• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rashmika Mandanna: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ರಶ್ಮಿಕಾ, ಸಿಂಪಲ್ ಲುಕ್ ನಲ್ಲಿ ಕಂಗೊಳಿಸಿದ ನ್ಯಾಷನಲ್​ ಕ್ರಶ್

Rashmika Mandanna: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ರಶ್ಮಿಕಾ, ಸಿಂಪಲ್ ಲುಕ್ ನಲ್ಲಿ ಕಂಗೊಳಿಸಿದ ನ್ಯಾಷನಲ್​ ಕ್ರಶ್

ಸ್ನೇಹಿತೆಯ ಮದುವೆಗೆ ಬೆಂಗಳೂರಿಗೆ ಬಂದ ರಶ್ಮಿಕಾ

ಸ್ನೇಹಿತೆಯ ಮದುವೆಗೆ ಬೆಂಗಳೂರಿಗೆ ಬಂದ ರಶ್ಮಿಕಾ

ಸ್ನೇಹಿತೆಯ ಮದುವೆಗಾಗಿ ರಶ್ಮಿಕಾ ಬೆಂಗಳೂರಿಗೆ ಆಗಮಿಸಿದ್ದರು. ಫ್ರೆಂಡ್ಸ್ ಮದುವೆಯಲ್ಲಿ ಪಾಲ್ಗೊಂಡು ವಧು-ವರರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ವಿಶೇಷ ಸಾಲುಗಳನ್ನು ಸಹ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೆಳತಿ ಮದುವೆಗೆ ಸಿಂಪಲ್ಲಾಗಿ ಸೀರೆ ಉಟ್ಟು ಬಂದಿದ್ದ ರಶ್ಮಿಕಾಳ ಲುಕ್ಕಿಗೆ ಹಲವಾರು ಲೈಕ್ಸ್, ಕಾಮೆಂಟ್ಸ್ ಬಂದಿವೆ.

ಮುಂದೆ ಓದಿ ...
  • Share this:

‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದ (Cinema) ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ (Entry) ಮಾಡಿದ ಕೊಡಗಿನ ಕುವರಿ, ಕರ್ನಾಟಕದ ಸುಂದರಿ ರಶ್ಮಿಕಾ ಮಂದಣ್ಣ (Rashmika Mandanna of Karnataka) ಸದ್ಯ ಟಾಲಿವುಡ್ (Tollywood) ಸೇರಿ ಬಾಲಿವುಡ್ ನಲ್ಲೂ (Bollwood) ಸಖತ್ ಮಿಂಚುತ್ತಿದ್ದಾರೆ. ನ್ಯಾಷನಲ್ ಕ್ರಷ್ (National Crush) ಎಂದೇ ಖ್ಯಾತರಾಗಿರುವ ರಶ್ಮಿಕಾ ನಟನೆ ಮತ್ತು ತಮ್ಮ ಲುಕ್ ನಿಂದಲೇ (Look) ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಡಿಮೆ ಸಿನಿ ಪಯಣದಲ್ಲಿ (Cini Journey) ಅತಿ ಹೆಚ್ಚು ನೇಮ್ (Name), ಫೇಮ್ ಗಳಿಸಿರುವ (Fame) ರಶ್ಮಿಕಾ ಪ್ರಸ್ತುತ ಭಾರಿ ಬೇಡಿಕೆ (Demand) ಇರುವ ನಟಿ (Acrtess). ಸಿನಿಮಾದ ಜೊತೆಜೊತೆಗೆ ಜಾಹೀರಾತು (Advertisemnet) ಲೋಕವನ್ನೂ ಸಹ ರಶ್ಮಿಕಾ ಆಳುತ್ತಿದ್ದಾರೆ.


ಸಾಲು ಸಾಲು ಚಿತ್ರಗಳು, ಜಾಹೀರಾತುಗಳು, ಸ್ಟಾರ್ ಪಟ್ಟ ಇದೆಲ್ಲದರ ನಡುವೆಯೂ ನಟಿ ರಶ್ಮಿಕಾ ಫ್ಯಾಮಿಲಿ, ಫ್ರೆಂಡ್ಸ್ ಗಳಿಗಾಗಿ ಕೊಂಚ ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಕೊಡಗಿನಲ್ಲಿ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿದ್ದ ರಶ್ಮಿಕಾ ಈಗ ಬೆಂಗಳೂರಿನಲ್ಲಿರುವ ಮತ್ತೊಬ್ಬ ಸ್ನೇಹಿತೆಯ ಮದುವೆಗೆ ಆಗಮಿಸಿ ವಧು-ವರರಿಗೆ ಶುಭಕೋರಿದ್ದಾರೆ.


ಸ್ನೇಹಿತೆಯ ಮದುವೆಗೆ ಬೆಂಗಳೂರಿಗೆ ಬಂದ ಕಿರಿಕ್ ಬೆಡಗಿ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹುಟ್ಟೂರಾದ ಕೊಡಗಿಗೆ ತೆರಳಿ ಅಲ್ಲಿ ಅವರ ಬಾಲ್ಯ ಸ್ನೇಹಿತೆ ರಾಗಿಣಿಯ ಮದುವೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದವು. ಮದುವೆಯಲ್ಲಿ ರಶ್ಮಿಕಾ ಕೊಡಗಿನ ಶೈಲಿಯಲ್ಲಿ ಸೀರೆ ಉಟ್ಟು ಮಿಂಚಿದ್ದರು. ಸ್ನೇಹಿತರು ಸೇರಿ ಕುಟುಂಬದವರೊಟ್ಟಿಗೆ ಕ್ಲಿಕ್ಕಿಸಿ ಕೊಂಡಿದ್ದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದರು. ಕೊಡಗಿನ ಶೈಲಿಯಲ್ಲಿ ಅಲಂಕಾರ ಮಾಡಿಕೊಂಡ ರಶ್ಮಿಕಾ ಲುಕ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದರು.



ಸಿಂಪಲ್ ಆಗಿ ರೆಡಿ ಆದ ರಶ್ಮಿಕಾ
ಇದೀಗ ಮತ್ತೊಬ್ಬ ಸ್ನೇಹಿತೆಯ ಮದುವೆಗಾಗಿ ರಶ್ಮಿಕಾ ಬೆಂಗಳೂರಿಗೆ ಆಗಮಿಸಿದ್ದರು. ಫ್ರೆಂಡ್ಸ್ ಮದುವೆಯಲ್ಲಿ ಪಾಲ್ಗೊಂಡು ವಧು-ವರರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ವಿಶೇಷ ಸಾಲುಗಳನ್ನು ಸಹ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೆಳತಿ ಮದುವೆಗೆ ಸಿಂಪಲ್ಲಾಗಿ ಸೀರೆ ಉಟ್ಟು ಬಂದಿದ್ದ ರಶ್ಮಿಕಾಳ ಲುಕ್ಕಿಗೆ ಹಲವಾರು ಲೈಕ್ಸ್, ಕಾಮೆಂಟ್ಸ್ ಬಂದಿವೆ.


ಇದನ್ನೂ ಓದಿ: Deepika Padukone: ಇದೇನು ಡ್ರೆಸ್ಸಾ, ಜಾತ್ರೆ ಟೆಂಟಾ? ದೀಪಿಕಾ ಬಟ್ಟೆ ನೋಡಿ ನೆಟ್ಟಿಗರಿಂದ ಬೇಕಾಬಿಟ್ಟಿ ಕಾಮೆಂಟ್!


ಬೆಂಗಳೂರಿನಲ್ಲಿ ಮೇ 25ರಂದು ನಡೆದ ಸ್ನೇಹಿತೆಯ ಮದುವೆಯಲ್ಲಿ ನಟಿ ಭಾಗಿಯಾಗಿದ್ದರು. ಬಳಿಕ ಮದುವೆಯಲ್ಲಿ ಭಾಗಿಯಾದ ಪೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ನೀವು ಭೇಟಿಯಾದ ದಿನದಿಂದ, ನೀವು ಸ್ನೇಹಿತರಾಗುವ ದಿನದವರೆಗೆ ಮತ್ತು ನೀವು ಡೇಟಿಂಗ್ ಮಾಡಿದ ದಿನದಿಂದ ಮದುವೆ ಆಗುವವರೆಗೂ ಸಾಕ್ಷಿಯಾಗಿದ್ದೇನೆ. ನಾನು ನಿಮ್ಮಿಬ್ಬರನ್ನು ಪ್ರೀತಿಸುತ್ತೇನೆ. ನೀವು ನನ್ನ ಜೀವನದಲ್ಲಿ ಇರುವುದು ಖುಷಿಯ ವಿಚಾರ," ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.


ಕರಣ್ ಜೋಹರ್ ಹುಟ್ಟು ಹಬ್ಬದ ಪಾರ್ಟಿಯಲ್ಲೂ ಭಾಗಿ
ಮದುವೆ ಮುಗಿಸಿಕೊಂಡು ಮತ್ತೆ ಅದೇ ದಿನ ಬಾಲಿವುಡ್ ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ಹುಟ್ಟು ಹಬ್ಬದ ಪಾರ್ಟಿಯಲ್ಲೂ ರಶ್ಮಿಕಾ ಭಾಗಿಯಾಗಿದ್ದರು. ಇದು ಕರಣ್ ಅವರ 50 ನೇ ಹುಟ್ಟು ಹಬ್ಬವಾಗಿದ್ದರಿಂದ ಪಾರ್ಟಿಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.


ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಕಾಜೋಲ್, ರಾಣಿ ಮುಖರ್ಜಿ, ರವೀನಾ ಟಂಡನ್, ಜೂಹಿ ಚಾವ್ಲಾ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್, ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಸೇರಿ ಅನೇಕ ತಾರೆಯರ ದಂಡೇ ನೆರೆದಿತ್ತು. ಪಾರ್ಟಿಯಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣುತ್ತಿದ್ದು ಎಲ್ಲಾ ನಟಿಯರ ಮಧ್ಯೆಯೂ ಕಣ್ಣು ಕುಕ್ಕುವಂತೆ ರೆಡಿಯಾಗಿದ್ದರು.


ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾಗಳು
ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದು, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ' ಸಕ್ಸಸ್‌ನಲ್ಲಿರುವ ನಟಿ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸಿರುವ 'ಮಿಷನ್ ಮಜ್ನು' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.


ಇದನ್ನೂ ಓದಿ: Rashmika Mandanna: ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ರಶ್ಮಿಕಾ, ಏನ್ ಸಖತ್ತಾಗಿ ರೆಡಿ ಆಗಿದಾರೆ ನೋಡಿ

top videos


    ಇದಾದ ಬಳಿಕ ವಿಕಾಶ್ ಬಹ್ಲ್ ನಿರ್ದೇಶನದ 'ಗುಡ್ ಬೈ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಮತ್ತು ರಣಬೀರ್ ಕಪೂರ್ ಗೆ ನಾಯಕಿಯಾಗಿ ಅನಿಮಲ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟಾಲಿವುಡ್‌ನಲ್ಲಿ 'ಪುಷ್ಪ 2' ಚಿತ್ರ ತಯಾರಾಗುತ್ತಿದ್ದು, ಆ ಸಿನಿಮಾದ ಚಿತ್ರೀಕರಣದಲ್ಲಿ ಕನ್ನಡದ ಕುವರಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

    First published: