• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Rashmika Mandanna: ಆಲಿಯಾ ಭಟ್-ರಶ್ಮಿಕಾ ಡ್ಯಾನ್ಸ್! ನಾಟು ನಾಟು ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಚೆಲುವೆಯರು

Rashmika Mandanna: ಆಲಿಯಾ ಭಟ್-ರಶ್ಮಿಕಾ ಡ್ಯಾನ್ಸ್! ನಾಟು ನಾಟು ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಚೆಲುವೆಯರು

ಎನ್​ಎಂಎಸಿಸಿ ವೇದಿಕೆಯಲ್ಲಿ ಆಲಿಯಾ-ರಶ್ಮಿಕಾ ಡ್ಯಾನ್ಸ್

ಎನ್​ಎಂಎಸಿಸಿ ವೇದಿಕೆಯಲ್ಲಿ ಆಲಿಯಾ-ರಶ್ಮಿಕಾ ಡ್ಯಾನ್ಸ್

ಎನ್​ಎಂಎಸಿಸಿ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ಸಲ ಒಂದು ವಿಶೇಷತೆ ಇತ್ತು. ಸೌತ್ ನಟಿ ರಶ್ಮಿಕಾ ಮಂದಣ್ಣ ಅವರು ಕೂಡಾ ಆಲಿಯಾ ಭಟ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.

 • News18 Kannada
 • 2-MIN READ
 • Last Updated :
 • Mumbai, India
 • Share this:

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನೆ ಅದ್ಧೂರಿಯಾಗಿ ನಡೆದಿದೆ. ಇದಾದ ನಂತರ ಎರಡನೇ ದಿನದಂದು NMACC ಗಾಲಾದಲ್ಲಿ ಬಾಲಿವುಡ್​ನ (Bollywood) ಟಾಪ್ ಸೆಲೆಬ್ರಿಟಿಗಳು (Celebrities) ಭಾಗಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟರು, ನಟಿಯರು, ಸ್ಟಾರ್​ ಕಿಡ್​ಗಳು (Star Kids) ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇವೆಂಟ್​ಗೆ ತಾರಾ ಮೆರುಗನ್ನು ತುಂಬಿದರು. ಇದರಲ್ಲಿ ಸ್ಯಾಂಡಲ್​ವುಡ್ ಚೆಲುವೆ ರಶ್ಮಿಕಾ ಮಂದಣ್ಣ  (Rashmika Mandanna) ಅವರೂ ಭಾಗಿಯಾಗಿದ್ದರು. ಸೌತ್​ನಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ಕೆಲವೇ ಕೆಲವರು ನಟಿಯರು ಮಾತ್ರ. ತಲೈವಾ ರಜನೀಕಾಂತ್ (Rajinikanth) ಅವರು ಪುತ್ರಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇವರನ್ನು ಹೊರತುಪಡಿಸಿ ಸೌತ್​ನಿಂದ ನಟಿ ಹನ್ಸಿಕಾ ಮೊಟ್ವಾನಿ ಕೂಡಾ ಭಾಗಿಯಾಗಿದ್ದರು. ಅವರನ್ನು ಹೊರತುಪಡಿಸಿ ಕಾರ್ಯಕ್ರಮದಲ್ಲಿ ಭಾಗಿಯಾದ ಸೌತ್ ನಟಿ ಎಂದರೆ ರಶ್ಮಿಕಾ ಮಂದಣ್ಣ ಮಾತ್ರ.


ಎನ್​ಎಂಎಸಿಸಿಯಲ್ಲಿ ಕಿರಿಕ್ ಚೆಲುವೆ ರಶ್ಮಿಕಾ


ನಟಿ ರಶ್ಮಿಕಾ ಮಂದಣ್ಣ ಅವರು ಅಂಬಾನಿ ಕುಟುಂಬ ಆಯೋಜಿಸಿದ ದೊಡ್ಡ ಇವೆಂಟ್ ಎನ್​ಎಂಎಸಿಸಿಯಲ್ಲಿ ಭಾಗಿಯಾಗಿದ್ದಾರೆ. ಉದ್ಘಾಟನೆ ನಂತರ ಎರಡನೇ ದಿನ ರಶ್ಮಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಕ್ಕೆ ರಶ್ಮಿಕಾ ಯುನಿಕ್ ಆಗಿ ರೆಡಿಯಾಗಿ ಬಂದಿದ್ದರು.


ಎನ್​ಎಂಎಸಿಸಿ ವೇದಿಕೆಯಲ್ಲಿ ರಶ್ಮಿಕಾ-ಆಲಿಯಾ ಡ್ಯಾನ್ಸ್


ಆಲಿಯಾ ಭಟ್ ಅವರು ಆರ್​ಆರ್​ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದ ಆಲಿಯಾ ಭಟ್ ಸಿನಿಮಾ ಪ್ರಮೋಷನ್ ಸಂದರ್ಭ ಹಲವಾರು ಬಾರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಎನ್​ಎಂಎಸಿಸಿ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಮತ್ತೆ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.


Rashmika mandanna dances with alia bhatt to naatu naatu song at nmacc
ಎನ್​ಎಂಎಸಿಸಿ ವೇದಿಕೆಯಲ್ಲಿ ಆಲಿಯಾ-ರಶ್ಮಿಕಾ ಡ್ಯಾನ್ಸ್


ಆದರೆ ಈ ಸಲ ಒಂದು ವಿಶೇಷತೆ ಇತ್ತು. ಸೌತ್ ನಟಿ ರಶ್ಮಿಕಾ ಮಂದಣ್ಣ ಅವರು ಕೂಡಾ ಆಲಿಯಾ ಭಟ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಖುಷಿ ಖುಷಿಯಾಗಿ ಗುಂಪಿನೊಂದಿಗೆ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಐಪಿಎಲ್​ 2023 ಉದ್ಘಾಟನೆಯಲ್ಲಿ ಡ್ಯಾನ್ಸ್ ಮಾಡಿದ್ರು ರಶ್ಮಿಕಾ


ರಶ್ಮಿಕಾ ಲೀಲಾಜಾಲವಾಗಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸ್ವಲ್ಪ ಕಷ್ಟ ಎನಿಸುವ ಈ ಸ್ಟೆಪ್​ಗಳನ್ನು ನಟಿ ಈಝಿಯಾಗಿ ಇಮಿಟೇಟ್ ಮಾಡಿದ್ದಾರೆ. ಇದಕ್ಕೆ ಇನ್ನೊಂದು ಕಾರಣ ಕೆಲವೇ ದಿನ ಮೊದಲು ನಟಿ ಐಪಿಎಲ್ 2023ರ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಅಲ್ಲಿ ರಶ್ಮಿಕಾ ಮಾಡಿದ ಡ್ಯಾನ್ಸ್ ಕೂಡಾ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.
ಶಾರುಖ್, ರಣವೀರ್, ಪ್ರಿಯಾಂಕಾ ಚೋಪ್ರಾ, ವರುಣ್ ಧವನ್ ಡ್ಯಾನ್ಸ್


ಎನ್​ಎಂಎಸಿಸಿ ವೇದಿಕೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಡ್ಯಾನ್ಸ್ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಗೂ ರಣವೀರ್ ಸಿಂಗ್ ಅವರು ಜೋಡಿಯಾಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದರು. ದಿಲ್ ದಡಕ್​ನೇ ದೋ ಸಿನಿಮಾದಲ್ಲಿ ಪ್ರಿಯಾಂಕಾ ಹಾಗೂ ರಣವೀರ್ ಸಿಂಗ್ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದರು.


Rashmika mandanna dances with alia bhatt to naatu naatu song at nmacc


ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಅವರ ಇತ್ತೀಚಿನ ಬ್ಲಾಕ್​ ಬಸ್ಟರ್ ಸಿನಿಮಾ ಪಠಾಣ್ ಹಾಡು ಜೂಮೆ ಜೋ ಪಠಾಣ್ ಹಾಡಿಗೆ ಡ್ಯಾನ್ಸ್ ಮಾಡಿದರು. ನಟ ವರುಣ್ ಧವನ್ ಹಾಗೂ ರಣವೀರ್ ಸಿಂಗ್ ಕಿಂಗ್ ಖಾನ್ ಜೊತೆ ಸ್ಟೆಪ್ ಹಾಕಿದರು.

top videos


  ರಶ್ಮಿಕಾ ಅವರು ಈಗ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್​ನ ಇವೆಂಟ್​ಗಳಿಗೆಲ್ಲ ರಶ್ಮಿಕಾ ಅವರಿಗೂ ಆಹ್ವಾನ ಸಿಗುತ್ತಿದೆ. ನಟಿ ಬಾಲಿವುಡ್​ನಲ್ಲಿ ಗುಡ್ ಬೈ ಹಾಗೂ ಮಿಷನ್ ಮಜ್ನು ಸಿನಿಮಾವನ್ನು ಮಾಡಿದ್ದಾರೆ.

  First published: