Rashmika Mandanna: ಯಾವ ರೀತಿಯ ಪಾತ್ರಗಳಲ್ಲಿ ನೋಡಲು ಬಯಸುತ್ತೀರಾ ಎಂದಿದ್ದ ರಶ್ಮಿಕಾ: ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ..!

ಈಗ ಮತ್ತೆ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಕೊಂಚ ಕೆಲಸ ಕೊಟ್ಟಿದ್ದರು. ತನ್ನನ್ನು ಯಾವ ರೀತಿಯ ಪಾತ್ರ ಹಾಗೂ ಸಿನಿಮಾಗಳಲ್ಲಿ ನೋಡಲು ಬಯಸುತ್ತೀರಾ ಎಂದು ಲಿಲ್ಲಿ ತಮ್ಮ ಟ್ವಿಟರ್​ನಲ್ಲಿ ಅಭಿಮಾನಿಗಳನ್ನು ಕೇಳಿದ್ದರು.

Anitha E | news18-kannada
Updated:June 3, 2020, 8:55 PM IST
Rashmika Mandanna: ಯಾವ ರೀತಿಯ ಪಾತ್ರಗಳಲ್ಲಿ ನೋಡಲು ಬಯಸುತ್ತೀರಾ ಎಂದಿದ್ದ ರಶ್ಮಿಕಾ: ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ..!
ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ತುಂಬಾ ಕಡಿಮೆ ಸಮಯದಲ್ಲಿ ಸ್ಟಾರ್​ ಪಟ್ಟಕ್ಕೇರಿದ ನಟಿ. ದಕ್ಷಿಣ ಭಾರತದ ಬೇಡಿಕೆ ಇರುವ ನಟಿಯರಲ್ಲಿ ರಶ್ಮಿಕಾ ಸಹ ಒಬ್ಬರು. ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್​ ಸಿನಿಮಾಗಳಲ್ಲೇ ಕಾಣಿಸಿಕೊಳ್ಳುವ ರಶ್ಮಿಕಾಗೆ ತೆಲುಗು ಅಭಿಮಾನಿಗಳು ಹೆಚ್ಚಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಅವರ ಫ್ಯಾನ್​ ಪೇಜ್​ ನೋಡಿದರೆ, ಅವರಿಗಿರುವ ಅಭಿಮಾನಿ ಬಳಗದ ಬಗ್ಗೆ ಅಂದಾಜಿಸಬಹುದಾಗಿದೆ. ಲಾಕ್​ಡೌನ್​ನಲ್ಲಿ ಸಿನಿಮಾ ಕೆಲಸಗಳು ನಿಂತಿರುವ ಕಾರಣದಿಂದ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ.

Nice Reply from Rashmika Mandanna in Twitter for one who trolls her
ರಶ್ಮಿಕಾ


ರಶ್ಮಿಕಾ ಸಹ ತಮ್ಮ ಅಭಿಮಾನಿಗಳನ್ನು ತುಂಬಾ ಬ್ಯುಸಿಯಾಗಿಟ್ಟಿದ್ದಾರೆ. ಈ ಹಿಂದೆ ತಮಗೆ ಬೇರೆ ಹೆಸರಿಡುವುದಾದರೆ ಏನೆಂದು ಕರೆಯಲು ಬಯಸುತ್ತೀರಿ ಎಂದು ಅಭಿಮಾನಿಗಳಿಗೆ ಕೇಳಿದ್ದರು. ಅದಕ್ಕೆ ಅಭಿಮಾನಿಗಳಿಂದ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದವು.

ಇದನ್ನೂ ಓದಿ: ಏಕ್ತಾ ಕಪೂರ್ ಮನೆಯಲ್ಲೂ ಅಲ್ಲು ಅರ್ಜುನ್​ರ ಬುಟ್ಟಬೊಮ್ಮ ಹಾಡಿನದ್ದೇ ಸದ್ದು..!

ಈಗ ಮತ್ತೆ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಕೊಂಚ ಕೆಲಸ ಕೊಟ್ಟಿದ್ದರು. ತನ್ನನ್ನು ಯಾವ ರೀತಿಯ ಪಾತ್ರ ಹಾಗೂ ಸಿನಿಮಾಗಳಲ್ಲಿ ನೋಡಲು ಬಯಸುತ್ತೀರಾ ಎಂದು ಲಿಲ್ಲಿ ತಮ್ಮ ಟ್ವಿಟರ್​ನಲ್ಲಿ ಅಭಿಮಾನಿಗಳನ್ನು ಕೇಳಿದ್ದರು.

What kind of movies and characters do you want to see me in and as in the future?😉 I am curious. Give me a reference - best! 🐒


ರಶ್ಮಿಕಾರ ಪ್ರಶ್ನೆಗೆ ಸಾವಿರಾರು ಮಂದಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ತುಂಬಾ ಜನರು ವಿಜಯ್​ ದೇವರಕೊಂಡ ಅವರೊಂದಿಗೆ ಮತ್ತೆ ಅಭಿನಯಿಸುವಂತೆ ಕೇಳಿದರೆ, 'ಲಿಲ್ಲಿ' ಹಾಗೂ 'ಗೀತಾ' ಪಾತ್ರಗಳಲ್ಲಿ ನೋಡಲು ಬಯಸುತ್ತಿದ್ದಾರೆ.
ಇನ್ನೂ ಕೆಲವರು ಅನುಷ್ಕಾ ನಟಿಸಿದ ದೇವಸೇನಾ ಪಾತ್ರದಲ್ಲಿ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ಅಭಿನಯಿಸಿ ಎಂದು ಉತ್ತರಿಸಿದ್ದಾರೆ.ಲಾಕ್​ಡೌನ್​ನಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಅಭದ್ರತೆ ಕಾಡಿತ್ತು ಎಂದಿದ್ದ ರಶ್ಮಿಕಾ, ಅದನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಅದಕ್ಕಾಗಿಯೇ  ಈಗಿನಿಂದಲೇ ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ಬಗ್ಗೆ ಅಭಿಮಾನಿಗಳಿಂದ ಸಲಹೆ ಪಡೆಯುತ್ತಿದ್ದು, ಅವರ ಅಭಿರುಚಿಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.

Alia Bhatt: ಹೊಸ ಕಚೇರಿಗಾಗಿ ಇಂಟೀರಿಯರ್​ ಡಿಸೈನರ್​ ಆದ ಆಲಿಯಾ ಭಟ್​..!First published: June 3, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading