ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುವ ಕನ್ನಡದ ನಟಿಯಾಗಿದ್ದಾರೆ. ಎಷ್ಟೇ ಟ್ರೋಲ್ ಮಾಡಿದರೂ, ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವ ರಶ್ಮಿಕಾ ಇತ್ತೀಚೆಗೆ ಫ್ಯಾನ್ಸ್ಗಾಗಿ ಸಖತ್ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ರಶ್ಮಿಕಾ ಮಂದಣ್ಣ ಫಿಟ್ನೆಸ್ ಫ್ರೀಕ್ ಅನ್ನೋ ವಿಷಯ ತಿಳಿದಿದ್ದೇ. ರಶ್ಮಿಕಾ ಯಾವೆಲ್ಲ ರೀತಿಯ ಕಷ್ಟದ ವರ್ಕೌಟ್ಗಳನ್ನು ಮಾಡುತ್ತಾರೆ ಅನ್ನೋದು ಅವರು ಹಂಚಿಕೊಳ್ಳುವ ಫಿಟ್ನೆಸ್ ವಿಡಿಯೋಗಳನ್ನು ನೋಡಿಯೇ ಹೇಳಬಹುದು. ಪರ್ಸನಲ್ ತರಬೇತುದಾರರ ಜೊತೆ ಸದಾ ಅಭ್ಯಾಸ ನಿರತರಾಗಿರುತ್ತಾರೆ. ಈಗಲೂ ಸಹ ಲಾಕ್ಡೌನ್ನಲ್ಲಿ ಮನೆಯಲ್ಲಿದ್ದಾಗಲೂ ರಶ್ಮಿಕಾ ನಿತ್ಯ ವ್ಯಾಯಾಮ ಮಾಡುತ್ತಿದ್ದರು. ಇನ್ನು ಈಗಷ್ಟೆ ಹೈದರಾಬಾದಿಗೆ ಹೋಗಿದ್ದು, ಅಲ್ಲಿಯೂ ತಮ್ಮ ಸ್ನೇಹಿತೆ ಜೊತೆ ಸೇರಿ ಫುಲ್ ವರ್ಕೌಟ್ ಆರಂಭಿಸಿದ್ದಾರೆ. ನಿತ್ಯದ ವ್ಯಾಯಾಮ ಮಾಡಲು ಈಗ ಬೀಚ್ಗೆ ಹೋಗುತ್ತಿದ್ದಾರೆ ಲಿಲ್ಲಿ.
ಇಲ್ಲಿಯವರೆಗೆ ರಿಲ್ಯಾಕ್ಸ್ ಆಗಲು ಬೀಚ್ಗೆ ಹೋಗುತ್ತಿದ್ದ ರಶ್ಮಿಕಾ ಈಗ ಕಡಲ ಕಿನಾರೆಯಲ್ಲಿ ವರ್ಕೌಟ್ ಮಾಡಲು ಆರಂಭಿಸಿದ್ದಾರೆ. ಮೊದಲು ಬೀಚ್ನಲ್ಲಿ ವ್ಯಾಯಮ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದ ರಶ್ಮಿಕಾ ಈಗ ಅದರ ಫುಲ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ