾಗುತ್ತಿದೆ.

Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್
First published: October 27, 2019, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading