ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಐಪಿಎಲ್ 2023 (IPL 2023) ಉದ್ಘಾಟನಾ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ನಟಿ ಸುಂದರವಾಗಿ ಡ್ರೆಸ್ ಮಾಡಿ ಭರ್ಜರಿ ಡ್ಯಾನ್ಸ್ (Dance) ಮಾಡಿ ಪ್ರೇಕ್ಷಕರ ಮನಸು ಗೆದ್ದಿರುವುದು ಎಲ್ಲರಿಗೂ ಗೊತ್ತಿದೆ. ನಾಟು ನಾಟು (Naatu Naatu), ಸಾಮಿ ಸಾಮಿ, ಶ್ರೀವಲ್ಲಿ ಹಾಡುಗಳಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ರಶ್ಮಿಕಾ ಅವರ ನೃತ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ನಟಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರೂಮ್ ಒಳಗಡೆ ನಟಿ ರಫ್ ಆಗಿರುವ ಮಾಡಿರುವ ಡ್ಯಾನ್ಸ್ಗೆ 1.5 ಮಿಲಿಯನ್ ಲೈಕ್ಸ್ ಬಂದಿದೆ ಎಂದರೆ ನಂಬುತ್ತೀರಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.
ಐಪಿಎಲ್ನಲ್ಲಿ ಸಿನಿಮಾ ತಾರೆಗಳು ಡ್ಯಾನ್ಸ್ ಮಾಡುವುದು ಕಾಮನ್. ಆದರೆ ಈ ಬಾರಿ ತಮನ್ನಾ ಹಾಗೂ ರಶ್ಮಿಕಾ ಮಂದಣ್ಣ ಈ ಒಂದು ಇವೆಂಟ್ನ ರಂಗು ಹೆಚ್ಚಿಸಿದ್ದಾರೆ. ರಶ್ಮಿಕಾ ಫೇಮಸ್ ಹಾಡುಗಳಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಶೋ ಮುಗಿಸಿದ ನಂತರ ರಶ್ಮಿಕಾ ಶೇರ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಇದು ಐಪಿಎಲ್ನಲ್ಲಿ ರಶ್ಮಿಕಾ ಮಾಡಿದ ಡ್ಯಾನ್ಸ್ ಅಲ್ಲ.
ವಾರಿಸು ಸಿನಿಮಾದ ಹಾಡಿಗೆ ಭರ್ಜರಿ ಡ್ಯಾನ್ಸ್
ಐಪಿಎಲ್ ಡ್ಯಾನ್ಸ್ ಮುಗಿಸಿ ಬಂದ ರಶ್ಮಿಕಾ ವಿಡಿಯೋ ಶೇರ್ ಮಾಡಿದ್ದಾರೆ. ಐಪಿಎಲ್ 2023ರಲ್ಲಿ ಡ್ಯಾನ್ಸ್ ಶೋ ಮುಗಿಸಿ ಬಂದೆ. ಎಂಥ ಅದ್ಭುತ ಶೋ. ನಾನು ಇಂದು ಈ ಹಾಡಿಗೂ ಇಲ್ಲಿ ಡ್ಯಾನ್ಸ್ ಮಾಡಬೇಕೆಂದುಕೊಂಡಿದ್ದೆ. ಆದರೆ ಸಾಧ್ಯವಾಗಿಲ್ಲ. ಹಾಗಾಗಿ ಈ ಹಾಡನ್ನು ಕೇಳಿದ ಎಲ್ಲರಿಗಾಗಿ ಇಲ್ಲೊಂದು ಸ್ಮಾಲ್ ಗಿಫ್ಟ್ ಇದೆ ಎಂದು ನಟಿ ವಿಡಿಯೋ ಜೊತೆ ಕ್ಯಾಪ್ಶನ್ ಬರೆದಿದ್ದಾರೆ.
View this post on Instagram
ವೈರಲ್ ಆಯ್ತು ರಶ್ಮಿಕಾ ವಿಡಿಯೋ
ರಶ್ಮಿಕಾ ಮಂದಣ್ಣ ಅವರ ಈ ಡ್ಯಾ ನ್ಸ್ ವಿಡಿಯೋಗೆ ಮೂರು ಮಿಲಿಯನ್ ಲೈಕ್ಸ್ ಬಂದಿದೆ. 16 ಸಾವಿರಕ್ಕೂ ಹೆಚ್ಚು ಜನರು ರಶ್ಮಿಕಾ ಅವರ ಡ್ಯಾನ್ಸ್ ನೋಡಿ ಮೆಚ್ಚಿ ಕಮೆಂಟ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ನೋಡಿದ ನೆಟ್ಟಿಗರು ನಿಮ್ಮ ಎನರ್ಜಿ ಲೆವೆಲ್ಗೆ ಸಾಟಿ ಇಲ್ಲ. ಸುಂದರವಾಗಿ ಡ್ಯಾನ್ಸ್ ಮಾಡಿದ್ದೀರಿ ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಈ ಬಾರಿಯ ಐಪಿಎಲ್ 2023 ಆರಂಭ ಭರ್ಜರಿಯಾಗಿತ್ತು. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಮಂದಿರಾ ಬೇಡಿ ಅವರ ನಿರೂಪಣೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಅನೌನ್ಸ್ ಆದಾಗ ಸ್ಟೇಡಿಯಮ್ನಲ್ಲಿ ಭರ್ಜರಿ ರೆಸ್ಪಾನ್ಸ್ ಕೇಳಿ ಬಂದಿತ್ತು. ರಶ್ಮಿಕಾ ಮಂದಣ್ಣ ಅವರು ಫೇಮಸ್ ಸಾಂಗ್ಗಳಲ್ಲಿ ಹೆಜ್ಜೆ ಹಾಕಿದರು. ಇದರ ಮಧ್ಯೆ ಕಾಸ್ಟ್ಯೂಮ್ ಕೂಡಾ ಚೇಂಜ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾಟು ನಾಟು, ಸಾಮಿ ಸಾಮಿ, ಶ್ರೀವಲ್ಲಿ, ಊ ಅಂಟಾವಾ ಹಾಡಿಗೂ ಡ್ಯಾನ್ಸ್ ಮಾಡಿದ್ದಾರೆ. ನಟಿಯ ಈ ಡ್ಯಾನ್ಸ್ ಪ್ರದರ್ಶನ ಸುಂದರವಾಗಿ ಮೂಡಿ ಬಂದಿದ್ದು ಪ್ರೇಕ್ಷಕರ ಮನ ಸೆಳೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ