ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್ವುಡ್ನಿಂದ ಆದರೂ ಹೆಸರು ಮಾಡುತ್ತಿರುವುದು ಮಾತ್ರ ಟಾಲಿವುಡ್ನಲ್ಲಿ. ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ಟಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ದಿನೇ ದಿನೇ ರಶ್ಮಿಕಾ ಅವರಿಗೆ ತೆಲುಗಿನಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ಟಾಲಿವುಡ್ನ ಸ್ಟಾರ್ ನಟರಾದ ಮಹೇಶ್ ಬಾಬು, ನಿತಿನ್, ನಾನಿ, ನಾಗಾರ್ಜುನ ಸೇರಿದಂತೆ ಸಾಕಷ್ಟು ಮಂದಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇಅಲ್ಲ, ಅಲ್ಲು ಅರ್ಜುನ್ ಜೊತೆ ಈಗ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆ ಸಹ ನಟಿಸುತ್ತಿದ್ದಾರೆ. ಬಾಲಿವುಡ್ನಿಂದ ಅವಕಾಶ ಅರಸಿ ಬಂದರೂ ಅದನ್ನು ನಯವಾಗಿ ನಿರಾಕರಿಸಿರುವ ಲಿಲ್ಲಿ, ಹೆಚ್ಚಾಗಿ ತೆಲುಗು ಸಿನಿಮಾಗಳತ್ತ ಗಮನ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಇರಬೇಕು ರಶ್ಮಿಕಾ ಹೈದರಾಬಾದಿನಲ್ಲಿ ಮನೆ ತೆ್ಗೆದುಕೊಂಡು ಸೆಟಲ್ ಆಗುವ ನಿರ್ಧಾರ ಮಾಡಿರುವುದು. ಈ ಹಿಂದೆ ಈ ಕುರಿತಾಗಿ ಮಾತನಾಡಿದ್ದರು ರಶ್ಮಿಕಾ.
ಐಟಿ ದಾಳಿ ನಂತರ ರಶ್ಮಿಕಾ ಮಂದಣ್ಣಗೆ ಅದೃಷ್ಟ ಖುಲಾಯಿಸಿದಂತಿದೆ. ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಈಗ ಮುಟ್ಟಿದೆಲ್ಲ ಚಿನ್ನ ಆಗುತ್ತಿದೆ. ಮಾಡಿದ ಸಿನಿಮಾಗಳೆಲ್ಲ ಬಾಕ್ಸಾಫಿಸ್ನಲ್ಲಿ ಸದ್ದು ಮಾಡುವುದರ ಜೊತೆಗೆ ಅವರಿಗೆ ಹೊಸ ಸಿನಿಮಾಗಳ ಆಫರ್ ಸಹ ಸಾಲು ಸಾಲಾಗಿ ಅರಸಿ ಬರುತ್ತಿವೆ. ಇದಕ್ಕೆ ಇರಬೇಕು ಕಿರಿಕ್ ಹುಡುಗಿ ಈಗ ಹೊಸ ಆಸ್ತಿ ಖರೀದಿಸಿರೋದು.
ರಶ್ಮಿಕಾ ಮನೆ ಮೇಲೆ ಐಟಿ ದಾಳಿ ನಂತರ ಅದೃಷ್ಟ ಖುಲಾಯಿಸಿದಂತಿದೆ. ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಈಗ ಮುಟ್ಟಿದೆಲ್ಲ ಚಿನ್ನ ಆಗುತ್ತಿದೆ. ಮಾಡಿದ ಸಿನಿಮಾಗಳೆಲ್ಲ ಬಾಕ್ಸಾಫಿಸ್ನಲ್ಲಿ ಸದ್ದು ಮಾಡುವುದರ ಜೊತೆಗೆ ಅವರಿಗೆ ಹೊಸ ಸಿನಿಮಾಗಳ ಆಫರ್ ಸಹ ಸಾಲು ಸಾಲಾಗಿ ಅರಸಿ ಬರುತ್ತಿವೆ. ಇದಕ್ಕೆ ಇರಬೇಕು ಕಿರಿಕ್ ಹುಡುಗಿ ಈಗ ಹೊಸ ಆಸ್ತಿ ಖರೀದಿಸುವ ಆಲೋಚನೆಯಲ್ಲಿದ್ದರು.
'ಭೀಷ್ಮ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ರಶ್ಮಿಕಾ, ಇತ್ತೀಚೆಗಷ್ಟೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮನೆ ಖರೀದಿಸಿ, ಹೈದರಾಬಾದಿನಲ್ಲೇ ನೆಲೆಸುವ ಕುರಿತು ಮಾತನಾಡಿದ್ದರು. ಈಗ ಆ ಮಾತು ನಿಜವಾಗಿದೆ. ಹೈದರಾಬಾದಿನ ಗಚ್ಚಿಬೌಲಿ ಪ್ರದೇಶದಲ್ಲಿ ಐರಾಷಾಮಿ ಮನೆ ಖರೀದಿಸಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ನಲ್ಲೀಗ ಹರಿದಾಡುತ್ತಿದೆ.
ಇದನ್ನೂ ಓದಿ:ಉಪೇಂದ್ರ-ಹರಿಪ್ರಿಯಾ ಅಭಿನಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್..!
ಒಂದು ಸಿನಿಮಾಗೆ ಹತ್ತಿರ ಹತ್ತಿರ ಕೋಟಿ ಸಂಭಾವನೆ ಪಡೆಯುವ ರಶ್ಮಿಕಾ ಈಗ, ದುಬಾರಿ ಬೆಲೆ ತೆತ್ತು ಮನೆ ಖರೀದಿ ಮಾಡಿದ್ದಾರಂತೆ. ಆದರೆ ಮನೆಗೆ ಎಷ್ಟು ಕೋಟಿ ನೀಡಿದ್ದಾರೆ ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಕೈಯಲ್ಲಿ ಮತ್ತೆರಡು ತೆಲುಗು ಚಿತ್ರಗಳಿವೆಯಂತೆ. ಇಸು ಇನ್ನೂ ಚರ್ಚೆಯ ಹಂತದಲ್ಲಿದ್ದು, ಎಲ್ಲ ಸರಿಹೋದರೆ, ಅದಕ್ಕೂ ಲಿಲ್ಲಿ ಓಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಲಾಕ್ಡೌನ್ ಆರಂಭವಾದಾಗಿನಿಂದ ತಮ್ಮ ಕುಟುಂಬದೊಂದಿಗೆ ಆರಾಮಾಗಿ ಕಾಲ ಕಳೆಯುತ್ತಿರುವ ರಶ್ಮಿಕಾ, ತಮ್ಮ ತೋಟದಲ್ಲಿ ತಂಗಿ ಜೊತೆ ಅಡ್ಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಮುದ್ದಿನ ತಂಗಿ ಜೊತೆ ಸಖತ್ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದು, ಅವುಗಳನ್ನು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲೂ ಹಂಚಿಕೊಳ್ಳುತ್ತಿದ್ದಾರೆ. ರಶ್ಮಿಕಾ ಅವರ ಪುಷ್ಪ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಆರಂಭವಾಗುವಂತೆ ಕಾಣುತ್ತಿಲ್ಲ. ಈಗಾಗಲೇ ಪೋಸ್ಟರ್ನಿಂದ ಸದ್ದು ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣಕ್ಕಾಗಿ, ಈಗ ಚಿತ್ರತಂಡ ಲೋಕೇಷನ್ ಹುಡುಕುತ್ತಿದೆ. ಇದು ಮುಗಿದ ನಂತರವಷ್ಟೇ ಪುಷ್ಪ ಚಿತ್ರ ಸೆಟ್ಟೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ