ಕಿರಿಕ್ ಪಾರ್ಟಿಯಾಗಿ(Kirik Party) ಕನ್ನಡ ಸಿನಿಮಾ(Sandalwood) ರಂಗಕ್ಕೆ ಎಂಟ್ರಿ ಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದ ಮುದ್ದು ಮುಖದ ಚೆಲುವೆ ರಶ್ಮಿಕಾ ಮಂದಣ್ಣ(Rashmika mandanna).. ರಾತ್ರೋರಾತ್ರಿ ಕರ್ನಾಟಕ ಕ್ರಶ್(Karnataka Crush) ಅಂತ ಅನಿಸಿಕೊಂಡ ಸಾನ್ವಿ, ಪಕ್ಕದ ತೆಲುಗು ಸಿನಿಮಾ(Tollywood) ರಂಗಕ್ಕೆ ಹಾರಿ ನ್ಯಾಶನಲ್ ಕ್ರಶ್(National crush) ಆದವರು.. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ ಬಳಿಕ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲ ಸೂಪರ್ ಹಿಟ್.. ಕನ್ನಡ ತೆಲುಗು, ತಮಿಳು ಬಾಲಿವುಡ್ ನಲ್ಲೂ ಹವಾ ತೋರಿಸ್ತಾ ಇರೋ ರಶ್ಮಿಕಾಗೆ ಲಕ್ಷಂತಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ರಶ್ಮಿಕಾ ಮಂದಣ್ಣಗೆ ಇರೋ ಹೆಸರನ್ನ ಬಳಿಸಿಕೊಂಡು ತಮ್ಮ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಳ್ಳೋದಕ್ಕೂ ಹಲವಾರು ಕಂಪನಿಗಳು ನಾ ಮುಂದು ತಾ ಮುಂದು ಅಂತ ಮುಂದಾಗಿವೆ.. ಹಲವಾರು ಕಂಪನಿಗಳ ರಾಯಭಾರಿಯಾಗಿರೋ ರಶ್ಮಿಕಾ ಮಂದಣ್ಣ ಏನೇ ಹೇಳಿದ್ರೂ ಫಾಲೋ ಮಾಡು ಅಭಿಮಾನಿಗಳು ಇದ್ದಾರೆ, ಹೀಗಾಗಿ ರಶ್ಮಿಕಾ ರಾಯಭಾರಿಯಾಗಿರೋ ಮ್ಯಾಕ್ ಡೊನಾಲ್ಡ್ಸ್ ಕಂಪನಿ ರಶ್ಮಿಕಾ ಹೆಸರಲ್ಲಿ ಊಟ ನೀಡುತ್ತಿದೆ.
ಮ್ಯಾಕ್ ಡೊನಾಲ್ಡ್ಸ್ ನಲ್ಲಿ ಸಿಗಲಿದೆ ‘ದಿ ರಶ್ಮಿಕಾ ಮೀಲ್’
ಅಮೆರಿಕಾ ಮೂಲದ ಕಂಪನಿಯಾಗಿರೋ ಮೆಕ್ ಡೊನಾಲ್ಡ್ಸ್ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ .. ಹೀಗಾಗಲೇ ದೇಶದ ಹಲವು ನಗರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿರೊ ಮ್ಯಾಕ್ ಡೊನೊಲ್ಡ್ಸ್ ತನ್ನ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಿಸಿಕೊಳ್ಳಲು ತನ್ನ ರಾಯಭಾರಿಯಾಗಿರೋ ರಶ್ಮಿಕಾ ಮಂದಣ್ಣ ಹೆಸರಲ್ಲಿ ಮೀಲ್ ಪರಿಚಯಿಸಿದೆ
ಇದನ್ನೂ ಓದಿ :ಕೋಟಿ ಕೋಟಿ ಒಡತಿ ಕೊಡಗಿನ ಬೆಡಗಿ: ಅಬ್ಬಾ..! ರಶ್ಮಿಕಾ ಮಂದಣ್ಣ ಬಳಿ ಇದೆ ಕಾಸ್ಟ್ಲಿ ಕಾರು, ಅರ'ಮನೆ’!
ಮೀಲ್ ಹೇಗೆ ತಿನ್ನಬೇಕು ಎಂದು ಹೇಳಿಕೊಟ್ಟ ರಶ್ಮಿಕಾ
ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಲೈಫ್ ಸ್ಟೈಲ್ ಸೇರಿದಂತೆ ಸಿನಿಮಾದ ಮಾಹಿತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ರಶ್ಮಿಕ ತಮ್ಮ ದಿನನಿತ್ಯದ ದಿನಚರಿಗಳನ್ನ ಅಭಿಮಾನಿಗಳ ಜೊತೆಗೆ ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಳ್ತಾರೆ. ಹೀಗಾಗಿಯೇ ರಶ್ಮಿಕಾರನ್ನ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ಫಾಲೋ ಕೂಡ ಮಾಡ್ತಾರೆ.
ಮೊದಲು ಸ್ಪೈಸೀ ಫ್ರೈಡ್ ಚಿಕನ್ ತಿನ್ನಬೇಕು. ಆನಂತರ ಮಿಕ್ಸ್ ಸ್ಪೈಸಿ ಚಿಕನ್ ಬರ್ಗರ್ ಜೊತೆ ಪಿರಿಪಿರಿ ಫ್ರೈಸ್ ಸೇವಿಸಬೇಕು. ಆ ಮೇಲೆ ನಿಂಬೂ ಫಿಜ್ ಕುಡಿಯಬೇಕು. ಕೊನೆಯದಾಗಿ ಮ್ಯಾಕ್ ಫ್ಲರಿ ಐಸ್ ಕ್ರೀಮ್ ಸವಿಯಬೇಕು’ ಎಂದು ರಶ್ಮಿಕಾ ಮಂದಣ್ಣ ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರೋ ವಿಡಿಯೋದಲ್ಲಿ ವಿವರಿಸಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನ ಅಂತ ಇರೋವಾಗ, ರಶ್ಮಿಕಾ ಹೆಸರು ಉಪಯೋಗಿಸಿಕೊಂಡು, ವಿವಿಧ ಕಂಪನಿಗಳು ತಮ್ಮ ವ್ಯಾಲ್ಯೋ ಹೆಚ್ಚಿಸಿಕೊಳ್ಳುತ್ತಿವೆ.
ಇದನ್ನೂ ಓದಿ :ಕಿರಿಕಿರಿ ಮಾಡೀರಾ ಹುಷಾರ್...! ಹೇಗೆ ಜಾಡಿಸ್ತಾರೆ ಗೊತ್ತಾ Rashmika Mandanna
ಇನ್ನೂ ರಶ್ಮಿಕಾ ಮಂದಣ್ಣ ಕೇವಲ ಜಾಹೀರಾತುಗಳಲ್ಲಿ ಮಾತ್ರವಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಕೂಡ ಆದ್ದಾರೆ. ಟಾಲಿವುಡ್ ನಲ್ಲಿ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ 'ಪುಷ್ಪ' ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ರಶ್ಮಿಕಾ ಲುಕ್ ಮಾತ್ರ ತುಂಬ ಡಿಫರೆಂಟ್ ಆಗಿದೆ. ಡಿಗ್ಲಾಮ್ ಅವತಾರ ತಾಳಿರುವ ರಶ್ಮಿಕಾ ಪಕ್ಕಾ ಹಳ್ಳಿ ಹೆಂಗಸಿನಂತೆ ಕಾಣಿಸಿಕೊಂಡಿದ್ದಾರೆ. ಇನ್ನೂರಶ್ಮಿಕಾ, ವಿಕ್ಕಿ ಕೌಶಲ್ ಜೊತೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗಳಿಗೆ ಒಳಗಾಗಿದ್ದರು. ಹಾಗೂ ಇತ್ತೀಚೆಗೆ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಮೊದಲ ಚಿತ್ರ 'ಮಿಷನ್ ಮಜ್ನು' ಚಿತ್ರೀಕರಣವನ್ನು ಮುಗಿಸಿ, 'ಗುಡ್ಬೈ' ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅಲ್ಲದೇ ಮಾಲಿವುಡ್ ಸ್ಟಾರ್ ದುಲ್ಖರ್ ಸಲ್ಮಾನ್ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ